'ಶ್ರೀರಾಮುಲು ವರ್ಚಸ್ಸು ಸಹಿಸದೆ ಸಿದ್ದರಾಮಯ್ಯ ಹತಾಶ'

ಈಗಾಗಲೇ ಸಿದ್ದರಾಮಯ್ಯ ಹಿಂದುಳಿದ ನಾಯಕ ಎಂದು ಹೇಳಿಕೊಂಡು ಎಸ್ಸಿ, ಎಸ್ಟಿ ಸಮುದಾಯಗಳನ್ನು ದಿಕ್ಕು ತಪ್ಪಿಸಿ ಅವಕಾಶ ರಾಜಕಾರಣ ಮಾಡುವ ಮೂಲಕ ಹಿಂದುಳಿದ ದಲಿತ ಸಮುದಾಯಗಳನ್ನು ತುಳಿಯುತ್ತಿದ್ದಾರೆ ಎಂದರ ಅಗರ ರಾಜು 

BJP Leader Agara Raju Slams Former CM Siddaramaiah grg

ಯಳಂದೂರು(ಅ.21):  ಸಚಿವ ಶ್ರೀರಾಮುಲು ಅವರನ್ನು ಪೆದ್ದ ಎಂದು ಜರಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀರಾಮುಲು ಅವರ ವರ್ಚಸ್ಸು ಸಹಿಸಲಾಗದೆ ಜಿಗುಪ್ಸೆಯಿಂದ ಹತಾಶೆ ಹೇಳಿಕೆ ನೀಡುವ ಮೂಲಕ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ‍್ಯಕಾರಣಿ ಸದಸ್ಯ ಅಗರ ರಾಜು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಸಿದ್ದರಾಮಯ್ಯ ಹಿಂದುಳಿದ ನಾಯಕ ಎಂದು ಹೇಳಿಕೊಂಡು ಎಸ್ಸಿ, ಎಸ್ಟಿ ಸಮುದಾಯಗಳನ್ನು ದಿಕ್ಕು ತಪ್ಪಿಸಿ ಅವಕಾಶ ರಾಜಕಾರಣ ಮಾಡುವ ಮೂಲಕ ಹಿಂದುಳಿದ ದಲಿತ ಸಮುದಾಯಗಳನ್ನು ತುಳಿಯುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ರಮೇಶ್‌ ಜಾರಕಿ ಹೋಳಿ, ಜಿ.ಪರಮೇಶ್ವರ್‌ ಸೇರಿದಂತೆ ಮುಂಚೂಣಿ ನಾಯಕರುಗಳ ರಾಜಕೀಯ ಭವಿಷ್ಯ ಹಾಳು ಮಾಡಿದರು. ನಾಯಕ ಸಮುದಾಯ ಮತ್ತು ದಲಿತ ಸಮುದಾಯಗಳನ್ನು ರಾಜಕೀಯವಾಗಿ ತುಳಿಯುವ ಮೂಲಕ ಜನಾಂಗಕ್ಕೆ ಸಿಗಬೇಕಾದ ರಾಜಕೀಯ ಪ್ರಾತಿನಿಧ್ಯವನ್ನು ಕಸಿದುಕೊಂಡ ಸ್ವಾರ್ಥ ರಾಜಕಾರಣಿ ಎಂದು ಕೀಡಿಕಾರಿದರು.

ಶ್ರೀರಾಮುಲರನ್ನ ಪೆದ್ದ ಎಂದ ಸಿದ್ದರಾಮಯ್ಯಗೆ ದುರಂಹಕಾರ: ರವಿಕುಮಾರ್‌

ಬಿಜೆಪಿ ಸರ್ಕಾರ ಆಡಳಿತದಲ್ಲಿ ವಾಲ್ಮೀಕಿ ಜಯಂತಿ, ವಾಲ್ಮೀಕಿ ಸಮುದಾಯದಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ, ಈಗ ಮೀಸಲಾಯಿತಿ ಕೂಡಾ ಬಿಜೆಪಿ ಸರ್ಕಾರ ನೀಡಿದ್ದು ಸಮುದಾಯದ ಪರವಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಮೂಡ್ನಾಕೂಡು ಪ್ರಕಾಶ್‌, ಯಳಂದೂರು ಮಂಡಲ ಬಿಜೆಪಿ ಉಪಾಧ್ಯಕ್ಷ ಅಂಬಳೆಮಾದನಾಯಕ, ತಾಲೂಕು ನಾಯಕ ಮಂಡಳಿ ಕಾರ್ಯದರ್ಶಿ ಮದ್ದೂರು ವೆಂಕಟಚಾಲ, ಎಸ್ಟಿಮೋರ್ಚಾ ಟೌನ್‌ ಅಧ್ಯಕ್ಷ ವೈ.ಎಸ್‌.ಬೀಮಪ್ಪ ಇದ್ದರು.
 

Latest Videos
Follow Us:
Download App:
  • android
  • ios