ಕೊಲ್ಲಂ (ಕೇರಳ), (ನ.22): ಮುಂಬರುವ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಯೊಬ್ಬರು ಪ್ರಚಾರ ನಡೆಸುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

60 ವರ್ಷದ ಎಲಿಪರಂಬತ್ ವಿಶ್ವನಾಥನ್ ಅವರು ಮೃತಪಟ್ಟಿದ್ದು, ಮತಯಾಚನೆಗೆ ಹೋದ ಸಮಯದಲ್ಲಿ ಈ ಘಟನೆ ನಡೆದಿದೆ. ಇವರು ಕೊಲ್ಲಂ ಜಿಲ್ಲೆಯ ಪಂಚನ ಪಂಚಾಯಿತಿಯ ಪರಂಪಿಮುಕ್ಕು ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಕೊರೋನಾ ಸೋಂಕಿನಿಂದ ಬಳಲುತ್ತಿರುವ ಮಾಜಿ ಸಿಎಂ ಆರೋಗ್ಯ ಸ್ಥಿತಿ ಗಂಭೀರ

ಪನ್ಮಣದ ಕೊಲ್ಲಿಸೇರಿ ಜಂಕ್ಷನ್‌ನಲ್ಲಿ ಪ್ರಚಾರಕ್ಕಾಗಿ ಪಕ್ಷದ ಸದಸ್ಯರೊಂದಿಗೆ ತಮ್ಮ ಮನೆಯಿಂದ ಹೊರಬಂದ ನಂತರ ವಿಶ್ವನಾಥನ್ ಕುಸಿದು ಬಿದ್ದಿದ್ದಾರೆ. 

ಕೂಡಲೇ ಅವರನ್ನು ಕರುಣಗಪ್ಪಲ್ಲಿ ತಾಲ್ಲೂಕು ಆಸ್ಪತ್ರೆಗೆ ಮತ್ತು ನಂತರ ಆಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.