ಗ್ಯಾಸ್, ತೈಲ ಬೆಲೆ ಹೆಚ್ಚಳಕ್ಕೆ ತಾಲಿಬಾನ್ ಕಾರಣ: ಸಿಎಂ ರೇಸ್ನಲ್ಲಿದ್ದ ಬಿಜೆಪಿ ಶಾಸಕನ ಸಮರ್ಥನೆ
* ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನಸಾಮಾನ್ಯರು ಕಂಗಾಲು
* ಇತ್ತ ಬಿಜೆಪಿ ನಾಯಕ ಬೇಜವಾಬ್ದಾರಿತನದ ಸಮರ್ಥನೆಗಳು
* ಗ್ಯಾಸ್, ತೈಲ ಬೆಲೆ ಹೆಚ್ಚಳಕ್ಕೆ ತಾಲಿಬಾನ್ ಕಾರಣ ಎಂದ ಬಿಜೆಪಿ ಶಾಸಕ
ಹುಬ್ಬಳ್ಳಿ, (ಸೆ.03): ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನಸಾಮಾನ್ಯರು ಕಂಗಾಲಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರುಗಳ ಸಮರ್ಥನೆಗೇನು ಕಮ್ಮಿ ಇಲ್ಲ.
"
ಬೆಲೆ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ, ನಿಜವಾಗಿ ಗ್ಯಾಸ್ ಸಿಲಿಂಡರ್ ಬಳಸುವವರು ಯಾರೂ ಬೀದಿಗೆ ಬಂದಿಲ್ಲ. ಇದೊಂದು ಡ್ರಾಮಾ ಎಂದು ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ರೆ, ಇತ್ತೆ ಸಿಎಂ ರೇಸ್‌ನಲ್ಲಿ ಅರವಿಂದ್ ಬೆಲ್ಲದ್, ಬೆಲೆ ಏರಿಕೆಗೆ ತಾಲಿಬಾನ್ ಕಾರಣ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ.
LPG ಗ್ಯಾಸ್ ಸಿಲಿಂಡರ್ ಮತ್ತಷ್ಟು 'ಭಾರ': 15 ದಿನದಲ್ಲಿ 2ನೇ ಬಾರಿ ಬೆಲೆ ಏರಿಕೆ!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಲ್ಲದ್, ಎಲ್.ಪಿ.ಜಿ. ಸಿಲಿಂಡರ್, ತೈಲ ಬೆಲೆ ಹೆಚ್ಚಳಕ್ಕೆ ತಾಲಿಬಾನ್ ಸಮಸ್ಯೆ ಕಾರಣ. ತಾಲಿಬಾನ್ ಉಗ್ರರಿಂದ ಇಡೀ ಪ್ರಪಂಚಕ್ಕೆ ತೊಂದರೆಯಾಗುತ್ತಿದೆ. ಇದರ ಪರಿಣಾಮ ಭಾರತದಲ್ಲೂ ಗ್ಯಾಸ್ ಸಿಲಿಂಡರ್ ದರ, ತೈಲ ದರ ಏರಿಕೆಯಾಗುತ್ತಿದೆ ಸಮರ್ಥನೆ ನೀಡಿದರು.
ತಾಲಿಬಾನ್ ಸಮಸ್ಯೆಯಿಂದಾಗಿ ಕಚ್ಚಾ ತೈಲ ಬರುತ್ತಿಲ್ಲ. ಹಾಗಾಗಿ ಇಂಧನ ದರ ದೇಶದಲ್ಲಿ ಹೆಚ್ಚುತ್ತಿದೆ. ಬೆಲೆ ಏರಿಕೆಗೆ ಏನು ಕಾರಣ? ಯಾಕೆ ಆಗುತ್ತಿದೆ ಎಂಬುದನ್ನು ಮತದಾರರು ಅರ್ಥಮಾಡಿಕೊಳ್ಳುತ್ತಾರೆ. ಜನರು ಪ್ರಬುದ್ಧರಾಗಿದ್ದಾರೆ. ದೇಶದ ಒಳಿತಾಗಿ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಎಂದರು.