ಬೆಂಗಳೂರು, ]ಫೆ.11]: ಆಪರೇಷನ್​ ಕಮಲದ ಆಡಿಯೋ ಬಿಡುಗಡೆ ಮಾಡಿದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಸಿಡಿ ಅಸ್ತ್ರ ಪ್ರಯೋಗಿಸಿದೆ.

ಆಪರೇಷನ್​ ಕಮಲದ್ದು ಎನ್ನಲಾದ ಆಡಿಯೋ ಬಿಡುಗಡೆ ಮಾಡಿ ರಾಜ್ಯರಾಜಕಾರಣದಲ್ಲಿ ಕೋಲಾಹಲ ಹುಟ್ಟಿಸಿದ ಬೆನ್ನಲ್ಲೇ ಬಿಜೆಪಿ, ಕುಮಾರಸ್ವಾಮಿ ಅವರ  ಸಿಡಿ ಅಸ್ತ್ರ ಪ್ರಯೋಗಿಸಿದೆ.

ದೇವರ ಹೆಸರಲ್ಲಿ ಯಡಿಯೂರಪ್ಪ ದೇವದುರ್ಗ ಭೇಟಿ ರಹಸ್ಯ ಬಯಲು

2014 ರಲ್ಲಿ ಕುಮಾರಸ್ವಾಮಿ ಅವರು ವಿಜಯಪುರದ ಅಂದಿನ ಜೆಡಿಎಸ್ ಮುಖಂಡ[ಈಗ ಬಿಜೆಪಿನಲ್ಲಿದ್ದಾರೆ] ವಿಜುಗೌಡ ಅವರನ್ನು ವಿಧಾನಪರಿಷತ್ ಸದಸ್ಯ ಮಾಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಸಿ.ಡಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

 ಈ ಬಗ್ಗೆ ಬಿಜೆಪಿ ಶಾಸಕ ಎಂ.ಪಿ.ರೇಣುಖಾಚಾರ್ಯ ಇಂದು ಸದನದಲ್ಲಿ ಸಿ.ಡಿಯನ್ನು ಪ್ರದರ್ಶಿಸಿ, ಇದು 40 ಕೋಟಿ ರೂಪಾಯಿಯ ಸಿ.ಡಿ ಇದರ ಬಗ್ಗೆಯೂ ಚರ್ಚೆಯಾಗಲಿ ಎಂದು ಆಗ್ರಹಿಸಿದರು. ಬಳಿಕ ಸಿ.ಡಿಯನ್ನ ಸ್ಪೀಕರ್​ ರಮೇಶ್​ ಕುಮಾರ್​ಗೆ ಹಸ್ತಾಂತರಿಸಿದರು.