'ಕಾಂಗ್ರೆಸ್‌ ಪಕ್ಷಕ್ಕೆ ನೀಡಿದರೇ ಕಸದ ಬುಟ್ಟಿಗೆ ಹಾಕಿದಂತೆ'

ಹೆಚ್ಚುತ್ತಿರುವ ದೌರ್ಜನ್ಯ ದಬ್ಬಾಳಿಕೆಯಿಂದ ಜನ-ಸಾಮಾನ್ಯರು ರೋಸಿಹೋಗಿದ್ದು, ಶಾಸಕರು ರೈತರ ಜಮೀನುಗಳನ್ನು ಕಡಿಮೆ ದರದಲ್ಲಿ ಖರೀದಿಸಿದ್ದಾರೆ: ಮಾರುತಿ ಅಷ್ಟಗಿ 

BJP Leader Maruti Ashtagi Slams Congress grg

ಯಮಕನಮರಡಿ(ಮಾ.07):  ಮತಕ್ಷೇತ್ರದಲ್ಲಿ ಕೈಗೊಂಡಿರುವ ಸ್ವಾಭಿಮಾನ ಪಾದಯಾತ್ರೆಯಲ್ಲಿ ಕ್ಷೇತ್ರದ ಜನ ಬದಲಾವಣೆ ಬಯಸುತ್ತಿದ್ದು, ಹಾಲಿ ಶಾಸಕರನ್ನು ಮರಳಿ ಹಿಲ್‌ಗಾರ್ಡ್‌ಗೆ ಕಳಿಸಿಕೊಡುವುದು ನಿಶ್ಚಿತ ಎಂದು ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಹೇಳಿದರು.

ಹತ್ತರಗಿ ಗ್ರಾಮದಲ್ಲಿ ಭಾನುವಾರ ಸ್ವಾಭಿಮಾನದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ದಬ್ಬಾಳಿಕೆಯಿಂದ ಜನ-ಸಾಮಾನ್ಯರು ರೋಸಿಹೋಗಿದ್ದು, ಶಾಸಕರು ರೈತರ ಜಮೀನುಗಳನ್ನು ಕಡಿಮೆ ದರದಲ್ಲಿ ಖರೀದಿಸಿದ್ದಾರೆ. ಈ ಭಾಗದಿಂದ ಈ ಹಿಂದೆ ಪ್ರತಿನಿಧಿಸಿದ ಉಮೇಶ ಕತ್ತಿಯವರಾಗಲಿ, ಎ.ಬಿ.ಪಾಟೀಲರಾಗಲಿ ರೈತರ ಜಮೀನುಳನ್ನು ಖರೀಸಿದ ಉದಾಹರಣೆಗಳಿಲ್ಲ. ರುಸ್ತುಂಪೂರ ಯಾತ ನೀರಾವರಿ, ಕುರಣಿಯಾತ ನೀರಾವರಿ, ಅಪೂರ್ಣವಿದ್ದು ಕೊನೆ ಹಂತದವರೆಗೂ ಇಂದಿಗೂ ರೈತರಿಗೆ ನೀರು ತಲುಪಿಲ್ಲ. ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಹಡಗು. ಒಂದು ಮತ ಕೂಡಾ ಕಾಂಗ್ರೆಸ್‌ ಪಕ್ಷಕ್ಕೆ ನೀಡಿದರೇ ಕಸದ ಬುಟ್ಟಿಗೆ ಹಾಕಿದಂತೆ. 2023 ವಿಧಾನಸಭಾ ಚುನಾವಣೆಯಲ್ಲಿ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.

SUVARNA SPECIAL: ಲಕ್ಷ್ಮೀ ಹೆಬ್ಬಾಳ್ಕರ್ VS ಜಾರಕಿಹೊಳಿ ಮಧ್ಯೆ ನೀನಾ.. ನಾನಾ.. ಕಾಳಗ..!

ಬಿಜೆಪಿ ಮುಖಂಡ ರವಿಂದ್ರ ಹಂಜಿ ಮಾತನಾಡಿ, ಅಂದು ಸ್ವಾತಂತ್ರ್ಯಕ್ಕಾಗಿ ಮಾಹಾತ್ಮಾ ಗಾಂಧೀಜಿಯವರು ಪಾದಯಾತ್ರೆ ಕೈಗೊಂಡಿದ್ದರು. ಇಂದು ಮಾರುತಿ ಅಷ್ಟಗಿಯವರೂ ಸ್ವಾಭಿಮಾನದ ಯಾತ್ರೆ ಕೈಗೊಂಡು ಕ್ಷೇತ್ರದಲ್ಲಿ ಬದಲಾವಣೆಗಾಗಿ ಶ್ರಮಿಸುತ್ತಿದ್ದಾರೆ. ಹಿಂದೂಗಳ ಮತಗಳನ್ನು ಪಡೆದು ಶಾಸಕರಾಗಿದ್ದನ್ನು ಅವರು ಮರೆತಿದ್ದು, ಹಿಂದೂ ಧರ್ಮಕ್ಕೆ ಅವಮಾನಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನಾನು ಕ್ಷೇತ್ರಕ್ಕೆ ಬಂದಿಲ್ಲ. ಆದರೂ ಜಯಸಿಕ್ಕಿತ್ತು ಎಂದು ಶಾಸಕರು ಸುಳ್ಳು ಹೇಳುತ್ತಿದ್ದು, ಸೋಲುವ ಭೀತಿಯಿಂದ ಕೆಲ ಗ್ರಾಮಗಳಲ್ಲಿ ಬಂದು ವಾಸ್ತವ್ಯ ಮಾಡಿದ್ದ ನಿದರ್ಶನಗಳಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಧುರಿಣರಾದ ಶಿವಾನಂದ ಪಡಗೂರಿ ಮಾತನಾಡಿದರು. ಪಾದಯಾತ್ರೆಯಲ್ಲಿ ಸಿದ್ದಣ್ಣ ಹಾಲದೇವರ ಮಠ ಚಂದ್ರಕಾಂತ ಕಾಪಸಿ, ಅಣ್ಣಾಸಾಹೇಬ ಬೆನವಾಡಿ, ಅಜೀತ ಮಗದುಮ್ಮ, ಸುರೇಶ ಕೇದನೂರಿ, ಸಿದ್ದು ಪಟ್ಟಣ್ಣಶೆಟ್ಟಿ, ವಿಲಾಸ ತವಗ, ಗಣೇಶ ಕೇದನೂರಿ, ರವಿ ಕುರಾಡೆ ಮುಂತಾದವರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios