ಬಿಜೆಪಿ ಭ್ರಷ್ಟ, ಕಮೀಷನ್‌ ಸರ್ಕಾರ: ಕಾಂಗ್ರೆಸ್‌ ಅಭಿಯಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಬಿಡುಗಡೆ ಭ್ರಷ್ಟಾಚಾರ ನಿಯಂತ್ರಣಕ್ಕೆ ವಿಶೇಷ ಸಹಾಯವಾಣಿ ಆರಂಭ

ಬೆಂಗಳೂರು (ಸೆ.14) : ಬಿಜೆಪಿ ಎಂದರೆ ಭ್ರಷ್ಟ, ಶೇ.40 ಕಮೀಷನ್‌ ಸರ್ಕಾರ ಎಂಬ ಅಭಿಯಾನವನ್ನು ಕಾಂಗ್ರೆಸ್‌ ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇರುವ 40 ಪರ್ಸೆಂಟ್‌ ನೋಟು, ಸರ್ಕಾರವನ್ನು ತರಾಟೆ ತೆಗೆದುಕೊಳ್ಳುವ ವಿಡಿಯೋ ಬಿಡುಗಡೆ ಮಾಡಿದೆ. ಜತೆಗೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಸಹಾಯವಾಣಿಯನ್ನೂ ಆರಂಭಿಸಿದೆ.

ಎಸಿಬಿ ರದ್ದು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗೋ ಪ್ರಶ್ನೆನೇ ಇಲ್ಲ: ಸಿಎಂ ಬೊಮ್ಮಾಯಿ

ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತಿತರರು, ಹಾಡು, ಪರ್ಸೆಂಟೇಜ್‌ ನೋಟು, ಬಿಜೆಪಿ ಲಂಚದ ರೇಟ್‌ ಕಾರ್ಡ್‌ ಬಿಡುಗಡೆಗೊಳಿಸಿ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ, ಶೇ.40 ಕಮೀಷನ್‌ ಸರ್ಕಾರ ಎಂದು ಕೆಂಪಣ್ಣ ಮಾಡಿದ್ದ ಆರೋಪ, ಮಠಗಳೂ ಕಮೀಷನ್‌ ನೀಡಬೇಕು ಎಂದು ಸ್ವಾಮೀಜಿಯೊಬ್ಬರು ನೀಡಿದ್ದ ಹೇಳಿಕೆ, ಪಿಎಸ್‌ಐ ಹಗರಣ ಮತ್ತಿತರ ಅಂಶಗಳು ವಿಡಿಯೋದಲ್ಲಿವೆ.

ಲಂಚ ಕೇಳಿದರೆ ಕರೆ ಮಾಡಿ :

ಯಾರಾದರೂ ಲಂಚ ಕೇಳಿದರೆ ಜನತೆ ಕಾಂಗ್ರೆಸ್‌ ಸಹಾಯವಾಣಿ ಸಂಖ್ಯೆ 84477 04040 ಗೆ ಕರೆ ಮಾಡಿ ಅಥವಾ ಡಿಡಿಡಿ.40pಛ್ಟ್ಚಿಛ್ಞಿಠಿsa್ಟka್ಟa.್ಚಟಞ ಗೆ ಲಾಗಿನ್‌ ಆಗಿ ಮಾಹಿತಿ ನೀಡಿ. ನಿಮ್ಮ ಹೆಸರು ಗೌಪ್ಯವಾಗಿಟ್ಟು ಸಹಾಯ ಮಾಡಲಾಗುವುದು. ಯಾವುದೇ ಇಲಾಖೆ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳು ಲಂಚ ಕೇಳಿದರೆ ನಮ್ಮ ಗಮನಕ್ಕೆ ತನ್ನಿ ನಿಮ್ಮ ಸಮಸ್ಯೆ ಪರಿಹರಿಸುತ್ತೇವೆ ಎಂದು ಕಾಂಗ್ರೆಸ್‌ ಭರವಸೆ ನೀಡಿದೆ.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಬಿಜೆಪಿ ಭ್ರಷ್ಟಸರ್ಕಾರ, ಶೇ.40 ಕಮೀಷನ್‌ ಸರ್ಕಾರ ಎಂದು ಕಾಂಗ್ರೆಸ್‌ ಅಭಿಯಾನ ಆರಂಭಿಸುತ್ತಿದೆ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು ಮಾಡಿ ಬಂಧಿಸಿಲ್ಲ. ಆದರೆ ಸರ್ಕಾರ ಬಿ ರಿಪೋರ್ಚ್‌ ಸಲ್ಲಿಕೆಯಾಗುವಂತೆ ನೋಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕಾಮಗಾರಿಗಳಲ್ಲಿ ಶೇ.40 ರಷ್ಟುಕಮೀಷನ್‌ ಪಡೆಯಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಮಠಗಳಿಗೆ ನೀಡುವ ಹಣದಲ್ಲಿ ಶೇ.30, ಬಿಬಿಎಂಪಿ ಗುತ್ತಿಗೆಯಲ್ಲಿ ಶೇ.50 ಕಮೀಷನ್‌ ಪಡೆಯಲಾಗುತ್ತಿದೆ. ಮೋದಿ ಅವರು ನಾಖಾವೂಂಗಾ ನಾ ಖಾನೇದೂಂಗ ಎನ್ನುತ್ತಾರೆ. ಆದರೆ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್‌ ಖರ್ಗೆ ಮತ್ತಿತರರು ಹಾಜರಿದ್ದರು.\

