Asianet Suvarna News Asianet Suvarna News

ಆರ್​ಎಸ್​ಎಸ್​ ಬಗ್ಗೆ ಮಾತಾಡೋರು ಸರ್ವನಾಶ ಆಗುತ್ತೀರಿ: ಎಚ್‌ಡಿಕೆಗೆ ಎಚ್ಚರಿಕೆ

* ಆರ್​ಎಸ್​ಎಸ್​ ಬಗ್ಗೆ ಕುಮಾರಸ್ವಾಮಿ ಆರೋಪಗಳ ಸುರಿಮಳೆ
* ಆರ್‌ಎಸ್ಎಸ್‌ ವಿರುದ್ಧ ಆರೋಪಕ್ಕೆ ಬಿಜೆಪಿ ನಾಯಕರ ತಿರುಗೇಟು
* ಆರ್​ಎಸ್​ಎಸ್​ ಬಗ್ಗೆ ಮಾತಾಡೋರು ಸರ್ವನಾಶ ಆಗುತ್ತೀರಿ ಎಂದ ರೇಣುಕಾಚಾರ್ಯ

BJP MLA MP Renukacharya Hits back at HD Kumaraswamy Over His Statement against RSS rbj
Author
Bengaluru, First Published Oct 16, 2021, 11:10 PM IST
  • Facebook
  • Twitter
  • Whatsapp

ದಾವಣಗೆರೆ, (ಅ.16): ಆರ್​ಎಸ್​ಎಸ್​ (RSS)ಬಗ್ಗೆ ಮಾತಾಡೋರು ಸರ್ವನಾಶ ಆಗುತ್ತೀರಿ ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿಗೆ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಎಚ್ಚರಿಕೆ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ (Davanagere) ಇಂದು (ಅ.16)  ಮಾಧ್ಯಮಗಳೊಂದಿಗೆ ಮಾತಾಡಿದ ರೇಣುಕಾಚಾರ್ಯ, ಆರ್​ಎಸ್​ಎಸ್​ ಬಗ್ಗೆ ಮಾತಾಡುವ ನೀವು ಮಾನಸಿಕ ಅಸ್ವಸ್ಥರು. ಹೀಗಾಗಿಯೇ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದೀರಿ. ಇನ್ನು ಮುಂದೆಯಾದರೂ ಹೀಗೆ ಮಾತಾಡೋದು ಬಿಡಿ ಎಂದು ಮಾಜಿ ಸಿಎಂ ಎಚ್‌ಡಿಕ ಕುಮಾರಸ್ವಾಮಿಗೆ IHD Kumaraswamy) ತಿರುಗೇಟು ನೀಡಿದರು.

ಸಿಂಡಿಕೇಟ್‌ನಲ್ಲಿ RSSನವರಿಂದ ಲೂಟಿ: ಎಚ್‌ಡಿಕೆ ಆರೋಪಕ್ಕೆ ಅಶೋಕ್ ತಿರುಗೇಟು

ಆರ್​ಎಸ್​ಎಸ್​​ ದೇಶಕ್ಕಾಗಿ ಪ್ರಾಣ ಕೊಟ್ಟವರು. ಆರ್​ಎಸ್​ಎಸ್​​ಗೆ ಅಲ್ಲದೇ ಭಯೋತ್ಪಾದಕರಿಗೆ ಸ್ಥಾನ ನೀಡಬೇಕೆ. ಆರ್​ಎಸ್​ಎಸ್​ ಬಗ್ಗೆ ಮಾತಾಡುವ ನೀವು ಮಾನಸಿಕ ಅಸ್ವಸ್ಥರು. ಹೀಗಾಗಿಯೇ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದೀರ ಟಾಂಗ್​ ಕೊಟ್ಟರು.

ಇನ್ನು ಇದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿಗೆ ಆರ್​ಎಸ್​ಎಸ್​​​ನ ಗಂಧ ಗಾಳಿಯು ಗೊತ್ತಿಲ್ಲ. ಆರ್​ಎಸ್​ಎಸ್ ವಿರುದ್ಧ​ ಮಾತಾಡೋದು ಶೋಭೆ ತರುವಂತಹದ್ದಲ್ಲ. ಯಾವುದೇ ಪುಸ್ತಕ ಓದಿ ಹೀಗೆ ಮಾತಾಡೋದಲ್ಲ. ಅವರು ಓದಿದ ಪುಸ್ತಕ ಬರೆದೋರು ಯಾರು? ಒಂದು ಪುಸ್ತಕ ಓದಿದ್ರೆ ಆರ್​ಎಸ್​ಎಸ್​ ಬಗ್ಗೆ ಗೊತ್ತಾಗಲ್ಲ ಎಂದು ಕಿಡಿಕಾರಿದರು.

ರಾಜ್ಯ ಉಪಚುನಾವಣೆ (By Elections) ಸಮೀಪಿಸುತ್ತಿರುವ ಹೊತ್ತಲ್ಲೇ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಆರ್​ಎಸ್​ಎಸ್​ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.    ವಿಶ್ವವಿದ್ಯಾಯಲಗಳಲ್ಲಿ  ಆರ್‌ಎಸ್‌ಎಸ್‌ನವರನ್ನು  ಸಿಂಡಿಕೇಟ್‌ ಸದಸ್ಯರನ್ನಾಗಿ  ನೇಮಕ ಮಾಡಿದ್ದು, ಅವರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.

Follow Us:
Download App:
  • android
  • ios