Asianet Suvarna News Asianet Suvarna News

Karnataka BJP ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ, ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ ನಡೆ

* ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ
* ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ
* ಆರ್‌ಎಸ್‌ಎಸ್‌ ನಾಯಕರ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಭೇಟಿ

BJP MLA Ramesh Jarkiholi Meets RSS Leaders In Belagavi rbj
Author
Bengaluru, First Published Jan 15, 2022, 7:58 PM IST

ಬೆಳಗಾವಿ, (ಜ.15):  ಕರ್ನಾಟಕ ಬಿಜೆಪಿಯಲ್ಲಿ(Karnataka BJP) ಮಹತ್ವದ ಬೆಳವಣಿಗೆಗಳು ನಡೆದಿವೆ. ಅತ್ತ ರೇಣುಕಾಚಾರ್ಯ ಬೊಮ್ಮಾಯಿ ಸಂಪುಟದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ರೆ, ಇತ್ತ ರಮೇಶ್ ಜಾರಕಿಹೊಳಿ  ಆರ್‌ಎಸ್‌ಎಸ್‌ ಮುಖಂಡರ ಮನೆಗೆ ಭೇಟಿ ನೀಡಿದ್ದಾರೆ. ಇದೀಗ ರಮೇಶ್ ಜಾರಕಿಹೊಳಿ (Ramesh Jarkiholi) ನಡೆ ಭಾರೀ ಸಂಚಲನ ಮೂಡಿಸಿದೆ.

ಬೆಳಗಾವಿ (Belagavi) ಜಿಲ್ಲೆಯ ಅಥಣಿಯಲ್ಲಿರುವ ಆರ್.ಎಸ್.ಎಸ್ (RSS) ಪ್ರಮುಖ ಅರವಿಂದರಾವ್ ದೇಶಪಾಂಡೆ ಮನೆಗೆ ಇಂದು(ಶನಿವಾರ) ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಭೇಟಿ ನೀಡಿದ್ದು, ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Karnataka BJP ಯತ್ನಾಳ್‌ ಹೇಳಿಕೆಗೆ ಜೈ ಎಂದ ರೇಣುಕಾಚಾರ್ಯ, ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಬಗ್ಗೆ ಹಾಗೂ 2023ರ ಚುನಾವಣೆ ಕುರಿತು ಮೊನ್ನೆ ಕಲಬುರಗಿಯಲ್ಲಿ ನಡೆದ ಸಂಘದ ಬೈಠಕ್​ನಲ್ಲಿ ಚರ್ಚೆಯಾಗಿದೆ. ಹೀಗಾಗಿ ಮಾರ್ಗದರ್ಶನ ಪಡೆಯಲು ಬಂದಿದ್ದೇನೆ ಎಂದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸಬರಿಗೆ ಆದ್ಯತೆ ನೀಡಬೇಕೆಂಬ ವಿಚಾರವಾಗಿ ಮಾತನಾಡಿದ ರಮೇಶ್​​ ಜಾರಕಿಹೊಳಿ, ನಾನು ಸಚಿವ ಸ್ಥಾನಕ್ಕೆ ಪ್ರಯತ್ನ ಮಾಡಿಲ್ಲ. ಅದು ನಮ್ಮ ಪಕ್ಷದ ವರಿಷ್ಠರು, ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

 ಎಲ್ಲವನ್ನು ಬಹಿರಂಗವಾಗಿ ಮಾತನಾಡಲು ಬರುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಕೆಲವು ಚರ್ಚೆಯಾಗಿದೆ, ಶೀಘ್ರದಲ್ಲೇ ಒಳ್ಳೆಯದಾಗುವ ವಿಶ್ವಾಸವಿದೆ. ಇನ್ನು ಮುಂದಿನ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದರು.

ವಿಶ್ವಾಸ ಗಳಿಸಲು ಸಾಹುಕಾರ ಯತ್ನ
ಹೌದು..ಮೊನ್ನೇ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರು ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸುವ ಮೂಲಕ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಸೋಲಿಗೆ ಕಾರಣರಾಗಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಕೆಲ ಶಾಸಕರು ಆಗ್ರಹಿಸಿದ್ದಾರೆ.