ಬಿಜೆಪಿಗರಿಗೆ ಸುಳ್ಳನ್ನು ನಿಜ ಮಾಡೋದು, ನಿಜವನ್ನು ಸುಳ್ಳು ಮಾಡೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ: ಜಾರಕಿಹೊಳಿ

 ರಾಜ್ಯ ಸರ್ಕಾರಕ್ಕೆ ಡಿಕೆಶಿ ಸವಾಲು:

ನಾನು ಇಂಧನ ಸಚಿವನಾಗಿದ್ದಾಗ ಅಧಿಕ ಹಣಕ್ಕೆ ವಿದ್ಯುತ್‌ ಖರೀದಿ ಮಾಡಿದ್ದರೆ ತನಿಖೆ ನಡೆಸಲಿ. ಮೇಲ್ನೋಟಕ್ಕೆ ತಪ್ಪು ಕಂಡುಬಂದರೂ ಪ್ರಕರಣ ದಾಖಲಿಸಲಿ. 2010 ರಿಂದ ತನಿಖೆ ನಡೆಸುವುದು ಬೇಡ ನನ್ನ ಅವಧಿಯದ್ದನ್ನು ಮಾತ್ರ ತನಿಖೆ ನಡೆಸಿ. ಪ್ರಕರಣ ದಾಖಲಿಸಲು ಮೂರು ವರ್ಷದಿಂದ ಧಮ್‌ ಇರಲಿಲ್ಲವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇಂಧನ ಸಚಿವ ಸುನೀಲ್‌ ಕುಮಾರ್‌ ಅವರನ್ನು ತರಾಟೆ ತೆಗೆದುಕೊಂಡರು. ನನ್ನ ವಿರುದ್ಧ ಇಡಿ, ಸಿಐಡಿಯಿಂದ ಪ್ರಕರಣ ‘ಫಿಟ್‌’ ಮಾಡಿಸಿದ ರೀತಿಯಲ್ಲಿ ವಿದ್ಯುತ್‌ ಖರೀದಿಗೆ ಸಂಬಂಧಿಸಿದಂತೆಯೂ ‘ಫಿಟ್‌’ ಮಾಡಲಿ ಎಂದು ಸವಾಲು ಹಾಕಿದ ಶಿವಕುಮಾರ್‌, ಪಿಎಸ್‌ಐ ನೇಮಕ ಅಕ್ರಮದಲ್ಲಿ ನಿವೃತ್ತ ಪೇದೆ ಪರಸಪ್ಪ ಅವರಿಂದ 15 ಲಕ್ಷ ರು. ಲಂಚ ಪಡೆದಿದ್ದ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರು ಜೊತೆಗೆ ಇನ್ನೂ 2 ಲಕ್ಷ ಸೇರಿಸಿ ಪರಸಪ್ಪಗೆ 17 ಲಕ್ಷ ರು. ನೀಡಿದ್ದಾರೆ ಎಂದು ಆರೋಪಿಸಿದರು.