Asianet Suvarna News Asianet Suvarna News

Ticket fight: ಹಾಲಿ ಶಾಸಕ ಎಂಪಿ ಕುಮಾರಸ್ವಾಮಿ ಬಿಟ್ಟು  ಹೊಸ ಮುಖಕ್ಕೆ ಮಣೆ ಹಾಕಲು ಬಿಜೆಪಿ ಪ್ಲಾನ್!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ನಗರದ ಐಡಿಎಸ್‌ಜಿ ಕಾಲೇಜಿನ ಗ್ರಂಥಪಾಲಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಿದ್ದಾರೆ. 

BJP is thinking of giving ticket to someone else instead of MP Kumaraswamy at mudigere rav
Author
First Published Feb 3, 2023, 1:33 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಫೆ.3): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ನಗರದ ಐಡಿಎಸ್‌ಜಿ ಕಾಲೇಜಿನ ಗ್ರಂಥಪಾಲಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಿದ್ದಾರೆ. 

ಆರೆಸ್ಸೆಸ್(RSS) ಕಟ್ಟಾಳು ಆಗಿರುವ ನರೇಂದ್ರ ಅವರೇ ಜಿಲ್ಲೆಯ ಮೂಡಿಗೆರೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿತವಾಗಿದೆ. ಹಾಗಾಗಿ, ಆರೆಸ್ಸೆಸ್ ಕೂಡ ಈಗಾಗಲೇ ಅವರನ್ನ ಸಂಘದ ಎಲ್ಲಾ ಹುದ್ದೆಯಿಂದ ವಿಮುಕ್ತಿಗೊಳಿಸಿದೆ. ಟಿಕೆಟ್ ಅನೌನ್ಸ್ ಆದ ಕೂಡಲೇ ಗ್ರಂಥಪಾಲಕರ ಹುದ್ದೆಗೂ ರಾಜೀನಾಮೆ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ.  ಮೂಡಿಗೆರೆ(mudigere)ಯಲ್ಲಿ ಮೂರು ಬಾರಿ ಶಾಸಕರಾಗಿರುವ ಎಂ.ಪಿ.ಕುಮಾರಸ್ವಾಮಿ(MP Kumaraswamy) ಹಾಲಿ ಬಿಜೆಪಿ ಶಾಸಕರಾಗಿದ್ದಾರೆ. ಆದರೂ, ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಲು ಮುಂದಾಗಿದೆ. 

Mudigere MLA Beaten: ಚುನಾವಣೆಗೆ ನಿಲ್ಲದಂತೆ ಸಂಚು ಮಾಡಿ ನನ್ನ ಮೇಲೆ ಹಲ್ಲೆ: ಶಾಸಕ ಕುಮಾರಸ್ವಾಮಿ

ಹೊಸ ಮುಖಕ್ಕೆ ಮಣೆ ಹಾಕಲು ಚಿಂತನೆ : 

ಹಾಲಿ ಶಾಸಕಎಂ.ಪಿ.ಕುಮಾರಸ್ವಾಮಿಗೆ ಪಕ್ಷದೊಳಗೆ  ವಿರೋಧ ಇರೋದ್ರಿಂದ ಬಿಜೆಪಿ ಗುಜರಾತ್ ಮಾದರಿ(Gujarat model)ಯಲ್ಲಿ ಹೊಸ ಮುಖಕ್ಕೆ ಮಣೆ ಹಾಕಲು ಚಿಂತಿಸಿದೆ. ಗುಜರಾತ್ ಮಾಡೆಲ್ ಜಾರಿಯಾಗಿದ್ದೇ ಆದಲ್ಲಿ ಕುಮಾರಸ್ವಾಮಿಗೆ ಟಿಕೆಟ್ ಕೈತಪ್ಪೋದು ಗ್ಯಾರೆಂಟಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೂಡಿಗೆರೆಯಲ್ಲಿ ಹಾಲಿ ಐದಾರು ಜನ ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಈ ಮಧ್ಯೆ ನರೇಂದ್ರ ಹೆಸರು ಅಚ್ಚರಿ ಎಂಬಂತೆ ಹೊರಬಿದ್ದಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ಕೂಡ ನರೇಂದ್ರ ಅವರಿಗೆ ಕ್ಷೇತ್ರದಲ್ಲಿ ಓಡಾಡುವಂತೆ ಸೂಚಿಸಿದ್ದು, ಸಂಘದ ಎಲ್ಲಾ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿದೆ.  

ಮೀಸಲು ಕ್ಷೇತ್ರ ಹಾಗೂ ಹಿಂದುತ್ವದ ಬೆಲ್ಟ್ ಆಗಿರುವ ಮಲೆನಾಡಲ್ಲಿ ಗೆಲ್ಲುವ ಕುದುರೆ ಬಿಜೆಪಿ ಮಣೆ ಹಾಕಲು ಮುಂದಾಗಿದೆ. ಹಲವು ದಶಕಗಳಿಂದ ಸಂಘದ ಕಾರ್ಯಕರ್ತರಾಗಿರುವ ನರೇಂದ್ರ ಅವರನ್ನ ಬಿಜೆಪಿ ಕಣಕ್ಕಿಳಿಸಲು ಎಲ್ಲಾ ಸಿದ್ಧತೆ ನಡೆಸಿದೆ. ಟಿಕೆಟ್ ಅನೌನ್ಸ್ ಆದ ಕೂಡಲೇ ನರೇಂದ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. 

ಮೊದಲ ಬಾರಿ ಸಚಿವ ಸ್ಥಾನದ ಆಸೆ ಕೈಬಿಟ್ಟ ಶಾಸಕ ಕುಮಾರಸ್ವಾಮಿ!

ಮೀಸಲು ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಪೈಪೋಟಿ 

ಹಾಲಿ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರತಿನಿಧಿಸುವ ಮೂಡಿಗೆರೆ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಾಗಿ ಬೆಳೆಯುತ್ತಿದೆ, ಬಿಜೆಪಿಯಲ್ಲಿ 6 ಹಾಗೂ ಕಾಂಗ್ರೆಸ್ ನಲ್ಲೂ 6 ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಲ್ಲಿ ನರೇಂದ್ರ ಸೇರಿದಂತೆ ದೀಪಕ್ ದೊಡ್ಡಯ್ಯ, ವಿಜಯ್‍ಕುಮಾರ್ ಹಾಗೂ ವ ಸುಷ್ಮಾ ಎಂಬುವರು ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಯಾರಿಗೆ ಸಿಗುತ್ತೆ ಟಿಕೆಟ್ ಎಂಬ ಕುತೂಹಲ ಹೆಚ್ಚಾಗಿದೆ. ಕಾದು ನೋಡಬೇಕಷ್ಟೆ.

Follow Us:
Download App:
  • android
  • ios