ಸಿದ್ದುಗೆ ಉಲ್ಟಾ ಮಚ್ಚೆ, ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತೆ: ಸಿ.ಟಿ.ರವಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಉಲ್ಟಾ ಮಚ್ಚೆ ಇದ್ದು, ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು (ಜು.05): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಉಲ್ಟಾ ಮಚ್ಚೆ ಇದ್ದು, ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹೇಳಿದ್ದು ಉಲ್ಟಾಆಗುತ್ತದೆ ಎಂಬುದು ಐತಿಹಾಸಿಕ ಸತ್ಯ. ಅವರಿಗೆ ಅವರ ಮಾತನ್ನು ಬೇಕಾದರೆ ಪುನರ್ ಪ್ರಸಾರ ಮಾಡಬೇಕು. ನರೇಂದ್ರ ಮೋದಿ ಅವರು ಪ್ರಧಾನಿಯಾಗಲ್ಲ ಎಂದಿದ್ದರು. ಆದರೆ ಎರಡು ಬಾರಿ ಪ್ರಧಾನಿಯಾದರು. ನಾನೇ ಮುಂದಿನ ಮುಖ್ಯಮಂತ್ರಿ ಎಂದರು.
ಚಾಮುಂಡೇಶ್ವರಿಯಲ್ಲಿ ಸೋತರು. ಸಿದ್ದರಾಮಯ್ಯ ಅವರಿಗೆ ಉಲ್ಟಾಮಚ್ಚೆ ಇರಬಹುದು, ಬೇಕಾದರೆ ಪರೀಕ್ಷೆ ಮಾಡಲಿ ಲೇವಡಿ ಮಾಡಿದರು. ಕಾಂಗ್ರೆಸ್ ಆಂತರಿಕ ಸಮೀಕ್ಷೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಖಾಲಿ ಡಬ್ಬಾ ಜಾಸ್ತಿ ಶಬ್ದ ಮಾಡುತ್ತದೆ. ಉತ್ತರಾಖಂಡ ಚುನಾವಣೆಗೆ ಮುಂಚೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಆದರೆ ಬಂತಾ? ಗೋವಾದಲ್ಲಿ ಖಾತೆ ಹಂಚಿಕೆಯನ್ನೂ ಮಾಡಿದ್ದರು. ಪಂಜಾಬ್‌ನಲ್ಲಿ ಸೋತು ಹೋದರು. ಉತ್ತರಪ್ರದೇಶದಲ್ಲಿ ‘ಮೇ ಲಡ್ಕೀ ಹೂಂ, ಲಡ್ ಸಕ್ತೀ ಹೂಂ’ ಎಂದು ಡ್ರಾಮಾ ಮಾಡಿದರು. ಆದರೆ, ಅಲ್ಲಿ ಏನಾಯಿತು? ಚುನಾವಣೆಗೂ ಮುಂಚೆ ಕಾಂಗ್ರೆಸ್ ಬಹಳ ಶಬ್ದ ಮಾಡುತ್ತದೆ ಎಂದು ಟೀಕಿಸಿದರು.
ದತ್ತಪೀಠದ ವಿವಾದ: ಸುದೀರ್ಘ ಹೋರಾಟಕ್ಕೆ ಸಿಕ್ಕ ಗೆಲುವು, ಸಿ.ಟಿ.ರವಿ
ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಆರೋಪಿಗಳು ಬಿಜೆಪಿ ಕಾರ್ಯಕರ್ತರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮದು ಆನ್‌ಲೈನ್ ಸದಸ್ಯತ್ವ ಅಭಿಯಾನ. ಪಕ್ಷದ ಮುಂಡರ ಜತೆ ಸೆಲ್ಫಿ ಯಾರು ಬೇಕಾದರೂ ತೆಗೆದುಕೊಳ್ಳಬಹುದು. ಫೋಟೋ ತೆಗೆದುಕೊಂಡವರು ಬಿಜೆಪಿ ನಾಯಕರಾಗಲ್ಲ. ಕೆಲವರು ತಮ್ಮ ಕಾರ್ಯವನ್ನು ಸುಲಭವಾಗಿ ಮಾಡಲು ಅಥವಾ ಬಿಜೆಪಿ ನಾಯಕರನ್ನು ಒಳಗಿದ್ದು ಟಾರ್ಗೆಟ್ ಮಾಡಲು ಸುಲಭ ಎಂದು ಸೇರಿರಬಹುದು. ಮಾಸ್ ಪಕ್ಷ ಎಂದ ಮೇಲೆ ಒಳ್ಳೆ ನೀರು ಮಾತ್ರವಲ್ಲ, ಕಸ ಕಡ್ಡಿ ಕೂಡ ಬರುತ್ತವೆ. ನಂತರ ಫಿಲ್ಟರ್ ಮಾಡಲಾಗುತ್ತದೆ ಎಂದು ಹೇಳಿದರು.
ಸುಳ್ಳು, ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ: ಸತ್ಯ ಮತ್ತು ಸಿದ್ದರಾಮಯ್ಯನವರಿಗೂ ಎಣ್ಣೆ, ಸೀಗೆಕಾಯಿ ಸಂಬಂಧ. ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. ಸುಳ್ಳಿಗೆ ಯಾವುದಾದರೂ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರಾರಿಗೂ ಸಿಗುವುದಿಲ್ಲ. ಸುಳ್ಳು ಹೇಳುವುದರಲ್ಲಿ ಅವರಷ್ಟು ನಿಷ್ಟಾರ್ಥರು ಇನ್ಯಾರು ಇಲ್ಲ. ದಿನ ನಿತ್ಯ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.
ಮಹಾರಾಷ್ಟ್ರದಲ್ಲಿ ಈಗಿರುವುದು ಮಿಸ್‌ಮ್ಯಾಚ್ DNA ಸರ್ಕಾರ!
ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿದ್ದರು. ಅವರ ಅವಧಿಯಲ್ಲೇ ಆಕ್ಸಿಜನ್ ಪ್ಲಾಂಟ್ ಹಾಕಿದ್ದರೆ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಇಲ್ಲದೇ ಜನ ಒದ್ದಾಡುವ ಪ್ರಶ್ನೆ ಬರುತ್ತಿತ್ತಾ? ನಮ್ಮ ಪ್ರಧಾನಿ ಮೋದಿ ಜಗತ್ತಿನ ಯಾವುದೇ ರಾಷ್ಟ್ರಗಳು ಸ್ಪಂದಿಸಲಾರದಷ್ಟುವೇಗಗತಿಯಲ್ಲಿ ಪ್ರತಿ ಆಸ್ಪತ್ರೆಗೂ ಆಕ್ಸಿಜನ್ ಪ್ಲಾಂಟ್‌ಗಳನ್ನು ಹಾಕಿ, ತ್ವರಿತಗತಿಯಲ್ಲಿ ಆಕ್ಸಿಜನ್ ಸರಬರಾಜು ಮಾಡುವ ಕ್ರಮ ಕೈಗೊಂಡರು. ಇಲ್ಲದಿದ್ದರೆ ಈ ಸಾವಿನ ಪ್ರಮಾಣ ಹತ್ತುಪಟ್ಟು ಹೆಚ್ಚಾಗುತ್ತಿತ್ತು. ನಾವೆಲ್ಲರೂ ಬೀದಿಲಿ ನಿಂತು ಆಕ್ಸಿಜನ್‌ಗಾಗಿ ಪರದಾಡುತ್ತಿದ್ದ ಸಂದರ್ಭ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಏನು ಮಾಡುತ್ತಿದ್ದರು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ ಎಂದರು.