ಲೋಕಸಭಾ ಚುನಾವಣೆ 2024: ವಾಯುವ್ಯ ದೆಹಲಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಲು ಬಿಜೆಪಿ ತಂತ್ರ..!

ಹಿಂದುತ್ವ ವಿಚಾರಧಾರೆ ಹೆಚ್ಚಿರುವ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಲು ಕೇಸರಿ ಪಕ್ಷ ತಂತ್ರಗಾರಿಕೆಯನ್ನ ಮುಂದುವರಿಸಿದೆ. ಆದ್ರೆ 10 ವರ್ಷಗಳಿಂದ ಕ್ಷೇತ್ರ ಬಿಜೆಪಿ ಕೈಯಲ್ಲಿದ್ದರೂ ಅಭಿವೃದ್ದಿ ವಿಚಾರದಲ್ಲಿ ಅಷ್ಟಕಷ್ಟೆ. ಈ ಅಸಮಾಧಾನ ಹಲವು ಕಡೆ ಕಾಣುತ್ತಿದೆ. ಇದೇ ವಿಚಾರದ ಹಿನ್ನೆಲೆಯಲ್ಲಿ ಬಿಜೆಪಿ, ಅಭ್ಯರ್ಥಿಯನ್ನು ಬದಲಾಯಿಸಿದೆ ಎನ್ನಲಾಗಿದೆ. 

BJP Strategy For Hat Trick Victory in Delhi North West Constituency in Lok Sabha Election 2024 grg

ನವದೆಹಲಿ(ಮೇ.23):  ಮತದಾನಕ್ಕೆ ಇನ್ನು ಕೇವಲ ಎರಡು ದಿನ ಬಾಕಿ ಇದೆ. ನವದೆಹಲಿಯಲ್ಲಿ ಮತದಾರರ ಮನಸ್ಸನ್ನು ಸೆಳೆಯಲು ರಾಜಕೀಯ ಪಕ್ಷಗಳು ಜಾತಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮತ್ತೊಂದು ಕಡೆ ಮೋದಿ, ರಾಹುಲ್ ಗಾಂಧಿ, ಕೇಜ್ರಿವಾಲ್ ತಮ್ಮ ಸಾಧನೆಗಳು, ಅಭಿಪ್ರಾಯಗಳನ್ನ ಜನರ ಮುಂದಿಟ್ಟು ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ದೆಹಲಿಯ 7 ಕ್ಷೇತ್ರಗಳಲ್ಲಿ ವಾಯುವ್ಯ ಮತಕ್ಷೇತ್ರವೂ ಒಂದು. ಇದು ಪರಿಶಿಷ್ಟಜಾತಿ ಮೀಸಲು ಕ್ಷೇತ್ರ. ವಿಸ್ತೀರ್ಣದ ದೃಷ್ಟಿಯಿಂದಲೂ ದೊಡ್ಡ ಕ್ಷೇತ್ರ. ನರೇಲಾ, ಬದ್ಲಿ, ರಿಥಾಲಾ, ಬವಾನಾ, ಮುಂಡ್ಕಾ, ನಾಗ್ಲೋಯ್, ಜಟ್ ಮಂಗೋಲ್‌ಪುರಿ, ಸುಲ್ತಾನ್‌ಪುರಿ ಮುಂತಾದ ಪ್ರದೇಶಗಳನ್ನು ಈ ಕ್ಷೇತ್ರ ಒಳಗೊಂಡಿದೆ.

ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಮತ್ತೆ ಮುಸ್ಲಿಂ ಅಸ್ತ್ರ

2008 ರಲ್ಲಿ  ಕ್ಷೇತ್ರ ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಸಂಸದೀಯ ಕ್ಷೇತ್ರ ಇದು. ದೆಹಲಿಯ ಅತ್ಯಂತ ಜನನಿಬಿಡ ಕ್ಷೇತ್ರ. ಸುಮಾರು 18 ಲಕ್ಷ ಮತದಾರರನ್ನು ಹೊಂದಿದೆ.  ಇನ್ನು ಚುನಾವಣೆಯ ಅಖಾಡಕ್ಕೆ ಬಂದ್ರೆ 2014 ರಲ್ಲಿ ಬಿಜೆಪಿಯಿಂದ ಸಂಸದರಾಗಿದ್ದ ಉದಿತ್ ರಾಜ್ ಈ ಬಾರಿ ಕಾಂಗ್ರೆಸ್‌ನಿಂದ ಅಖಾಡಕ್ಕೆ ಇಳಿದಿದ್ದಾರೆ. ಅದೇ ರೀತಿ ಹೊಸ ಮುಖಕ್ಕೆ ಮಣೆ ಹಾಕಿರುವ ಬಿಜೆಪಿ, ಯೋಗೇಂದರ್ ಚಂದೋಲಿಯಾರನ್ನು ಕಣಕ್ಕೆ ಇಳಿಸಿದೆ.

ಹಿಂದುತ್ವ ವಿಚಾರಧಾರೆ ಹೆಚ್ಚಿರುವ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಲು ಕೇಸರಿ ಪಕ್ಷ ತಂತ್ರಗಾರಿಕೆಯನ್ನ ಮುಂದುವರಿಸಿದೆ. ಆದ್ರೆ 10 ವರ್ಷಗಳಿಂದ ಕ್ಷೇತ್ರ ಬಿಜೆಪಿ ಕೈಯಲ್ಲಿದ್ದರೂ ಅಭಿವೃದ್ದಿ ವಿಚಾರದಲ್ಲಿ ಅಷ್ಟಕಷ್ಟೆ. ಈ ಅಸಮಾಧಾನ ಹಲವು ಕಡೆ ಕಾಣುತ್ತಿದೆ. ಇದೇ ವಿಚಾರದ ಹಿನ್ನೆಲೆಯಲ್ಲಿ ಬಿಜೆಪಿ, ಅಭ್ಯರ್ಥಿಯನ್ನು ಬದಲಾಯಿಸಿದೆ ಎನ್ನಲಾಗಿದೆ. ಅನುಭವ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಧ್ವನಿ ಎತ್ತಲು ನಮಗೆ ಮತ ನೀಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆ ಮಾಡುತ್ತಿದ್ದಾರೆ. 

Latest Videos
Follow Us:
Download App:
  • android
  • ios