Asianet Suvarna News Asianet Suvarna News

ಬಳ್ಳಾರಿಯಲ್ಲಿ 20ಕ್ಕೆ ಬಿಜೆಪಿ ST Rally; 10 ಲಕ್ಷ ಜನ ಭಾಗಿ : ತಿಪ್ಪರಾಜು ಹವಾಲ್ದಾರ್‌

  • ಬಳ್ಳಾರಿ: 20ಕ್ಕೆ ಬಿಜೆಪಿ ಎಸ್ಟಿರಾರ‍ಯಲಿ, 10 ಲಕ್ಷ ಜನ
  •  ನಡ್ಡಾ ಅವರಿಂದ ಸಮಾವೇಶಕ್ಕೆ ಚಾಲನೆ
bjp st community rally in Bellary on 20th of this month says tipparaju hawaldar rav
Author
First Published Nov 16, 2022, 12:42 PM IST

ಬೆಂಗಳೂರು (ನ.16) : ಬಳ್ಳಾರಿಯಲ್ಲಿ ಇದೇ ತಿಂಗಳ 20ರಂದು ನಡೆಯಲಿರುವ ಬಿಜೆಪಿ ಎಸ್ಟಿಮೋರ್ಚಾ ನವಶಕ್ತಿ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ರಾಜ್ಯ ಬಿಜೆಪಿ ಎಸ್ಟಿಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್‌ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉದ್ಘಾಟಿಸಲಿದ್ದಾರೆ. ಕೇಂದ್ರ ಪರಿಶಿಷ್ಟಪಂಗಡಗಳ ಕಲ್ಯಾಣ ಇಲಾಖೆ ಸಚಿವ ಅರ್ಜುನ್‌ ಮುಂಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ…, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

Jana Sankalpa Yatre: ಸಿಎಂ ಆಗಲು ಸಿದ್ರಾಮಣ್ಣ ಡಿಕೆಶಿ ಬೆಂಬಲ ಕೇಳಲಿ: ಸಿಎಂ

ರಾಜ್ಯದ ಎಸ್ಟಿಸಮುದಾಯದವರು ಈ ಸಮಾವೇಶದಲ್ಲಿ ಭಾಗವಹಿಸಿ ಮೀಸಲಾತಿ ಹೆಚ್ಚಳದ ವಿಜಯೋತ್ಸವ ಆಚರಿಸಲಿದ್ದಾರೆ. ಈ ಸಮಾವೇಶದಲ್ಲಿ 68ಕ್ಕೂ ಅಧಿಕ ಬಡುಕಟ್ಟು ಕಲಾ ತಂಡಗಳು ಪಾಲ್ಗೊಳ್ಳಲಿವೆ. ಈಗಾಗಲೇ ಮೀಸಲಾತಿ ಕುರಿತು ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿದ್ದು, ಅದಕ್ಕೆ ರಾಜ್ಯಪಾಲರ ಅಂಗೀಕಾರವೂ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

10 ಲಕ್ಷ ಜನ, 6200 ಬಸ್‌ ವ್ಯವಸ್ಥೆ:

ಈ ಸಮಾವೇಶಕ್ಕೆ ಕೊಪ್ಪಳ, ರಾಯಚೂರು, ಯಾದಗಿರಿ, ಚಿತ್ರದುರ್ಗ, ಬಳ್ಳಾರಿ, ಹಳೆ ಮೈಸೂರು, ಮಧ್ಯ ಕರ್ನಾಟಕದ ಸುತ್ತಲಿನ ಪ್ರದೇಶಗಳಿಂದ 6 ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಈ ಸಮಾವೇಶಕ್ಕೆ 4 ಲಕ್ಷ ಜನರು ಬರಲಿದ್ದಾರೆ. 6,200 ಬಸ್‌ ವ್ಯವಸ್ಥೆ ಮಾಡಲಾಗಿದೆ. 15ರಿಂದ 18 ಸಾವಿರ ಕ್ರೂಸರ್‌ ವಾಹನ ವ್ಯವಸ್ಥೆ ಇದೆ. ಬಳ್ಳಾರಿಯಲ್ಲಿ 24 ಕಡೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ… ಕುಮಾರ್‌ ಸುರಾನಾ ಸೇರಿದಂತೆ ಪಕ್ಷದ ಪ್ರಮುಖರು, ಸಚಿವರು ಸಮಾವೇಶದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದರು.

Uniform Civil Code: ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆಗೆ ಒತ್ತಡ!

ಇದೇ ವೇಳೆ, ರಾಷ್ಟ್ರಪತಿಗಳನ್ನಾಗಿ ದ್ರೌಪದಿ ಮುರ್ಮು ಅವರ ಆಯ್ಕೆ, ರಾಜ್ಯದಲ್ಲಿ ಪ್ರತ್ಯೇಕ ಎಸ್ಟಿಸಚಿವಾಲಯ ರಚನೆ, ಆದಿವಾಸಿ ಗೌರವ ದಿವಸ ಆಚರಣೆ ಮೂಲಕ ಆದಿವಾಸಿಗಳಿಗೆ ಗೌರವ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಎಸ್ಟಿಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ನಾಯ್ಕ ಮತ್ತು ಮಂಜುನಾಥ್‌ ಓಲೆಕಾರ ಸುದ್ದಿಗೋಷ್ಠಿಯಲ್ಲಿ ಇದ್ದರು.

Follow Us:
Download App:
  • android
  • ios