ಹಾವೇರಿ, (ನ.09): ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ಬಂಧನವಾಗಿದೆ. ಆದ್ರೆ, ಅವರ ಮಗನಿಗಿಂತ ಮೊದಲು ರುದ್ರಪ್ಪ ಲಮಾಣಿ ಏನ್ ಮಾಡ್ತಾ ಇದ್ರು ಗೊತ್ತಾ. ಹೆಣ್ಣು ಹುಡಗಿಯರನ್ನ ಕದ್ದು ಮಾರುತ್ತಿದ್ರು ಎಂದು ಪತ್ರಿಕೆಯಲ್ಲಿ ನೋಡಿದ್ದೇವೆ ಎಂದು ಶಾಸಕ ನೆಹರು ಓಲೇಕಾರ ಗಂಭೀರ ಆರೋಪ ಮಾಡಿದ್ದಾರೆ.

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಬಗ್ಗೆ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮತಾನಾಡಿದ ಬಿಜೆಪಿ ಶಾಸಕ ನೆಹರು ಓಲೇಕಾರ, ರುದ್ರಪ್ಪ ಲಮಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡ್ರಗ್ಸ್‌ ಮಾಫಿಯಾ: ಕರ್ನಾಟಕದ ಮಾಜಿ ಸಚಿವರ ಪುತ್ರ ಅರೆಸ್ಟ್

 50-60 ಎಕರೆ ಸರ್ಕಾರಿ ಜಮೀನು ಕಬಳಿಸಿದ್ದ ಆರೋಪವಿದೆ. ಇವರೆ ಇಂತಹ ಕ್ರೀಮಿನಲ್ ಕೆಲಸದಲ್ಲಿ ಇರುವಾಗ, ಅವರ ಮಗಾ ಇದಕ್ಕೂ ಮೀರಿದವನು. ಹೀಗಾಗಿ ನಿನ್ನೆ ರಾತ್ರಿ ಡ್ರಗ್ ಕೇಸ್ ಲ್ಲಿ ಅರೆಸ್ಟ್ ಆಗಿದ್ದಾರೆ. ಇವರ ಇತಿಹಾಸವೆ ಕ್ರೀಮಿನಲ್ ಆ್ಯಕ್ಟಿವೀಟಿ ಆಗಿದೆ ಎಂದರು.

ಹಾವೇರಿಯ ನೇತಾಜಿ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿದ್ದರ ಕುರಿತು ಅವರಿಗೆ ನೋಟಿಸ್ ನೀಡಲಾಗಿದೆ. ಇವರು ನೋಡಲಿಕ್ಕೆ ಆಕಳ‌ ಮುಖ, ಆದರೆ ಕತ್ತಿ ಒದಿಕಿ ಅನ್ನೋ ಥರ ಚರಿತ್ರೆ ಇದೆ ಎಂದು ಓಲೇಕಾರ ವಾಗ್ದಾಳಿ ನಡೆಸಿದರು.