ಸಿಎಂ ಬಿಎಸ್‌ವೈ ಸಂಬಂಧಿಯ ಅದ್ಧೂರಿ ಮದ್ವೆ: ವಿಶ್ವನಾಥ್ ಅಸಮಾಧಾನ

ಕೊರೋನಾ ಸೋಂಕಿನ ಮಧ್ಯೆಯೇ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಯೊಬ್ಬರು ಭರ್ಜರಿ ಮದುವೆ ಮಾಡಿದ್ದು, ಇದಕ್ಕೆ ಎಚ್‌ ವಿಶ್ವನಾಥ್ ಅಸಮಾಧನ ವ್ಯಕ್ತಪಡಿಸಿದ್ದಾರೆ.

BJP MLC H Vishwanath Reacts On BSY relation Grand marriage rbj

ಮೈಸೂರು, (ನ.25): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧಿಯೊಬ್ಬರು ಲಲಿತಮಹಲ್ ಪ್ಯಾಲೇಸ್‌ನಲ್ಲಿ ಅದ್ದೂರಿ ವಿವಾಹ ಆಯೋಜಿಸಿದ್ದು, ಇಂತಹ ವೈಭವದ ಮದುವೆಯ ಅಗತ್ಯ ಇರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು (ಬುಧವಾರ) ಸುದ್ದಿಗಾರರಿಗೆ ಮಾತನಾಡಿದ ಅವರು, ಸರ್ಕಾರವೇ ಕಟ್ಟುಪಾಡುಗಳನ್ನು ಮಾಡಿ, ಸರ್ಕಾರದಲ್ಲಿರುವವರೇ ಅವುಗಳನ್ನು ಮುರಿಯುವುದು ಸರಿಯಲ್ಲ ಎಂದು ಸಿಎಂಗೆ ಕೋರೋನಾ ವೈರಸ್‌ ರೂಲ್ಸ್‌ ಬಗ್ಗೆ ಪಾಠ ಮಡಿದರು.

ನಾವು 105 ಶಾಸಕರು ಗೆದ್ದಿದ್ದರಿಂದ ಬಿಜೆಪಿ ಸರ್ಕಾರ ಬಂದಿದ್ದು: ವಲಸಿಗರಿಗೆ ಶಾಸಕ ಟಾಂಗ್

ನಾನು ನನ್ನ ಎಲ್ಲ ಮಕ್ಕಳ ಮದುವೆಗಳನ್ನು ಸಾಮೂಹಿಕ ವಿವಾಹದಲ್ಲಿ ನೆರವೇರಿಸಿದ್ದೇನೆ. ಯಡಿಯೂರಪ್ಪ ಅವರಿಗೂ ಮದುವೆ ಆಯೋಜಕರಿಗೂ ಇದು ಅರ್ಥವಾಗಿರಬೇಕು ಎಂದು ಹೇಳಿದರು. 

 ಕೋವಿಡ್ ಬಗ್ಗೆ ಮಾಸ್ಕ್, ಸಾಮಾಜಿ ಅಂತರ ಕಾಪಾಡಿಕೊಳ್ಳಿ ಅಂತ ಜಾಗೃತಿ ಮಾತುಗಳನ್ನಾಡುವ ರಾಜಕೀಯ ನಾಯಕರೇ ಮದುವೆ, ಚುನಾವಣೆಗಳಲ್ಲಿ ಅದ್ಯಾವುದನ್ನೂ ಪಾಲಿಸದೇ ರಾಜಾರೋಷವಾಗಿ ಓಡಾಡುತ್ತಾರೆ. 

ಅದರಲ್ಲೂ ಸಾಮಾನ್ಯ ಜನರು ಹೀಗೆ ಮಾಡಿದ್ರೆ ಸಾಕು ಅವರ ಮೇಲೆ ಕೇಸ್ ಅದು ಇದು ಅಂತ ಹಾಕ್ತಾರೆ. ಆದ್ರೆ, ನಿಯಮ ರೂಪಿಸುವವರೇ ರೂಲ್ಸ್ ಬ್ರೇಕ್ ಮಾಡುವವರಿಗೆ  ಮೂಗುದಾಣ ಹಾಕುವರು ಯಾರು ಎನ್ನುವುದ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

Latest Videos
Follow Us:
Download App:
  • android
  • ios