Asianet Suvarna News Asianet Suvarna News

ದೇಶದ ಪ್ರಜೆಗಳಲ್ಲಿ ದೇಶಭಕ್ತಿ ಹೆಚ್ಚಿಸುವುದಕ್ಕಾಗಿ ಹರ್‌ ಘರ್‌ ತಿರಂಗಾ ಅಭಿಯಾನ: ಜಗ್ಗೇಶ

ಪ್ರಪಂಚದ ದೊಡ್ಡ ರಾಷ್ಟ್ರಗಳಾದ ಅಮೆರಿಕ, ರಷ್ಯಾ ಮತ್ತು ಚೀನಾದೊಂದಿಗೆ ಮಾತನಾಡಿ, ಅವರನ್ನು ಸಾತ್ವಿಕರನ್ನಾಗಿಸುವ ಶಕ್ತಿ ಮೋದಿ ಅವರಲ್ಲಿದೆ: ಜಗ್ಗೇಶ

BJP Rajya Sabha Member Jaggesh Talks Over PM Narendra Modi grg
Author
Bengaluru, First Published Aug 14, 2022, 9:50 AM IST

ರಾಯಚೂರು(ಆ.14):  ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಶ್ರೀಗುರುರಾಯರ 351 ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆಯಲ್ಲಿ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ ಶನಿವಾರ ಭಾಗಿಯಾಗಿದ್ದರು. ಸುಕ್ಷೇತ್ರದ ಮಠಕ್ಕೆ ಆಗಮಿಸಿದ ಜಗ್ಗೇಶ ಶ್ರೀರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನದ ದರ್ಶನ, ನಂತರ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ಆಶೀರ್ವಾದವನ್ನು ಪಡೆ​ದ​ರು. ಈ ವೇಳೆ ಮಾತನಾಡಿದ ಅವರು ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ಸಮರ್ಥರು ಬೇಕು. ಪ್ರಪಂಚದ ದೊಡ್ಡ ರಾಷ್ಟ್ರಗಳಾದ ಅಮೆರಿಕ, ರಷ್ಯಾ ಮತ್ತು ಚೀನಾದೊಂದಿಗೆ ಮಾತನಾಡಿ, ಅವರನ್ನು ಸಾತ್ವಿಕರನ್ನಾಗಿಸುವ ಶಕ್ತಿ ಮೋದಿ ಅವರಲ್ಲಿದೆ ಎಂದರು.

ದೇಶದಾದ್ಯಂತ 75 ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ದೇಶದ ಪ್ರಜೆಗಳಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಚಿಕ್ಕಮಕ್ಕಳು ಸಹ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿಯುವುದರಿಂದ ದೇಶದ ಸ್ವಾತಂತ್ರ್ಯದ ಕುರಿತು ತಿಳಿದುಕೊಳ್ಳಲು ಆಸಕ್ತಿ ಮೂಡುತ್ತದೆ. ಮೇಧಾವಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಭಕ್ತಿಯನ್ನು ಹೆಚ್ಚಿಸಲು ಈ ಯೋಜನೆ ರೂಪಿಸಿದ್ದಾರೆ ಎಂದ ಹೇಳಿದರು.

ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಪ್ರಧಾನಿ ಮೋದಿ ಸಂತಸ!

ಸರ್ಕಾರ ರೂಪಿಸುವ ಅಷ್ಟೋ ಯೋಜನೆಗಳು ಜನಸಾಮಾನ್ಯರಿಗೆ ಗೊತ್ತಿರುವುದಿಲ್ಲ, ಅವುಗಳಲ್ಲಿ ಸರಿಯಾಗಿ ಓದಿ ತಿಳಿದುಕೊಳ್ಳದಕ್ಕೆ ಸಾಕಷ್ಟು ಅನುದಾನಗಳು ವಾಪಸ್ಸು ಹೋಗುತ್ತಿವೆ. ಹೀಗಾಗಿ ನಿಜವಾದ ಫಲಾನುಭವಿಗಳಿಗೆ ಯೋಜನೆಗಳ ಲಾಭವೇ ಸಿಗುವುದಿಲ್ಲ ಎಲ್ಲರು ಯೋಜನೆಗಳನ್ನು ಅರಿತು ಅವುಗಳ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ರಾಜ್ಯಸಭಾ ಸದಸ್ಯನಾಗಿರುವ ನಮಗೆ ಪ್ರಹ್ಲಾದ್‌ ಜೋಶಿ ಹಾಗೂ ಸಂತೋಷ ಜೀ ಅವರು ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದರು.

ಮಂತ್ರಾಲಯದಲ್ಲಿ ಏರೋಡ್ರಮ್‌: 

ಪ್ರತಿ ವರ್ಷ ರಾಯರ ಆರಾಧನೆಗೆ ಬಂದು ಹೋಗುವುದು ವಾಡಿಕೆಯಾಗಿದೆ. ಪ್ರಸ್ತುತ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಶ್ರೀಮಠದ ಘನತೆ ಗೌರವವು ಹೆಚ್ಚುತ್ತಿದೆ. ಇಂತಹ ಮಠಕ್ಕೆ ಒಂದು ಏರೋಡ್ರಮ್‌ ಬರಬೇಕು ಎನ್ನುವುದು ನನಗೆ ವೈಯಕ್ತಿಕವಾಗಿರುವ ದೊಡ್ಡ ಆಸೆಯಾಗಿದೆ. ನಾವೇನು ಮಾಡುವುದಿಲ್ಲ ರಾಯರೇ ಅದನ್ನು ಮಾಡಿಸುತ್ತಾರೆ, ಅವರ ಮೇಲಿ ಭಾರಹಾಕಿ ನಾನು ಈ ವಿಚಾರವಕ್ಕು ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.
 

Follow Us:
Download App:
  • android
  • ios