Asianet Suvarna News Asianet Suvarna News

Karnataka Politics: ಅಧಿಕಾರದ ಗದ್ದುಗೆಗೆ ಬಿಜೆಪಿ-ಕಾಂಗ್ರೆಸ್‌ ಫೈಟ್‌

*  19ರಲ್ಲಿ 2 ಸ್ಥಾನದಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ ಅಭ್ಯರ್ಥಿಗಳು
*  ಭರ್ಜರಿಯಾಗಿಯೇ ಕ್ಯಾಂಪೇನ್‌ ಆರಂಭ
*  ಮತದಾರರಿಗೆ ಚಿಕನ್‌ ಹಂಚಿಕೆ 

BJP Congress Fight For Get Power in Bhagyanagar Town Panchayat grg
Author
Bengaluru, First Published Dec 25, 2021, 8:03 AM IST

ಕೊಪ್ಪಳ(ಡಿ.25): ಕಳೆದ ಬಾರಿ ಬಹುಮತವಿದ್ದರೂ ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧಿಕಾರದಿಂದ ವಂಚಿತವಾಗಿದ್ದ ಬಿಜೆಪಿ(BJP) ಈ ಬಾರಿ ಅಧಿಕಾರಕ್ಕೇರಲು ಇನ್ನಿಲ್ಲದ ಕಸರತ್ತು ನಡೆಸಿದೆ. ಇತ್ತ ಕಾಂಗ್ರೆಸ್‌(Congress) ಆರಂಭಿಕವಾಗಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಭರ್ಜರಿಯಾಗಿಯೇ ಕ್ಯಾಂಪೇನ್‌ ಆರಂಭಿಸಿದೆ. ಇದರಿಂದ ಚುನಾವಣೆ(Election) ಕಾವು ತಾರಕ್ಕೇರಿದೆ.

ಇಲ್ಲಿನ ಪಪಂ 19 ಸದಸ್ಯ ಬಲ ಹೊಂದಿದ್ದು ಕಳೆದ ಬಾರಿ ಬಿಜೆಪಿ ಬಹುಮತ ಪಡೆದಿತ್ತು. ಆದರೆ ಚುನಾವಣೆ ಬಳಿಕ ನಡೆದ ರಾಜಕೀಯ ಬೆಳವಣಿಗೆ ಹಾಗೂ ಸದಸ್ಯರ ಪಕ್ಷಾಂತರದ ಅಘಾತ ಎದುರಿಸಿ ಅಧಿಕಾರದಿಂದ ವಂಚಿತವಾಯಿತು. ಪಕ್ಷಾಂತರಿಗಳಿಗೆ ಟಿಕೆಟ್‌ ನೀಡದಂತೆ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ(Nalin Kumar Kateel) ಸೂಚಿಸಿದ್ದರಿಂದ ವಿಪ್‌ ಉಲ್ಲಂಘಿಸಿ, ಪಕ್ಷಾಂತರ ಮಾಡಿದವರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಲಾಗಿದೆ. ಇದರಿಂದ ಬಿಜೆಪಿಗೆ ಅಭ್ಯರ್ಥಿಗಳ ಅಭಾವ ಎದುರಾಯಿತು. ಇದನ್ನೇ ಲಾಭವಾಗಿ ಮಾಡಿಕೊಂಡ ಕಾಂಗ್ರೆಸ್‌ ಎರಡು ವಾರ್ಡ್‌ಗಳಲ್ಲಿ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

Karnataka Politics: 'ಬಿಜೆಪಿಯಿಂದ ಅಭಿವೃದ್ಧಿಯಾದ್ರೆ ರಾಜಕೀಯದಿಂದಲೇ ನಿವೃತ್ತಿ'

ಎರಡು ವಾರ್ಡ್‌ಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಪ್ರಸ್ತುತ 17 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಎಲ್ಲ ವಾರ್ಡ್‌ಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಬಿಜೆಪಿ-ಕಾಂಗ್ರೆಸ್‌ ಜಿದ್ದಿಗೆ ಬಿದ್ದು ಪ್ರಚಾರದಲ್ಲಿ ತೊಡಗಿವೆ. ಶಾಸಕ ರಾಘವೇಂದ್ರ ಹಿಟ್ನಾಳ ಬೆಂಬಲಿಗರೊಂದಿಗೆ ನಿತ್ಯ ಪ್ರಚಾರ ಮಾಡಿದರೆ, ಇತ್ತ ಸಂಸದ ಸಂಗಣ್ಣ ಕರಡಿ ಸಾರಥ್ಯದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಸದಸ್ಯರ ನಡುವೆ ಚುನಾವಣೆ ನಡೆದಿದ್ದರೂ ರಾಘವೇಂದ್ರ ಹಿಟ್ನಾಳ ಮತ್ತು ಸಂಗಣ್ಣ ಕರಡಿ ನಡುವೆಯೇ ಫೈಟ್‌ ನಡೆಯುತ್ತಿದೆ ಎನ್ನುವಂತಾಗಿದೆ. ಇದರ ನಡುವೆ ಅಮರೇಶ ಕರಡಿ ಹಾಗೂ ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರಶೇಖರ(CV Chandrashekhar) ಜಂಟಿಯಾಗಿ ಪ್ರಚಾರ ಮಾಡಿದ್ದಾರೆ.

