‘ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಅವರು ಚಕ್ರವ್ಯೂಹದಲ್ಲಿದ್ದು, ಅವರು ಅಭಿಮನ್ಯು ಆಗ್ತಾರಾ ಅಥವಾ ಅರ್ಜುನ ಆಗುತ್ತಾರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕು’ ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ ಕಾಲೆಳೆದಿದ್ದಾರೆ. 

ವಿಧಾನಸಭೆ (ಫೆ.14): ‘ಜೆಡಿಎಸ್‌ ಶಾಸಕ ಶಿವಲಿಂಗೇಗೌಡ ಅವರು ಚಕ್ರವ್ಯೂಹದಲ್ಲಿದ್ದು, ಅವರು ಅಭಿಮನ್ಯು ಆಗ್ತಾರಾ ಅಥವಾ ಅರ್ಜುನ ಆಗುತ್ತಾರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕು’ ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ ಕಾಲೆಳೆದಿದ್ದಾರೆ. ಸೋಮವಾರ ಸದನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮಂಡಿಸಿ ಮಾತನಾಡುವ ವೇಳೆ ಶಿವಲಿಂಗೇಗೌಡ ಅವರು ಸಿ.ಟಿ.ರವಿ ಸದನದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರವಿ ಅವರು, ನಿಮ್ಮನ್ನು ಕಂಡ್ರೆ ನನಗೆ ಅಪಾರ ಪ್ರೀತಿ, ವಿಶ್ವಾಸ. ಹೀಗೆಯೇ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದೆ. ಈಗ ಆ ಕಡೆನೂ, ಈ ಕಡೆನೂ ಇಲ್ಲ ಎಂಬ ದ್ವಂದ್ವ ಸ್ಥಿತಿಯಲ್ಲಿದ್ದೀರಿ. 

ಅವತ್ತು ನನ್ನ ಮಾತು ಕೇಳಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಕಿಚಾಯಿಸಿದರು. ರವಿಗೆ ತಿರುಗೇಟು ನೀಡಿದ ಶಿವಲಿಂಗೇಗೌಡ, ಜನ ಬೆಂಬಲ ಇರುವವರೆಗೆ ನಾನು ಅರ್ಜುನನೇ ಆಗುವುದು. ಅಭಿಮನ್ಯು ರೀತಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಅಭಿಮನ್ಯುನನ್ನು ಸಾಯಿಸಿದ್ದು ಯಾರು ಎಂಬುದು ನನಗೆ ಗೊತ್ತಿಲ್ಲವೇ ಎಂದು ಮಾರ್ಮಿಕವಾಗಿ ನುಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್‌.ಅಶೋಕ್‌, ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಯಾರೆಲ್ಲಾ ಇದ್ದರು ಎಂಬುದನ್ನು ನೋಡಿದರೆ ಕರ್ಣ ಯಾರು ಎಂದು ರೇಗಿಸಿದರು. ಇದಕ್ಕೆ ಶಿವಲಿಂಗೇಗೌಡ, ನಾನು ಭೀಮನ ಪಾತ್ರ ಮಾಡಿರುವುದು, ದುರ್ಯೋಧನ ಪಾತ್ರವಲ್ಲ ಎಂದರು.

