ಹಿಂದುಗಳು ಒಗ್ಗಟ್ಟಿನಿಂದ ಮತದಾನ ಮಾಡಿ: ಯತ್ನಾಳ
ಮತದಾನ ಸಮಯದಲ್ಲಿ ಎಲ್ಲಿಯೂ ಕೂಡ ದಾಂಧಲೆ ಆಗಲು ಸಾಧ್ಯವಿಲ್ಲ. ಮಿಲಿಟರಿ ನಿಯೋಜನೆ ಇರುತ್ತದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಎಲ್ಲರೂ ಮನೆಯಿಂದ ಹೊರ ಬಂದು ಮತ ಚಲಾಯಿಸಿ ದಾಖಲೆಯ ಶೇ.90 ಮತದಾನ ಮಾಡಿದರೆ, ಅದೇ ದಿನ ಸಂಜೆ ಗುಲಾಲ ಹಾರಿಸೋಣ ಎಂದು ಹೇಳಿದ ಬಸನಗೌಡ ಪಾಟೀಲ ಯತ್ನಾಳ.
ವಿಜಯಪುರ(ಏ.23): ಹಿಂದುಗಳು ಜಾಗೃತರಾಗಿ ಒಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು. ನಗರದ ವಾರ್ಡ ನಂ.29 ಮತ್ತು 30ರ ಕಾಸಗೇರಿ ಓಣಿ, ಗೌಡರ ಓಣಿ, ರಾಮನಗರ, ರಾಜಾಜಿ ನಗರದಲ್ಲಿ ಶನಿವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ ಬಾರಿ ನಮ್ಮವರು ಶೇ.58ರಷ್ಟು ಮಾತ್ರ ಮತದಾನ ಮಾಡಿದರೆ, ಮುಸ್ಲಿಂ ಸಮುದಾಯದವರು ಶೇ.85ರಷ್ಟು ಮತದಾನ ಮಾಡಿದ್ದರು. ಈ ಬಾರಿ ಶೇ.90ರಷ್ಟು ಹಿಂದುಗಳು ಮತದಾನ ಮಾಡಿದರೆ, ಕನಿಷ್ಠ 40 ಸಾವಿರ ಮತಗಳಿಂದ ಗೆದ್ದು, ಮತ್ತೆ ಕೇಸರಿ ಗುಲಾಲ ಹಾರುವುದು ನಿಶ್ಚಿತ ಎಂದರು.
ಮತದಾನ ಸಮಯದಲ್ಲಿ ಎಲ್ಲಿಯೂ ಕೂಡ ದಾಂಧಲೆ ಆಗಲು ಸಾಧ್ಯವಿಲ್ಲ. ಮಿಲಿಟರಿ ನಿಯೋಜನೆ ಇರುತ್ತದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಸಹ ಅಳವಡಿಸಲಾಗಿದೆ. ಎಲ್ಲರೂ ಮನೆಯಿಂದ ಹೊರ ಬಂದು ಮತ ಚಲಾಯಿಸಿ ದಾಖಲೆಯ ಶೇ.90 ಮತದಾನ ಮಾಡಿದರೆ, ಅದೇ ದಿನ ಸಂಜೆ ಗುಲಾಲ ಹಾರಿಸೋಣ ಎಂದು ಹೇಳಿದರು.
ಶತಕೋಟಿ ಒಡೆಯನಾದರೂ ಗುಲಗಂಜಿಯಷ್ಟು ಬಂಗಾರವಿಲ್ಲ! ಲಿಂಗಾಯತ ನಾಯಕನ ಆಸ್ತಿ ಮೌಲ್ಯವೆಷ್ಟು ಗೊತ್ತಾ?
ನಗರದಲ್ಲಿ ಗೂಂಡಾಗಿರಿ, ದಬ್ಬಾಳಿಕೆ ನಿಲ್ಲಿಸಲಾಗಿದೆ. ಧೂಳಾಪುರ ಎಂಬ ಅಪಖ್ಯಾತಿಗೆ ಗುರಿಯಾಗಿದ್ದ ನಗರದ ಮುಖ್ಯ ಹಾಗೂ ಆಂತರಿಕ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಪಾಕಿಸ್ತಾನದಂತಾಗಿದ್ದ ನೆಹರು ಮಾರುಕಟ್ಟೆ ಬಳಿ ಸಂಪೂರ್ಣ ಬದಲಾಯಿಸಿ, ಸುರಕ್ಷಿತ ನಗರವನ್ನಾಗಿ ಮಾಡಲಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಬೆಳೆಯುತ್ತಿರುವ ದ್ರಾಕ್ಷಿಯನ್ನು ಹೊರ ದೇಶದಲ್ಲಿ ಇಲ್ಲಿಯೇ ಕುಳಿತು ಮಾರಾಟ ಮಾಡುವ ವ್ಯವಸ್ಥೆ ವೈನ್ ಪಾರ್ಕ್ದಿಂದ ಆಗುತ್ತದೆ. ಈಗಾಗಲೇ . 140 ಕೋಟಿ ಅನುದಾನ ಮಂಜೂರಾಗಿದೆ. ಅಲ್ಲದೇ, ಜವಳಿ ಪಾರ್ಕ್, ಜಿಟಿಟಿಸಿ ಕಾಲೇಜು ಸಹ ಮಂಜೂರು ಮಾಡಿಸಿರುವೆ. ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ .250 ಕೋಟಿ ತರಲು ಪ್ರಯತ್ನಿಸಿದ್ದೇನೆ. ನಾನು ವಿಧಾನಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಹೆಚ್ಚುವರಿ ಹಣ ವಿಮಾನ ನಿಲ್ದಾಣ ಕಾಮಗಾರಿಗೆ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ನಿಮಗೆಲ್ಲಾ ಮಾನ, ಮರ್ಯಾದೆ, ಸ್ವಾಭಿಮಾನ ಇದೆಯಾ? ಶೆಟ್ಟರ್, ಸವದಿ ವಿರುದ್ಧ ಯತ್ನಾಳ್ ಕೆಂಡ
ನಮ್ಮ ಹೋರಾಟದ ಫಲವಾಗಿ ಸಮಸ್ತ ಲಿಂಗಾಯತ ಸಮುದಾಯಕ್ಕೆ ಹೆಚ್ಚುವರಿ ಶೇ.2ರಷ್ಟುಮೀಸಲಾತಿ ದೊರಕಿತು. ಇದರಿಂದ ಉದ್ಯೋಗ, ಶಿಕ್ಷಣದಲ್ಲಿ ಅನುಕೂಲವಾಗಲಿದೆ. 2ಎ ದಲ್ಲಿರುವ ಸಮಾಜಕ್ಕೆ ಅನ್ಯಾಯವಾಗದಂತೆ, ಎರಡು ಕಡೆ ಮೀಸಲಾತಿ ಪಡೆಯುವುದು ರದ್ದುಪಡಿಸಿ, 2ಡಿ ವರ್ಗ ಸೃಜಿಸಿ ಲಿಂಗಾಯತರಿಗೆ, ಒಕ್ಕಲಿಗರಿಗೆ ತಲಾ ಶೇ.2 ಮೀಸಲಾತಿ ನೀಡಲಾಗಿದೆ. ಅದನ್ನು ತೆಗೆಯುತ್ತೇವೆ ಎನ್ನುವ ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದರು.
ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಕಾಲೊನಿ,ಬಡಾವಣೆಗಳ ಹಿರಿಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು, ಹಿತೈಷಿಗಳು ಇದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.