ಖಾಲಿ ಚೊಂಬು ಜಾಹಿರಾತಿನಿಂದ ಪ್ರತಿಪಕ್ಷಗಳ ನಾಯಕರು ಎಚ್ಚರಗೊಂಡಿದ್ದಾರೆ. ಬಿಜೆಪಿಯವರು ಪ್ರತಿಯಾಗಿ ಜಾಹಿರಾತು ನೀಡಿದ್ದರೂ ನಮ್ಮ ಜನರಿಗೆ ಯಾವುದು ಸತ್ಯ, ಯಾವುದು ಸುಳ್ಳು ಎಂದು ಯೋಚನೆ ಮಾಡುವ ಶಕ್ತಿ ಹಾಗೂ ಪ್ರಜ್ಞೆ ಎರಡೂ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.  

ಬೆಂಗಳೂರು (ಏ.23): ಖಾಲಿ ಚೊಂಬು ಜಾಹಿರಾತಿನಿಂದ ಪ್ರತಿಪಕ್ಷಗಳ ನಾಯಕರು ಎಚ್ಚರಗೊಂಡಿದ್ದಾರೆ. ಬಿಜೆಪಿಯವರು ಪ್ರತಿಯಾಗಿ ಜಾಹಿರಾತು ನೀಡಿದ್ದರೂ ನಮ್ಮ ಜನರಿಗೆ ಯಾವುದು ಸತ್ಯ, ಯಾವುದು ಸುಳ್ಳು ಎಂದು ಯೋಚನೆ ಮಾಡುವ ಶಕ್ತಿ ಹಾಗೂ ಪ್ರಜ್ಞೆ ಎರಡೂ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಜಾಹಿರಾತು ನೀಡಿದೆ. ಕರ್ನಾಟಕದ ಜನರಿಗೆ ಬಿಜೆಪಿ ಬಹಳ ಅನ್ಯಾಯ ಮಾಡಿದೆ ಎಂದು ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿ ಇಬ್ಬರೂ ಭಾಷಣ ಮಾಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

15 ಲಕ್ಷ ಹಣ ಎಷ್ಟು ಜನರ ಖಾತೆಗೆ ಹೋಗಿದೆ, ಎಷ್ಟು ಉದ್ಯೋಗ ಸಿಕ್ಕಿದೆ ಎಂದು ನಾನು, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರಿಸಲಿ ಎಂದು ಸವಾಲು ಹಾಕಿದರು. ಬಿಜೆಪಿಯವರು ಚಿಪ್ಪು ಅಭಿಯಾನ ಮಾಡುತ್ತಿದ್ದಾರೆ ಎಂದಾಗ, ಕನ್ನಡದ ಬಾವುಟ ಹಿಡಿದು ಹೋರಾಟ ಮಾಡುವವರು ನಾವು, ಕನ್ನಡಿಗರ ಪರವಾಗಿ ನಮ್ಮ ತೆರಿಗೆ, ನಮ್ಮ ಹಕ್ಕು ಹೋರಾಟ ಮಾಡಿದ್ದೇವೆ. ನ್ಯಾಯಯುತವಾಗಿ ನಮಗೆ ಬರಬೇಕಿರುವ ಪಾಲನ್ನು ನಾವು ಕೇಳಿದ್ದೇವೆ. ಒಂದೊಮ್ಮೆ ಆ ರೀತಿ ಅವರು ಪ್ರತಿಭಟನೆ ಮಾಡಿದರೆ ಕನ್ನಡಿಗರಿಗೆ ಮಾಡುವ ಅವಮಾನ ಎಂದು ತಿರುಗೇಟು ನೀಡಿದರು.

ನೇಹಾ ಕೇಸ್‌ ಸಿಬಿಐಗೆ ಒಪ್ಪಿಸಿ, ರಾಜ್ಯ ಸರ್ಕಾರದಿಂದ ಪರಿಹಾರ ನೀಡಿ: ಕಟೀಲ್‌ ಆಗ್ರಹ

ಮುಸ್ಲಿಮರಿಗೆ ಬಿಜೆಪಿಯಿಂದ ಹಿಂಸೆ: ಮುಸ್ಲಿಂ ಧರ್ಮದವರಿಗೆ ಚಿತ್ರಹಿಂಸೆ ನೀಡಿ ಈ ದೇಶ ಬಿಟ್ಟು ಹೋಗಬೇಕು ಎನ್ನುವಂತಹ ವಾತಾವರಣ ಬಿಜೆಪಿ ನಿರ್ಮಾಣ ಮಾಡುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಸಂವಿಧಾನದ ಪ್ರಕಾರ ನಡೆಯುತ್ತಿದ್ದೇವೆ. ಹೀಗಾಗಿ ಯಾವುದೇ ಧರ್ಮದವರು ತಪ್ಪು ಮಾಡಿದರೂ ರಕ್ಷಿಸುವುದಿಲ್ಲ ಎಂದರು.