ಬೆಂಗಳೂರು, (ನ.10) : ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭೆ ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ಮುಗಿದಿದೆ.

ಈ ಅಂಚೆ ಮತ ಎಣಿಕೆಯಲ್ಲಿ ಶಿರಾ ಹಾಗೂ ಆರ್‌ಆರ್‌ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಆರ್‌.ಆರ್‌.ನಗರದಲ್ಲಿ ಮುನಿರತ್ನ ಅವರಿಗೆ 253, ಕಾಂಗ್ರೆಸ್ ಅಭ್ಯರ್ಥಿ 115 ಹಾಗೂ ಜೆಡಿಎಸ್‌ನ ಕೃಷ್ಣಮೂರ್ತಿ ಅವರಿಗೆ 34 ಅಂಚೆ ಮತಗಳನ್ನ ಪಡೆದುಕೊಂಡಿದ್ದಾರೆ.

ಶಿರಾ ಬೈ ಎಲೆಕ್ಷನ್: ದೇವಿಯ ಪವಾಡ, ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು..! 

ಇನ್ನು ಶಿರಾದಲ್ಲೂ ಸಹ ಬಿಜೆಪಿ ಅಭ್ಯರ್ಥಿ ಡಾ. ರಾಜೇಸ್‌ಗೌಡ 70 ಅಂಚೆ ಮತ ಪಡೆದುಕೊಂಡು ಮುನ್ನಡೆ ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ನ ಜಯಚಂದ್ರ ಅವರಿಗೆ 33 ಮತ್ತು ಜೆಡಿಎಸ್‌ನ ಅಮಾಜಮ್ಮಾ 15 ಅಂಚೆ ಮತಗಳನ್ನ ಪಡೆದುಕೊಂಡಿದ್ದಾರೆ.