ಗೋಡ್ಸೆ ಪೂಜಿಸುವವರು ನಮಗೇನು ಪಾಠ ಮಾಡ್ತಾರೆ?: ಸಿದ್ದರಾಮಯ್ಯ

ಭಾರತದಲ್ಲಿ ನರ ಹರನಾಗಲು ಅವಕಾಶವಿದೆ: ಜಗತ್ತಿನಲ್ಲಿ ಇನ್ನೆಲ್ಲೂ ಕೂಡ ನರನೇ ಹರನಾಗಲು ಅವಕಾಶವಿಲ್ಲ ಆದರೆ ಭಾರತದಲ್ಲಿ ನರ ಹರನಾಗಲು ಅವಕಾಶವಿದೆ. ಸಂಸ್ಕಾರದ ಬದುಕಿನ ಮೂಲಕ ನರ ಹರನಾಗುತ್ತಾನೆಂಬುದು ನಮ್ಮ ಸನಾತನ ಧರ್ಮದ ನಂಬಿಕೆ ಆದಕ್ಕಗನುಗುಣವಾಗಿ ಶ್ರೀ ಮಠ ಸಮಾಜಕ್ಕೆ, ವ್ಯಕ್ತಿಗೆ ಸಂಸ್ಕಾರ ಕೊಡುವ ಸಂಸ್ಕಾರದ ಶ್ರೇಷ್ಟಕೇಂದ್ರವಾಗಿ ಬೆಳೆಯುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರ ಹೊರವಲಯದ ಕಲ್ಯಾಣ ನಗರ ದೊಡ್ಡ ಕುರುಬರ ಹಳ್ಳಿ ಬಸವತತ್ವ ಪೀಠದ ಆವರಣದಲ್ಲಿ 3 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಮಠದ ಶಿಲಾನ್ಯಾಸವನ್ನು ಭಾನುವಾರ ನೆರವೇರಿಸಿ ಮಾತನಾಡಿದರು. ಸಂಸ್ಕಾರ ಕೊಡುವ ಮಠಗಳಲ್ಲಿ ನಾವೆಲ್ಲರೂ ಭಾವನೆಗಳನ್ನು ಜೋಡಿಸಬೇಕು. ನೀರಿಗೆ ಸಂಸ್ಕಾರ ಕೊಟ್ಟರೆ ತೀರ್ಥವಾಗುತ್ತದೆ. ಮನುಷ್ಯನಿಗೆ ಸಂಸ್ಕಾರ ಕೊಟ್ಟಾಗ ಮನುಷ್ಯ ಭಗವಂತನೇ ಆಗಿ ಬಿಡುತ್ತಾನಂತೆ. ಮಠ ಕಟ್ಟುವಂತಹ ಇಂತಹ ಕಾರ್ಯಗಳಲ್ಲಿ ಪ್ರತಿಯೊಬ್ಬ ಭಕ್ತರದ್ದು ಅಳಿಲು ಭಕ್ತಿ ಮರಳು ಸೇವೆ ಇರಬೇಕು ಎಂಬುದು ನನ್ನ ವಿನಂತಿ. ಇಲ್ಲದಿದ್ದರೆ ಸರ್ಕಾರ ಕಟ್ಟಿಕೊಟ್ಟಕಟ್ಟಡ ಎಂದಾಗಬಾರದು. ಸಾಮರ್ಥ್ಯವಿಲ್ಲದವರು ಅಳಿಲಿನ ರೀತಿ ಮರುಳು ಸೇವೆ ಮಾಡಬಹುದು ಸಾಮರ್ಥ್ಯವಿದ್ದವರು ಮರಳು ಸೇವೆ ಮಾಡದೆ ಬಂಡೆಯೇ ಇಟ್ಟು ಭಾವನೆಗಳನ್ನು ಜೋಡಿಸಬೇಕು. ಭಾವನೆಗಳ ಜೊತೆ ಸಂಬಂಧವೂ ಬೆಳೆಯುತ್ತದೆ. ಭಾವನೆ ಇಲ್ಲದಿದ್ದರೆ ಸಂಬಂಧ ಇರುವುದಿಲ್ಲ ಎಂದರು.

ಶಾಸಕ ಕುಮಾರ್‌ ಭ್ರಷ್ಟ ಶಾಸ​ಕ: ಮಧು ಬಂಗಾರಪ್ಪ ಆರೋಪ

ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಮುಖ್ಯಮಂತ್ರಿ ಹಾಗೂ ಸರ್ಕಾರವೂ ಇದ್ದ ಕಾರಣಕ್ಕೆ, ಸ್ವಾಮೀಜಿಗಳು ಕೇಳಿದ್ದು ಒಂದು ಕೋಟಿ, ನಾವು ಅರ್ಜಿ ಕೊಟ್ಟಿದ್ದು 10 ಕೋಟಿಗೆ ಸಿಎಂ ಗೆ ಕೇಳಿದ್ದ 3 ಕೋಟಿಯನ್ನು ಬಿಡುಗಡೆ ಮಾಡಿದರು. ಆದರೆ ಮನುಷ್ಯನ ಮನಸ್ಸು ಹೇಗೆಂದರೆ ಅರೆ ನಾನು 5 ಕೋಟಿ ಕೇಳಿದ್ದರೆ ಕೊಡುವವರೇನೋ ಎಂದು ಅನ್ನಿಸಿತು ಕೆಲವೊಮ್ಮೆ ಒಂದೊಂದು ಕೆಲಸಕ್ಕೆ ಹತ್ತಾರು ಬಾರಿ ಪ್ರಯತ್ನಿಸಿದರೂ ಗಜಗರ್ಭವಾಗಿ ಹೊರಗೆ ಬರುವುದಿಲ್ಲ, ಆದರೆ, ಕೆಲವು ಒಂದೇ ಪ್ರಯತ್ನಕ್ಕೆ ಆಗಿಬಿಡುತ್ತದೆ ಕಾರಣ ಮಠದ ಪುನರ್‌ ನಿರ್ಮಾಣ ವಾಗಬೇಕೆಂಬುದು ಭಕ್ತರ ಸಂಕಲ್ಪವಿದೆ. ಸ್ವಾಮೀಜಿಗಳ ಮೂಲಕ ನಿಮ್ಮ ಸಂಕಲ್ಪ ಹೊರಗೆ ಬಂದಿದೆ. ಆ ಸಂಕಲ್ಪಕ್ಕೆ ನಿಮಿತ್ತಮಾತ್ರರಾಗಿದ್ದೇವೆ. ಭಗವಂತನ ಸಂಕಲ್ಪವಿಲ್ಲದೆ ಯಾವುದೆ ಕೆಲಸ ಆಗುವುದಿಲ್ಲ ಎಂಬುದು ಅಚಲ ನಂಬಿಕೆ ಎಂದರು.