ಚಿಕ್ಕಮಗಳೂರು (ಜ.23): ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ವಿಚಾರವಾಗಿ ಹಲವು ಸಚಿವರು ಸಮಾಧಾನಗೊಂಡಿದ್ದಾರೆ. ಹೌದು.. ಇದ್ದದ್ದನ್ನ ಕಸಿದುಕೊಂಡು, ಬದಲಿ ಖಾತೆ ಕೊಟ್ಟಿದ್ದಕ್ಕೆ ಕೆಲ ಸಚಿವರುಗಳು ಅಸಮಾಧಾನಗೊಂಡಿದ್ದು, ಸಿಎಂ ಬಿಎಸ್ ಯಡಿಯೂರಪ್ಪನವರ ಮೇಲೆ ಮುನಿಸಿಕೊಂಡಿದ್ದಾರೆ. 

"

'ಮೊದಲೇ ಹೇಳಿದ್ದೆ ನೀವೆಲ್ಲ ರಾಜಕೀಯ ಸಮಾಧಿ ಆಗ್ತೀರೆಂದು..ಈಗ ಯೂಸ್ ಅಂಡ್ ಥ್ರೋ'

ಮತ್ತೊಂದೆಡೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಕೆಲ ಅಸಮಾಧಾನಿತ ಶಾಸಕರುಗಳು ಪ್ರತ್ಯೇಕ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಮತ್ತೆ ರೇಸಾರ್ಟ್ ರಾಜಕೀಯ ಶುರುವಾಗಿದೆ.

ಅಸಮಾಧನಗೊಂಡಿರುವ ಕೆಲ ಸಚಿವರು ಹಾಗೂ ಶಾಸಕರು ಕಾಫಿನಾಡು ಚಿಕ್ಕಮಗಳೂರಿನ ರೆಸಾರ್ಟ್‌ವೊಂದರಲ್ಲಿ ಗುಪ್ತ ಸಭೆ ನಡೆಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

 ಸಚಿವರಾದ ರಮೇಶ್ ಜಾರಕಿಹೋಳಿ, ಡಾ.ಕೆ ಸುಧಾಕರ್, ಸಿ.ಪಿ ಯೋಗಿಶ್ವರ್ ಜೊತೆ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಹಾಗೂ ನಂದೀಶ್ ರೆಡ್ಡಿ ಸೇರಿದಂತೆ ಇನ್ನೂ ಕೆಲವರು ಚಿಕ್ಕಮಳೂರಿನ ಖಾಸಗಿ ರೆಸಾರ್ಟ್​​ನಲ್ಲಿ ಸಭೆ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಇದು ಮುಂದೆ ಯಾವ ಹಂತಕ್ಕೆ ಮುಟ್ಟುತ್ತದೆಯೋ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.