ಚಿಕನ್‌ ಹಂಚಿಕೆ:

ಡಿ. 27ರಂದು ಮತದಾನ ನಡೆಯಲಿದ್ದು ಮತದಾರರನ್ನು(Voters) ಒಲಿಸಿಕೊಳ್ಳಲು ಎರಡು ಪಕ್ಷಗಳು ತಂತ್ರ-ಪ್ರತಿ ತಂತ್ರ ಎಣಿದಿವೆ. ಓರ್ವ ಅಭ್ಯರ್ಥಿಯೊಬ್ಬರು ಮನೆ-ಮನೆಗೆ ಅರ್ಧ ಕೆಜಿ ಚಿಕನ್‌ ಹಂಚಿ ಇದು ಖುಷಿಗಾಗಿ ಮಾತ್ರ. ಕೊನೆಯ ದಿನ ದೊಡ್ಡ ಉಡುಗೊರೆ ಇದೆ ಎಂದು ಹೇಳಿದ್ದಾರೆ. ಇವರಂತೆ ಹಲವುರು ಗಿಫ್ಟ್‌ ನೀಡಲು ಮುಂದಾಗಿದ್ದರೆ, ಹಲವರು ವೋಟ್‌ಗೆ 500ರಿಂದ 2000 ವರೆಗೂ ನೀಡಲು ನಿರ್ಧರಿಸಿದ್ದಾರೆ.

ರಾಘವೇಂದ್ರ ಹಿಟ್ನಾಳ್‌ ತರಾಟೆಗೆ

ಭಾಗ್ಯನಗರದ ನವನಗರ ಜನರು ಶಾಸಕರ ರಾಘವೇಂದ್ರ ಹಿಟ್ನಾಳ(Raghavendra Hitnal) ಅವರನ್ನು ತರಾಟೆಗೆ ತೆಗೆದುಕೊಂಡ ವೀಡಿಯೋ ವೈರಲ್‌ ಆಗಿದೆ. ನಮ್ಮ ಬಡಾವಣೆಗೆ ರಸ್ತೆಯೇ ಇಲ್ಲ. ಗರ್ಭಿಣಿಯರನ್ನು ಕರೆದುಕೊಂಡು ಹೋಗಲು ಆಟೋ ಸಹ ಬರುವುದಿಲ್ಲ. ಅಷ್ಟೊಂದು ರಸ್ತೆ ಹದಗೆಟ್ಟಿದೆ. ಈ ಮಾಹಿತಿ ನಿಮಗೆ ಗೊತ್ತಿದ್ದರೂ ರಸ್ತೆ ಮಾಡಿಸಿಲ್ಲ. ಚುನಾವಣೆ ಬಂದಿದೆ ಎಂದು ಈಗ ಬಂದಿದ್ದೀರಿ, ಇದುವರೆಗೂ ನಾವು ನೆನಪು ಆಗಲಿಲ್ಲವೇ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. 10ನೇ ವಾರ್ಡಿನ ಅಭ್ಯರ್ಥಿ ಪರ ಪ್ರಚಾರ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಶಾಸಕರು ಮತದಾರರ ಮಾತಿನಿಂದ ಕಕ್ಕಾಬಿಕ್ಕಿಯಾಗಿದ್ದರು.

Karnataka Politics: 'ಬಿಜೆಪಿಯ ಘಟಾನುಗಟಿ ನಾಯಕರು ಕಾಂಗ್ರೆಸ್‌ ಸೇರ್ಪಡೆ'

ಭಾಗ್ಯನಗರದಲ್ಲಿ ಅತ್ಯುತ್ತಮ ಬೆಂಬಲ ದೊರೆಯುತ್ತಿದೆ. ಉತ್ತಮ ಪ್ರಚಾರವೂ ನಡೆದಿದ್ದು ಬಿಜೆಪಿ ಬಹುಮತ ಪಡೆಯಲಿದೆ. ಕೆಲವೊಂದು ಸಮಸ್ಯೆಯಾಗಿದ್ದರೂ ಪಕ್ಷ ನಿಷ್ಠೆಯುಳ್ಳುವರ ಪರಿಶ್ರಮದಿಂದ ನಮ್ಮ ಅಭ್ಯರ್ಥಿಗಳ ಗೆಲುವು ನಿಶ್ಚಿತ ಅಂತ ಸಂಸದ ಸಂಗಣ್ಣ ಕರಡಿ(Sanganna Karadi) ತಿಳಿಸಿದ್ದಾರೆ.  

ಈಗಾಗಲೇ ನಮಗೆ ಆರಂಭಿಕ ಜಯ ದೊರೆತಿದೆ. ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಭಾಗ್ಯನಗರ ಜನರು ನಿಚ್ಚಳ ಸೂಚನೆ ನೀಡಿದ್ದಾರೆ. ಬಹುಮತ ಅಷ್ಟೇ ಅಲ್ಲ, ಅತೀ ಹೆಚ್ಚು ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತೇವೆ ಅಂತ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. 
 

Follow Us:
Download App:
  • android
  • ios