ವಾರ್ಡ್‌ ನಂ.4ರ ಚಾಲುಕ್ಯ ನಗರ ಪೂರ್ವ ಭಾಗದ ಐಟಿಐ ಕಾಲೇಜು ಬಳಿಯ ಗಾರ್ಡನ್‌ದಲ್ಲಿ ವಾಕಿಂಗ್‌ ಟಿಂ ಭೇಟಿ ಮಾಡಿ ಕೆಲಹೊತ್ತು ಚರ್ಚಿಸಿ, ನಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದ ರಾಮನಗೌಡ ಪಾಟೀಲ ಯತ್ನಾಳ. 

ವಿಜಯಪುರ(ಏ.24): ನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಅವರ ಪರವಾಗಿ, ಪುತ್ರ ಹಾಗೂ ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರು, ಭಾನುವಾರ ನಗರ ಮತಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಪಾದಯಾತ್ರೆ ಹಾಗೂ ಸಭೆ ನಡೆಸಿ ಮತಯಾಚನೆ ಮಾಡಿದರು.

Add Asianetnews Kannada as a Preferred SourcegooglePreferred

ಬೆಳಗ್ಗೆ ವಾರ್ಡ್‌ ನಂ.4ರ ಚಾಲುಕ್ಯ ನಗರ ಪೂರ್ವ ಭಾಗದ ಐಟಿಐ ಕಾಲೇಜು ಬಳಿಯ ಗಾರ್ಡನ್‌ದಲ್ಲಿ ವಾಕಿಂಗ್‌ ಟಿಂ ಭೇಟಿ ಮಾಡಿ ಕೆಲಹೊತ್ತು ಚರ್ಚಿಸಿ, ನಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.

ವಿಜಯಪುರದಲ್ಲಿ ರಾಹುಲ್‌ ಗಾಂಧಿ ರೋಡ್‌ ಶೋ: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ರಾಗಾ..!

ಸಂಜೆ ತೊರವಿ ಗ್ರಾಮ ವ್ಯಾಪ್ತಿಯ ನವರಸಪುರ ಕಾಲೊನಿಯ ಸಿದ್ಧಾರ್ಥ ನಗರದ ಉದ್ಯಾನದ ಹತ್ತಿರ ಸಭೆ ನಡೆಸಿದ ಬಳಿಕ ಸೇನಾ ನಗರದ ಶಾಲೆ ನಂ.61ರ ಪಕ್ಕದ ಉದ್ಯಾನದಲ್ಲಿ ಹಾಗೂ ಬಾಗಲಕೋಟೆ ಲೇಔಟ್‌ ಶಿವಾಲಯ ದೇವಸ್ಥಾನ ಹತ್ತಿರ ಸಭೆ ನಡೆಸಿ ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಅಭಿವೃದ್ಧಿಗೆ ಜನ ಬೆಂಬಲ ನಿಶ್ಚಿತ ಎಂಬುವುದಕ್ಕೆ ಪ್ರಚಾರಕ್ಕೆ ಆಗಮಿಸಿದಾಗ ಜನ ತೋರಿಸುತ್ತಿರುವ ಅಭೂತಪೂರ್ವ ಬೆಂಬಲವೇ ಸಾಕ್ಷಿ. ಪ್ರತಿ ಕಾಲೊನಿ, ಬಡಾವಣೆಗಳ ಜನರು, ಮೂಲ ಸೌಕರ್ಯ ಕಲ್ಪಿಸುವ ಜೊತೆಗೆ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟಗೌಡರಿಗೆ ನಮ್ಮ ಮತ ಮೀಸಲು ಎಂಬ ಭರವಸೆ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ನಮ್ಮ ತಂದೆ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಕಾಲೊನಿಗಳ ಹಿರಿಯರು, ಮಹಿಳೆಯರು, ಯುವಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.