ಇದರಿಂದ ರಮೇಶ್ ಜಾರಕಿಹೊಳಿ ಅವರು ಆರ್‌ಎಸ್‌ಎಸ್‌ ನಾಯಕರ ಮೂಲಕ ಅದನ್ನ ಶಮನ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಸಚಿವ ಸ್ಥಾನಕ್ಕೂ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಸಿಡಿದೆದ್ದ ರೇಣುಕಾಚಾರ್ಯ
ದಾವಣಗೆರೆ: ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾಗಲಿ. ರಾಜ್ಯದಲ್ಲಿಯೂ ಅದೇ ರೀತಿ ಸಚಿವ ಸಂಪುಟ ರಚನೆಯಾಗಲಿ. ನಮ್ಮಲ್ಲಿ ಕೆಲ ನಾಯಕರು ಮತ್ತೆ ಮತ್ತೆ ಸಚಿವರಾಗುತ್ತಿದ್ದಾರೆ. ಈ ವಿಚಾರವಾಗಿ ನಾವೇನೂ ರೆಸಾರ್ಟ್‌ ರಾಜಕೀಯ ಮಾಡಲ್ಲ. ಸಿಎಂ ಸ್ಥಾನ ಬಿಟ್ಟು ಉಳಿದವರಿಗೆ ಗುಜರಾತ್ ಮಾದರಿ ಇರಲಿ ಎಂದು ದಾವಣಗೆರೆಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ನನ್ನ ಆಗ್ರಹ ಅಂದ್ರೆ ಗುಜರಾತ್ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆ ಆಗಬೇಕು. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ರಾಜೀನಾಮೆ ಕೊಡಲ್ಲ‌. ಬಿಜೆಪಿ ಸರ್ಕಾರವೆಲ್ಲ ಅಧಿಕಾರಕ್ಕೆ ಬಂದಾಗ ಸಚಿವರಾದವರು ಪಕ್ಷ ಸಂಘಟನೆಗೆ ಹೋಗಬೇಕು. ಪಕ್ಷ ಅಧಿಕಾರಕ್ಕೆ ಬರಬೇಕು. ಈಗ ಸಿಎಂ ಬಸವರಾಜ ಬೊಮ್ಮಾಯಿ ಬಿಟ್ಟು ಉಳಿದವರಿಗೆ ಗುಜರಾತ್ ಮಾದರಿ ಅನುಸರಿಬೇಕು ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಸಿಎಂ ರಾಜಕೀಯ ಕಾರ್ಯದರ್ಶಿಯಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಮಕ್ಕಳಾಟವಾಗಿದೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಮಕ್ಕಳಿಗೆ ಜಾತ್ರೆ ಕಾರು ಕೊಡಿಸಿದಂತೆ ನನಗೆ ಕಾರು ಕೊಟ್ಟಿದ್ದಾರೆ. ಮನೆ ಕೊಟ್ಟಿದ್ದಾರೆ, ಜನಪರ ಕೆಲಸ ಮಾತ್ರ ಮಾಡಲು ಆಗುತ್ತಿಲ್ಲ. ನನಗೆ ಸಚಿವ ಸ್ಥಾನ ನೀಡಿ ಎಂದು ಈಗಾಗಲೇ ಕೇಳಿದ್ದೇನೆ. ಶಾಸಕಾಂಗ ಸಭೆಯಲ್ಲಿ ಸಹ ಈ ವಿಚಾರವನ್ನು ಹೇಳಿದ್ದೇನೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಈ ಹಿಂದೆ ರೆಸಾರ್ಟ್ ರಾಜಕೀಯ ಮಾಡಿದ್ದೆ, ಈಗ ಮಾಡಲ್ಲ. ನನ್ನ ಮೇಲೆ ಇದೊಂದು ಕಪ್ಪು ಚುಕ್ಕೆ ಇದೆ. ಇನ್ಮುಂದೆ ನನ್ನ ವಾದವನ್ನು 4 ಗೋಡೆ ನಡುವೆ ಹೇಳುತ್ತೇನೆ. ನಾನು ಹುಲಿ, ಸಿಂಹ, ಆನೆ ಅಲ್ಲ ಜನ ಆ ರೀತಿ ಕರೆಯುತ್ತಾರಷ್ಟೇ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

Follow Us:
Download App:
  • android
  • ios