ಪ್ರವಾಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಒಬ್ಬರೇ ಪರಿಸ್ಥಿತಿ ನಿಭಾಯಿಸಿದರು. ಕೋವಿಡ್‌ ವೇಳೆ ಜನರ ಪ್ರಾಣ ಉಳಿಸಲು ಇಡೀ ಸರ್ಕಾರ ಪ್ರಯತ್ನಿಸಿತು. ಕಷ್ಟದ ಸಂದರ್ಭಗಳಲ್ಲಿ ಯಡಿಯೂರಪ್ಪ ರಾಜ್ಯ ಕಾಪಾಡಿದ್ದಾರೆ. ಆದರೆ ಅವರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಎಂದು ಬೊಮ್ಮಾಯಿ ಹೆಸರೆತ್ತದೆ ಪ್ರಶ್ನಿಸಿದ ಪ್ರತಾಪ್‌ ಸಿಂಹ 

ಮೈಸೂರು(ಜೂ.17): ಯಡಿಯೂರಪ್ಪ ಪ್ರಯತ್ನದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಅವರ ನಂತರ ಬಂದವರು ಮಾಡಿದ್ದೇನು ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಪ್ರವಾಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಒಬ್ಬರೇ ಪರಿಸ್ಥಿತಿ ನಿಭಾಯಿಸಿದರು. ಕೋವಿಡ್‌ ವೇಳೆ ಜನರ ಪ್ರಾಣ ಉಳಿಸಲು ಇಡೀ ಸರ್ಕಾರ ಪ್ರಯತ್ನಿಸಿತು. ಕಷ್ಟದ ಸಂದರ್ಭಗಳಲ್ಲಿ ಯಡಿಯೂರಪ್ಪ ರಾಜ್ಯ ಕಾಪಾಡಿದ್ದಾರೆ. ಆದರೆ ಅವರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಎಂದು ಬೊಮ್ಮಾಯಿ ಹೆಸರೆತ್ತದೆ ಪ್ರಶ್ನಿಸಿದರು. 

ಪ್ರತಾಪ್‌ ಸಿಂಹ-ಎಚ್‌ಡಿಕೆ ಅಡ್ಜಸ್ಟ್‌ಮೆಂಟ್‌ ರಾಜಕಾರಣಿಗಳು: ಎನ್‌.ಚಲುವರಾಯಸ್ವಾಮಿ

ಯಡಿಯೂರಪ್ಪ ನಂತರ ಬಂದವರು ಕಾರ್ಯಕರ್ತರ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಹಿಂದೂ ಮುಖಂಡರಾದ ಪ್ರವೀಣ್‌ ನೆಟ್ಟಾರು, ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಉತ್ಸಾಹ ಕಾಣಿಸಲಿಲ್ಲ ಎಂದ ಪ್ರತಾಪ್‌ ಸಿಂಹ ನಾನು ಜನರ ಆಕ್ರೋಶ, ಕಾರ್ಯಕರ್ತರ ನೋವಿಗೆ ಧ್ವನಿಯಾಗಿದ್ದೇನೆಯೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು.