Karnataka Politics: ಗದ್ದುಗೆ ಏರಲು ಬಿಜೆ​ಪಿ ತವಕ​, ಕಾಂಗ್ರೆಸ್‌ ತೆರೆಮರೆಯ ಕಸರತ್ತು..!

*  ಕುತೂಹಲ ಕೆರಳಿಸಿದ ಗದಗ- ಬೆಟ​ಗೇರಿ ನಗ​ರ​ಸಭೆ ಅಧ್ಯಕ್ಷ ಉಪಾ​ಧ್ಯ​ಕ್ಷರ ಚುನಾ​ವಣೆ
*  ಜನವರಿ ಕೊನೆಯ ವಾರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯುವ ಸಾಧ್ಯತೆ 
*  ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು 
 

BJP Congress Trying to Get Power in Gadag-Betageri City Municipal grg

ಶಿವ​ಕು​ಮಾರ ಕುಷ್ಟಗಿ

ಗದಗ(ಜ.17):  ಗದ​ಗ-ಬೆಟ​ಗೇರಿ(Gadag-Betageri) ನಗ​ರ​ಸ​ಭೆ ಚುನಾ​ವ​ಣೆ​ಯಲ್ಲಿ(City Muncipal Election) 14 ವರ್ಷ​ಗಳ ನಂತರ ಬಿಜೆಪಿ(BJP) ಸ್ಪಷ್ಟಬಹು​ಮ​ತ ಪಡೆ​ದಿದ್ದು, ಅಧಿ​ಕಾ​ರ ಗದ್ದುಗೆ ಏರು​ವ ತಯಾರಿ ಮಾಡಿ​ಕೊಂಡಿದೆ. ಆದರೆ ಬಹು​ಮ​ತಕ್ಕೆ ಕೇವಲ 2 ಸ್ಥಾನ​ಗ​ಳನ್ನು ಕಡಿಮೆ ಪಡೆ​ದಿ​ರುವ ಕಾಂಗ್ರೆಸ್‌(Congress) ಸಹ ಗದ್ದು​ಗೆ ವಶಕ್ಕೆ ತೆರೆಮರೆಯ ಕಸ​ರತ್ತು ನಡೆ​ಸಿದೆ ಎನ್ನುವ ಚರ್ಚೆ​ ಸಾರ್ವ​ಜ​ನಿ​ಕ ವಲ​ಯ​ದಲ್ಲಿ ಜೋರಾ​ಗಿಯೇ ಕೇಳಿ ಬರು​ತ್ತಿವೆ.

ಡಿ. 27ರಂದು ಗದಗ- ಬೆಟ​ಗೇರಿ ನಗ​ರ​ಸ​ಭೆಯ 35 ವಾರ್ಡ್‌​ಗ​ಳಿಗೆ ಮತ​ದಾನ ನಡೆ​ದಿದ್ದು, ಡಿ. 30ರಂದು ನಡೆದ ಮತ​ ಎ​ಣಿಕೆಯಲ್ಲಿ ಬಿಜೆಪಿ 18 ಸ್ಥಾನ​ಗ​ಳನ್ನು, ಕಾಂಗ್ರೆಸ್‌ 15 ಸ್ಥಾನ​ಗ​ಳನ್ನು ಹಾಗೂ ಪಕ್ಷೇ​ತ​ರರು 2 ಸ್ಥಾನ​ಗ​ಳಲ್ಲಿ ಗೆಲುವು ಸಾಧಿ​ಸಿದ್ದಾರೆ. 18 ಸ್ಥಾನ​ಗ​ಳನ್ನು ಪಡೆದ ಬಿಜೆಪಿ ಸ್ಪಷ್ಟಬಹು​ಮ​ತ ಹೊಂದಿದೆ. 2 ಸ್ಥಾನ​ಗ​ಳಲ್ಲಿ ಗೆಲುವು ಸಾಧಿ​ಸಿ​ರುವ ಪಕ್ಷೇ​ತ​ರರು ಕಾಂಗ್ರೆಸ್‌ ಬಂಡಾಯ ಅಭ್ಯ​ರ್ಥಿ​ಗ​ಳಾ​ಗಿದ್ದು, ಅವರಲ್ಲಿ ಈಗಾ​ಗಲೇ ಓರ್ವ ಮಹಿಳಾ ಸದಸ್ಯೆ ಮತ್ತೆ ಕಾಂಗ್ರೆಸ್‌ಗೆ ಸೇರ್ಪ​ಡೆ​ಯಾ​ಗಿದ್ದು, ಇನ್ನೋರ್ವ ಪಕ್ಷೇ​ತ​ರರ ಕಾಂಗ್ರೆಸ್‌ ಬೆಂಬ​ಲಿ​ಸಿ​ದಲ್ಲಿ ಕಾಂಗ್ರೆಸ್‌ ಒಟ್ಟು 17 ಸ್ಥಾನದ ಬಲ​ದಿಂದ ಸ್ಪಷ್ಟಬಹು​ಮ​ತಕ್ಕೆ ಕೇವಲ ಒಂದು ಸ್ಥಾನ ಮಾತ್ರ ಕಡಿಮೆ ಬೀಳುವ ಹಿನ್ನೆ​ಲೆ​ ಕೊನೆಯ ಕ್ಷಣ​ದಲ್ಲಿ ಏನಾ​ದರೂ ಬೆಳ​ವ​ಣಿಗೆ ನಡೆ​ದರೂ ಆಶ್ಚರ್ಯ ಪಡು​ವಂತಿಲ್ಲ.

 

Local Body Election Result: : ಬಿಜೆಪಿ ಪಾಲಿಗೆ ಅದೃಷ್ಟ ಲಕ್ಷ್ಮಿಯಾದ ಉಷಾ..!

ಮಹಿಳೆಯರಿಗೆ ಮೀಸಲು:

ಜನವರಿ ಕೊನೆಯ ವಾರದಲ್ಲಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ(Election of President-Vice President) ನಡೆಯುವ ಸಾಧ್ಯತೆ ಇದ್ದು, ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ(woman) ಮೀಸಲಾಗಿದೆ.

ಶಾಸ​ಕರು, ಸಂಸ​ದ​ರಿಗೆ ಮತ​ದಾ​ನದ ಹಕ್ಕು

ನಗ​ರ​ಸಭೆ ಅಧ್ಯಕ್ಷ, ಉಪಾ​ಧ್ಯ​ಕ್ಷರ ಆಯ್ಕೆ ಸಂದ​ರ್ಭ​ದಲ್ಲಿ ಗದಗ ಶಾಸ​ಕ​ರಾದ ಎಚ್‌.​ಕೆ. ​ಪಾ​ಟೀಲ(HK Patil) ಹಾಗೂ ಹಾವೇರಿ ಲೋಕ​ಸಭಾ ಸದಸ್ಯ ಶಿವ​ಕು​ಮಾರ ಉದಾಸಿ(Shivakumar Udasi) ಮತ​ದಾನದ ಹಕ್ಕನ್ನು ಹೊಂದಿದ್ದು, ಇಬ್ಬರು ತಮ್ಮ ತಮ್ಮ ಪಕ್ಷದ ಪರ​ವಾಗಿ ಮತ​ದಾನ ಮಾಡಿ​ದರೂ ಬಿಜೆ​ಪಿಗೆ 19 ಸ್ಥಾನ, ಕಾಂಗ್ರೆಸ್‌ಗೆ 18 ಸ್ಥಾನದ ಬಲ ಬಂದಂತಾ​ಗು​ತ್ತದೆ. ಹಾಗಾಗಿ ಕಾಂಗ್ರೆಸ್‌ ಅಧಿ​ಕಾರ ಹಿಡಿ​ಯ​ಬೇ​ಕಾ​ದಲ್ಲಿ ಒಬ್ಬರೇ ಒಬ್ಬ ಬಿಜೆ​ಪಿ ಸದ​ಸ್ಯ​ರ​ನ್ನು ಸೆಳೆ​ದರೂ ಅವಳಿ ನಗ​ರದ ರಾಜ​ಕೀಯದಲ್ಲಿ ದೊಡ್ಡ ಸಂಚ​ಲನ ಸೃಷ್ಟಿ​ಯಾ​ಗ​ಲಿದೆ.

ಬಿಜೆಪಿ ಸದ​ಸ್ಯರು ಗೈರಾ​ದಲ್ಲಿ ಅಪಾಯ

ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬರ​ಬೇ​ಕಾ​ದಲ್ಲಿ ಬಿಜೆ​ಪಿಯ ಒಬ್ಬರ ಸದ​ಸ್ಯ​ರನ್ನು ಸೆಳೆ​ಯ​ಬೇ​ಕಾದ ಅನಿ​ವಾ​ರ್ಯತೆ ಇರು​ವುದು ಒಂದೆ​ಡೆ​ಯಾ​ದರೆ, ಇನ್ನೊಂದೆಡೆ ಅಧ್ಯಕ್ಷ, ಉಪಾ​ಧ್ಯ​ಕ್ಷರ ಆಯ್ಕೆಯ ಸಂದ​ರ್ಭ​ದಲ್ಲಿ ಬಿಜೆ​ಪಿಯ ಒಬ್ಬರು ಅಥವಾ ಇಬ್ಬರು ಸದ​ಸ್ಯರು ಗೈರಾ​ದರೂ ಸಾಕು ಕಾಂಗ್ರೆಸ್‌ ಮತ್ತೆ ನಗ​ರ​ಸ​ಭೆ ಅಧಿ​ಕಾ​ರಕ್ಕೆ ಬರು​ವು​ದ​ರಲ್ಲಿ ಯಾವುದೇ ಸಂಶ​ಯ​ವಿಲ್ಲ. ಬಿಜೆಪಿ ತನ್ನ ಸದ​ಸ್ಯ​ರಿಗೆ ವಿಪ್‌ ಜಾರಿ ಮಾಡು​ತ್ತದೆ. ವಿಪ್‌ ಅಧ್ಯಕ್ಷ, ಉಪಾ​ಧ್ಯ​ಕ್ಷರ ಆಯ್ಕೆಯ ಚುನಾ​ವ​ಣೆ​ಯಲ್ಲಿ ಪಾಲ್ಗೊಂಡು ಪಕ್ಷ ವಿರೋ​ಧಿ​ಯಾಗಿ ನಡೆ​ದು​ಕೊಂಡರೆ ಅವರ ಸದ​ಸ್ಯತ್ವ ರದ್ದಾ​ಗು​ತ್ತದೆ. ಆದರೆ ವಿಪ್‌ ಸ್ವೀಕ​ರಿಸಿ, ಮತ​ದಾ​ನ​ದಿಂದ ದೂರ ಉಳಿ​ದರೆ ಬಿಜೆ​ಪಿಗೆ ತೀವ್ರ ತೊಂದ​ರೆ​ಯಾ​ಗುವುದು ಪಕ್ಕಾ.

ಆಸ್ಸಾಂ ಪ್ರವಾಸ...

ಹಲ​ವಾರು ವರ್ಷ​ಗ​ಳಿಂದ ನಂತರ ನಗ​ರ​ಸ​ಭೆ​ಯಲ್ಲಿ ಅಧಿ​ಕಾರ ಹಿಡಿ​ದಿ​ರುವ ಬಿಜೆಪಿ ಯಾವುದೇ ಕಾರ​ಣಕ್ಕೂ ಅಧಿ​ಕಾರ ಕೈ ತಪ್ಪ​ದಂತೆ ಎಚ್ಚರ ವಹಿ​ಸು​ತ್ತಿದೆ. ಅದರ ಭಾಗ​ವಾ​ಗಿಯೇ ಎಲ್ಲ ನೂತನ ಸದ​ಸ್ಯರು ಸೇರಿ​ದಂತೆ ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಶ್ರಮಿ​ಸಿ​ದ​ವ​ರ​ನ್ನೆಲ್ಲಾ ದೂರದ ಅಸ್ಸಾಂಗೆ ಪ್ರವಾ​ಸಕ್ಕೆ ಕರೆ​ದು​ಕೊಂಡು ಹೋಗಿ ಬಂದಿದೆ. ಆದರೆ ಕೊನೆಯ ಕ್ಷಣ​ದಲ್ಲಿ ಕಾಂಗ್ರೆಸ್‌ ಮಾಡು​ತ್ತಿ​ರುವ ರಣ​ತಂತ್ರಕ್ಕೆ ಬಿಜೆಪಿ ಜಾಣ್ಮೆಯ ನಡೆ ಅನು​ಸ​ರಿಸಿ ಅಧಿ​ಕಾರ ಹಿಡಿ​ಯುತ್ತಾ ಎನ್ನು​ವು​ದನ್ನು ಕಾಯ್ದು ನೋಡ​ಬೇಕು.

Gadag-Betageri: ಒಗ್ಗಟ್ಟಿನಿಂದ ನಗರಸಭೆ ಗೆದ್ದುಕೊಂಡ ಬಿಜೆಪಿ: ಕಾಂಗ್ರೆಸ್‌ಗೆ ನಿರ್ಲಕ್ಷ್ಯಕ್ಕೆ ಪಾಠ

ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಜನತೆ ನಮಗೆ ಕೊಟ್ಟ ತೀರ್ಪನ್ನು ಸ್ವಾಗ​ತಿ​ಸು​ತ್ತೇವೆ. ಪ್ರಬಲ ವಿರೋಧ ಪಕ್ಷ​ವಾಗಿ ಏನು ಕೆಲಸ ಮಾಡ​ಬೇಕೋ ಅದನ್ನು ಮಾಡು​ತ್ತೇವೆ. ಯಾರನ್ನು ಸೆಳೆ​ಯುವ ಪ್ರಶ್ನೆಯೇ ಉದ್ಭವಿ​ಸು​ವು​ದಿಲ್ಲ ಅಂತ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅ​ಶೋಕ ಮಂದಾಲಿ ತಿಳಿಸಿದ್ದಾರೆ.   

ನಮ್ಮ ಪಕ್ಷದ ಎಲ್ಲ ನೂತನ ಸದ​ಸ್ಯರು ಸುಶಿ​ಕ್ಷಿ​ತರು, ಯುವ​ಕರು, ಪಕ್ಷ ನಿಷ್ಠ​ರಾ​ಗಿ​ದ್ದಾರೆ. ವಿರೋಧ ಪಕ್ಷ​ದ​ವರು ಏನೇ ಪ್ರಯತ್ನ ಮಾಡಿ​ದರೂ ಅದಕ್ಕೆ ಅವರೇ ಅವ​ಕಾಶ ನೀಡು​ವು​ದಿಲ್ಲ. ನಮಗೆ ಸ್ಪಷ್ಟ​ವಾದ ಬಹು​ಮ​ತ​ವಿದೆ ಅಂತ ಗದಗದ ಬಿಜೆಪಿ ಯುವ ಮುಖಂಡ ಅನಿಲ ಮೆಣ​ಸಿ​ನ​ಕಾಯಿ ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios