Asianet Suvarna News Asianet Suvarna News

ಉಪಸಭಾಧ್ಯಕ್ಷಕ್ಕೆ ಜೆಡಿಎಸ್‌ ಶಾಸಕ ರಾಜೀನಾಮೆ, ಇವರ ಕುರ್ಚಿಗೆ ಸವದತ್ತಿ ಯಲ್ಲಮ್ಮ ಕ್ಷೇತ್ರದ MLA

ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರ ಬದಲಾವಣೆಯಾಗಿದೆ. ಈ ಹಿಂದೆ ವಿಧಾನ ಸಭೆ ಉಪಸಭಾಧ್ಯಕ್ಷರಾಗಿದ್ದ ಚಂದ್ರಶೇಖರ ಮಾಮನಿ ಪುತ್ರನೇ ಇದೀಗ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

BJP MLA anand mamani electes deputy speaker of karnataka assembly
Author
Bengaluru, First Published Mar 24, 2020, 2:38 PM IST

ಬೆಂಗಳೂರು, (ಮಾ.24): ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಬೆಳಗಾವಿಯ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಧ್ವನಿಮತದ ಮೂಲಕ ಉಪಸಭಾಧ್ಯಕ್ಷರ ಸ್ಥಾನಕ್ಕೆ ಆನಂದ್ ಮಾಮನಿ ಅವರ ಹೆಸರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚಿಸಿದರು, ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರು ಅನುಮೋದಿಸಿದರು.

ಒಂದೆಡೆ ಸಂಪುಟ ಸಂಭ್ರಮ: ಮತ್ತೊಂದೆಡೆ ಬಿಎಸ್‌ವೈಗೆ ಹೊಸ ಸಂದೇಶ ರವಾನಿಸಿದ ಬಿಜೆಪಿ ಶಾಸಕ

ನೂತನ ಆಯ್ಕೆಯಾದ ಆನಂದ್ ಮಾಮನಿಯವರನ್ನು ಸಭಾನಾಯಕ ಕಾಗೇರಿ ಮತ್ತು ಸಿಎಂ ಯಡಿಯೂರಪ್ಪನವರು ಉಪಸಭಾಧ್ಯಕ್ಷರ ಪೀಠಕ್ಕೆ ಕರೆತಂದರು.

ಈ ಹಿಂದೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಜೆಡಿಎಸ್‌ ಶಾಸಕ ಜೆ.ಕೆ ಕೃಷ್ಣಾರೆಡ್ಡಿ  ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದರು. ಆದ್ರೆ, ಅವರು ಮೊನ್ನೆ ರಾಜೀನಾಮೆ ನೀಡಿದ್ದರಿಂದ ಆನಂದ್ ಮಾಮನಿ ಅವರನ್ನ ಆಯ್ಕೆ ಮಾಡಲಾಗಿದೆ.

ಸಂಪುಟ ವಿಸ್ತರಣೆ: ಬಹಿರಂಗವಾಗಿ ಬಂಡಾಯ ಬಾವುಟ ಹಾರಿಸಿದ ಬಿಜೆಪಿ ಶಾಸಕ

ವಿಶೇಷ ಅಂದ್ರೆ ಈ ಹಿಂದೆ ಆನಂದ್ ಮಾಮನಿ ಅವರ ತಂದೆ ಚಂದ್ರಶೇಖರ ಮಾಮನಿ ಅವರು ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದರು. 

ಪಕ್ಷ ನಿಷ್ಠರಿಗೆ ಕಾಲವಿಲ್ಲ ಎಂದು ಬಿಜೆಪಿ ಶಾಸಕ ಆನಂದ ಮಾಮನಿ ಟ್ವೀಟ್‌ ಮೂಲಕ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಉಪಸಭಾಪತಿಯ ಕೃಷ್ಣರೆಡ್ಡಿ ಅವರನ್ನ ರಾಜೀನಾಮೆ ಕೊಡಿಸಿ ತಮ್ಮನ್ನು ಆಯ್ಕೆ ಮಾಡಬೇಕೆಂದು ಹೇಳಿಕೊಂಡಿದ್ದರು.

Follow Us:
Download App:
  • android
  • ios