ಚುನಾವಣೆ ಹೊಸ್ತಿಲಲ್ಲಿ ಪಕ್ಷಾಂತರ ಪರ್ವ, ಶಿರಾದಲ್ಲಿ ಕಮಲ ಬೇರು ಗಟ್ಟಿಗೊಳಿಸಲು ಅವಿರತ ಪ್ರಯತ್ನ

2020ರಲ್ಲಿ ನಡೆದ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಇತಿಹಾಸ ಬರೆದಿತ್ತು.‌ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿದ್ದ ರಾಜೇಶ್ ಗೌಡ ಶಾಸಕರಾಗಿ ಗೆದ್ದಿದ್ದರು.  ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು.

BJP strategy to win more seats in in Sira constituency gow

ವರದಿ : ಮಹಂತೇಶ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ 

ತುಮಕೂರು (ಜ.24): 2020ರಲ್ಲಿ ನಡೆದ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಇತಿಹಾಸ ಬರೆದಿತ್ತು.‌ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿದ್ದ ರಾಜೇಶ್ ಗೌಡ ಶಾಸಕರಾಗಿ ಗೆದ್ದಿದ್ದರು.  ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿಯ ಘಾಟಾನುಘಟಿ ನಾಯಕರು ಹಾಗೂ ಸರ್ಕಾರದ ಬೆಂಬಲದ ಪರಿಣಾಮ ರಾಜೇಶ್ ಗೌಡ ಗೆಲುವಿನ ದಡ ಸೇರಿ, ಶಿರಾ ವಿಧಾನ ಕ್ಷೇತ್ರದ ಬಿಜೆಪಿ ಗೆಲುವು ಸಾಧಿಸಿತ್ತು. ಫಲಿತಾಂಶದ ಬಳಿಕ ಇದು ಶಾಸಕ‌ ರಾಜೇಶ್ ಗೌಡ ಗೆಲುವಲ್ಲ, ಬಿಜೆಪಿ ನಾಯಕರ ಹಾಗೂ ಸರ್ಕಾರದ ಸಂಘಟಿತ ಹೋರಾಟ ಗೆಲುವು ಎಂಬ ಮಾತುಗಳು ಕೇಳಿ ಬಂದಿತ್ತು.‌ ಇದೀಗ ಎರಡು ವರ್ಷದ ನಂತರ  ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗುತ್ತಿದೆ. ಹೀಗಾಗಿ ಶಿರಾ ಶಾಸಕ ರಾಜೇಶ್ ಗೌಡರ ಈಗ ತಮ್ಮ ಶಕ್ತಿ ಪ್ರದರ್ಶಿಸುವ ಜೊತೆಗೆ ಅಂದಿನ ವಿರೋಧಿಗಳಿಗೆ ಮಾತುಗಳಿಗೆ ಉತ್ತರ ಕೊಡುವ ಸಮಯ ಎರಡು ವರ್ಷಗಳ‌ ನಂತರ ಎದುರಾಗಿದೆ.  ಈ ಭಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ರಾಜೇಶ್ ಗೌಡರೇ ಏಕಾಂಕಿಯಾಗಿ ಹೋರಾಟ ನಡೆಸಿ ಸಾಮರ್ಥ್ಯ ಪ್ರದರ್ಶಿಸಬೇಕಾಗಿದೆ. ಹೀಗಾಗಿ   ಕ್ಷೇತ್ರದಲ್ಲಿ  ಏಕಾಂಕಿ ಹೋರಾಟ ನಡೆಸಿರುವ ಶಾಸಕ ರಾಜೇಶ್ ಗೌಡರು, ರಾಜಕೀಯ ಪಟ್ಟುಗಳ ಮೂಲಕ ಕಾಂಗ್ರೆಸ್ - ಜೆಡಿಎಸ್ ಪಕ್ಷಕ್ಕೆ ಟಾಂಗ್ ಕೊಡಲು ಮುಂದಾಗಿದ್ದಾರೆ.

ಎರಡು ಪಕ್ಷದಿಂದ 200 ಕ್ಕೂ ಹೆಚ್ಚು ಸ್ಥಳೀಯ ಮುಖಂಡರನ್ನು ಬಿಜೆಪಿಯತ್ತ ಸೆಳೆಯುವತ್ತ ಯಶಸ್ವಿಯಾಗಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನ ಭದ್ರಕೋಟೆಯಲ್ಲಿ ಮತ್ತೊಮ್ಮೆ ಬಿಜೆಪಿ ಅರಳಿಸುವ ಮೂಲಕ ಬಿಜೆಪಿಗೆ ಶಾಶ್ವತ ನೆಲೆ‌ಕಲ್ಪಿಸುವ  ತವಕದಲ್ಲಿ ಶಾಸಕ ಡಾ.ರಾಜೇಶ್ ಗೌಡ ಇದ್ದಾರೆ.

ಸಿದ್ದು ವಿರುದ್ಧ ಏಕಕಾಲಕ್ಕೆ ಬಿಜೆಪಿ ತ್ರಿಬಲ್‌ ಅಟ್ಯಾಕ್‌..!

250 ಮುಖಂಡರು ಬಿಜೆಪಿ ಸೇರ್ಪಡೆ : ಹುಬ್ಬೇರಿಸಿದ ಬಿಜೆಪಿ ಪಕ್ಷದ ವರ್ಚಸ್ಸು

ರಾಜ್ಯದಲ್ಲಿ ದಿನೇ ದಿನೇ ಚುನಾವಣೆ ಹತ್ತಿರವಾಗುತ್ತಿದ್ದ ಶಿರಾದಲ್ಲಿ ಮೂರು ಪಕ್ಷದ ಟಿಕೆಟ್ ಆಕಾಂಕ್ಷಿಗಳು ಆಕ್ಟೀವ್ ಆಗಿದ್ದಾರೆ. ಏತನ್ಮಧ್ಯೆ ಎರಡು ಪಕ್ಷಗಳನ್ನು ಹಿಂದಿಕ್ಕೆ ಅನ್ಯ  ಪಕ್ಷದ  ಮುಖಂಡರನ್ನು ಕಮಲದತ್ತ ಸೆಳೆಯುವಲ್ಲಿ ಡಾ. ರಾಜೇಶ್ ಗೌಡ ಒಂದು ಹೆಜ್ಜೆ ಮುಂದಿದ್ದಾರೆ.   ಶಾಸಕರ ಸ್ವಗ್ರಾಮ ಶಿರಾ ತಾಲ್ಲೂಕಿನ ಇಂದು ಚಿರತಹಳ್ಳಿ ಗ್ರಾಮದಲ್ಲಿ ಶಾಸಕ ಡಾ. ಸಿ. ಎಂ. ರಾಜೇಶ್ ಗೌಡ  ನೇತೃತ್ವದಲ್ಲಿ 250 ಹೆಚ್ಚು ಜನ ಕಾಂಗ್ರೆಸ್ ಹಾಗೂ ಜೆ.ಡಿ. ಎಸ್. ಪಕ್ಷಗಳನ್ನು ತೊರೆದು ಕಮಲ ಹಿಡಿದಿದ್ದಾರೆ. ಶಾಸಕರೆ ಅವರಿಗೆ ಕೇಸರಿ ಶಾಲು ಹಾಕಿ ಬಿಜೆಪಿ ಬಾವುಟ ನೀಡಿ ಬರಮಾಡಿ ಕೊಂಡಿದ್ದಾರೆ.

ಲಿಂಗಸುಗೂರು: ಟಿಕೆಟ್‌ಗೂ ಮುನ್ನವೇ ಅಖಾಡಕ್ಕಿಳಿದ ಆಕಾಂಕ್ಷಿಗಳು

ಬಿಜೆಪಿ ಅಸ್ಥಿತ್ವವೆ ಇಲ್ಲದ ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಲಮ ಅರಳಿಸಿದ  ಶಾಸಕ ಡಾ.ರಾಜೇಶ್ ಗೌಡ ಇದೀಗ ಸದೃಡವಾಗಿ ಪಕ್ಷ ಕಟ್ಟಲು, ಕಾರ್ಯಕರ್ತರ ಸೇರ್ಪಡೆಯ ಮೂಲಕ ಪಕ್ಷ ಸಂಘಟನೆಯಲ್ಲಿ ಫುಲ್ ಬ್ಯುಸಿಯಾಗುದ್ದಾರೆ.

Latest Videos
Follow Us:
Download App:
  • android
  • ios