ಕರ್ನಾಟಕದಲ್ಲಿ ಹುಚ್ಚುದೊರೆ ಆಡಳಿತ: ಕೆ.ಎಸ್. ಈಶ್ವರಪ್ಪ

ನಿಮ್ಮ ಗ್ಯಾರಂಟಿ ಯೋಜನೆಗಳನ್ನು ನಾವು ಕೇಳುತ್ತಿಲ್ಲ. ರಾಜ್ಯದ ರೈತರಿಗೆ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ಪರಿಕರಗಳನ್ನು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಈ ಮೊದಲಿನಂತೆ ನೀಡದಿದ್ದರೆ ರೈತರು ಎಲ್ಲಿಗೆ ಹೋಗಬೇಕು? ಹುಚ್ಚು ದೊರೆಯ ಆದೇಶದಿಂದ ರೈತರು ನೇಣು ಹಾಕಿಕೊಳ್ಳುವಂತಾಗಿದೆ: ಕೆ.ಎಸ್. ಈಶ್ವರಪ್ಪ 

BJP Leader KS Eshwarappa Slams CM Siddaramaiah grg

ಕೊಪ್ಪಳ(ನ.08):  ರಾಜ್ಯದಲ್ಲಿ ಹುಚ್ಚುದೊರೆ ಆಡಳಿತ ಇದೆ. ಹೀಗಾಗಿಯೇ ಇಂಥವೆಲ್ಲ ಆದೇಶ ಬರುತ್ತಿವೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು. ನಗರದಲ್ಲಿ ಸಂಸದ ಸಂಗಣ್ಣ ಕರಡಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮ್ಮ ಗ್ಯಾರಂಟಿ ಯೋಜನೆಗಳನ್ನು ನಾವು ಕೇಳುತ್ತಿಲ್ಲ. ರಾಜ್ಯದ ರೈತರಿಗೆ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ಪರಿಕರಗಳನ್ನು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಈ ಮೊದಲಿನಂತೆ ನೀಡದಿದ್ದರೆ ರೈತರು ಎಲ್ಲಿಗೆ ಹೋಗಬೇಕು? ಹುಚ್ಚು ದೊರೆಯ ಆದೇಶದಿಂದ ರೈತರು ನೇಣು ಹಾಕಿಕೊಳ್ಳುವಂತಾಗಿದೆ. ರೈತರ ಹಿತ ಕಾಯಲು ಆಗದಿದ್ದರೆ ಮೊದಲು ನೀವು ರಾಜೀನಾಮೆ ಕೊಟ್ಟು ಹೋಗಿ, ನಾವು ಬಂದು ರೈತರಿಗೆ ಮೊದಲಿನಂತೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮತ್ತು ಅದರ ಉಪಕರಣಗಳನ್ನು ಕೊಡುವುದನ್ನು ಮುಂದುವರಿಸುತ್ತೇವೆ ಎಂದರು.

ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ: ಈಶ್ವರಪ್ಪ

ರಾಜ್ಯದ ರೈತರ ಸಮಸ್ಯೆಗೆ ಸ್ಪಂದಿಸಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ಶ್ಲಾಘನೀಯ. ಇದರಿಂದ ಪಕ್ಷವನ್ನು ಜಾಗೃತಗೊಳಿಸಿದ್ದಾರೆ. ಅವರಿಗೆ ಪಕ್ಷಾತೀತವಾಗಿ ಬೆಂಬಲ ನೀಡುತ್ತಿದ್ದಾರೆ. ಇಂಥ ಹೋರಾಟ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ ಎಂದರು.

ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಕೂಡಲೇ ಆದೇಶ ರದ್ದು ಮಾಡಿ, ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

Latest Videos
Follow Us:
Download App:
  • android
  • ios