ಬೆಂಗಳೂರು, (ಫೆ.02): ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸಂಪುಟಕ್ಕೆ ಸೇರ್ಪಡೆಗೂ ಮುನ್ನವೇ ಆಹ್ವಾನ ಪತ್ರಿಕೆಯಲ್ಲಿ ಸಚಿವರಾಗಿ ಮಿಂಚುತ್ತಿದ್ದಾರೆ.

ವೀರಶೈವ-ಲಿಂಗಾಯತ ಯುವಕ ಸೇವಾ ಟ್ರಸ್ಟ್ ಇಂದು (ಭಾನುವಾರ) ಕೆಂಗೇರಿ ಉಪಚನಗರದ ಕೊಮ್ಮಘಟ್ಟ ಬಳಿ ಡಾ.  ಶಿವಕುಮಾರ್ ಸ್ವಾಮೀಜಿ ಅವರ 1ನೇ ವರ್ಷದ ಪುಣ್ಯತಿಥಿ ಸಮಾರಂಭವನ್ನು ಹಮ್ಮಿಕೊಂಡಿದೆ. 

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಈ ಸಮಾರಂಭದಲ್ಲಿ ಬಿ.ವೈ. ವಿಜಯೇಂದ್ರ ಮುಖ್ಯ ಅತಿಥಿಗಳಾಗಿದ್ದಾರೆ. ಆದ್ರೆ, ಟ್ರಸ್ಟ್‌ನವರು ಆಹ್ವಾನ ಪತ್ರಿಕೆಯಲ್ಲಿ ಎಸ್.ಟಿ.ಸೋಮಶೇಖರ್ ಅವರ ಹೆಸರ ಮುಂದೆ ಸಚಿವರು, ಕರ್ನಾಟಕ ಸರ್ಕಾರ ಎಂದು ನಮೂದಿಸಿದ್ದಾರೆ.

ಈ ಮೂಲಕ ರಾಜ್ಯ ಸಚಿವ ಸಂಪುಟ ಸೇರ್ಪಡೆಗೂ ಮುನ್ನವೇ ಆಹ್ವಾನ ಪತ್ರಿಕೆಯಲ್ಲಿ ಸೋಮಶೇಖರ್ ಸಚಿವರಾಗಿದ್ದಾರೆ. ನೂತನ 10 ಶಾಸಕರು ಹಾಗೂ 2 ಮೂಲ ಬಿಜೆಪಿ ಶಾಸಕರುಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ. 

ಆದ್ರೆ, ಯಾರಿಗೆಲ್ಲ ಸಚಿವ ಸ್ಥಾನ ಸಿಗುತ್ತೆ ಎನ್ನುವುದು ಮಾತ್ರ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ದಿನವಾದ ಗುರುವಾರವೇ ತಿಳಿಯಲಿದೆ.

ಫೆಬ್ರವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