ಎನ್‌ಡಿಎಯಿಂದ ನಿತೀಶ್ ಹೊರಬರಲು ಮುಖ್ಯ ಕಾರಣಗಳೇನು? ಇಲ್ಲಿವೆ ನೋಡಿ

ನಿತೀಶ್ ಕುಮಾರ್ 22 ವರ್ಷಗಳಲ್ಲಿ ಎಂಟು ಬಾರಿ (ಹೊಸ ಮಹಾಘಟಬಂಧನ್ ನೇತೃತ್ವ ಸೇರಿ) ಬಿಹಾರದ ಸಿಎಂ ಆಗಿದ್ದಾರೆ. ಎಂಜಿನಿಯರ್ ನಿತೀಶ್ ಕುಮಾರ್ ಅವರ ಹೊಸ ಮಹಾಘಟ ಬಂಧನ್ ಹಿಂದಿರುವ ಈ ಬಾರಿಯ ಪೊಲಿಟಿಕಲ್ ಎಂಜಿನಿಯರಿಂಗ್ ಏನು ? ಈ ಪ್ರಶ್ನೆಗೆ ಉತ್ತರಗಳು ಹಲವು.

Bihar Political Crisis here Is Why nitish kumar Came Out From NDA rbj

ವರದಿ: ಡೆಲ್ಲಿ ಮಂಜು

ನವದೆಹಲಿ, (ಆಗಸ್ಟ್.09) : ಮಹಾರಾಷ್ಟ್ರದಲ್ಲಿ ಬಂದಿದ್ದು, ಬಿಹಾರದಲ್ಲಿ ಹೋಯ್ತು.! ಗೇಮೂ, ಗೇಮ್ ಪ್ಲಾನ್ ಮಹಾರಾಷ್ಟ್ರದ್ದು, ಫೀಲ್ಡ್ ಮಾತ್ರ ಬಿಹಾರ್ ಅಂದಿದ್ದ ಬಿಜೆಪಿಗೆ ಪೊಲಿಟಿಕಲ್ `ಎಂಜಿನಿಯರ್' ನಿತೀಶ್ ಕುಮಾರ್ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂಬ ದೊಡ್ಡ ಶಾಕ್ ಕೊಟ್ಟಿದ್ದಾರೆ. ಹತ್ತೇ ನಿಮಿಷದಲ್ಲಿ ಎನ್‌ಡಿಎ ಹೋಗಿ, ಹೊಸ ಮಹಾಘಟಬಂಧನ್ ನಾಯಕನಾಗಿ ನಿತೀಶ್ ಬಿಹಾರದಲ್ಲಿ ಹೊರಹೊಮ್ಮಿದ್ದಾರೆ.

`ಪಲ್ಟಾವಾಲ' ಅಂತ್ಲೆ ಬಿಹಾರದ ರಾಜಕೀಯ ವಲಯದಲ್ಲಿ ಎಂಜಿನಿಯರ್ ನಿತೀಶ್‌ಕುಮಾರ್ ಹೆಚ್ಚು ಪರಿಚಿತ. ಇವತ್ತಿನ ಸ್ನೇಹಿತ ತೇಜಸ್ವಿ ಯಾದವ್ ಅವರ ತಂದೆ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ನಿತೀಶ್ ರನ್ನು ರಾಜಕೀಯ ಕಾರಣಗಳಿಗಾಗಿ ಪಲ್ಟಾವಾಲ ಅಂತ್ಲೆ ಸಂಬೋಧಿಸುತ್ತಿದ್ದರು. ಅಂತೆಯೇ ನಿತೀಶ್ ಕುಮಾರ್ ಈಗ ಮತ್ತೆ ಪಲ್ಟಿ ಹೊಡೆದಿದ್ದಾರೆ. ಇವರ ಸಿಎಂ ಗ್ರಾಫ್ ನೋಡಿದ್ರೆ 22 ವರ್ಷಗಳಲ್ಲಿ ಎಂಟು ಬಾರಿ (ಹೊಸ ಮಹಾಘಟಬಂಧನ್ ನೇತೃತ್ವ ಸೇರಿ) ಬಿಹಾರದ ಸಿಎಂ ಆಗಿದ್ದಾರೆ. ಎಂಜಿನಿಯರ್ ನಿತೀಶ್ ಕುಮಾರ್ ಅವರ ಹೊಸ ಮಹಾಘಟ ಬಂಧನ್ ಹಿಂದಿರುವ ಈ ಬಾರಿಯ ಪೊಲಿಟಿಕಲ್ ಎಂಜಿನಿಯರಿಂಗ್ ಏನು ? ಈ ಪ್ರಶ್ನೆಗೆ ಉತ್ತರಗಳು ಹಲವು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್‌, ಶೀಘ್ರ ಆರ್‌ಜೆಡಿ-ಜೆಡಿಯು ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ

ಮೊದಲ ಉತ್ತರ ಎಂಬAತೆ ಕೇಳಿಬರುತ್ತಿರುವುದು ಬಿಜೆಪಿ ಮಹಾರಾಷ್ಟçದಲ್ಲಿ ಮಾಡಿದ ತಂತ್ರಗಾರಿಕೆಯನ್ನು ಬಿಹಾರದಲ್ಲಿ ಮಾಡಲು ಯತ್ನಿಸಿದ್ದು. ಎನ್‌ಡಿಎ ಕೂಟದ ನೇತೃತ್ವ ವಹಿಸಿಕೊಂಡು ಬಿಹಾರದ ಸಿಎಂ ಆಗಿ ಕೆಲಸ ನಿರ್ವಹಿಸಿದ ನಿತೀಶ್ ಕುಮಾರ್ ಅವರಿಗೆ ಸಿಕ್ಕಾಪಟ್ಟೆ ಬೇಸರ ಮೂಡಿಸಿದ್ದು ಬಿಜೆಪಿಯ ದೆಹಲಿ ಹೈಕಮಾಂಡ್ ನಾಯಕರು. ಬಿಹಾರದಲ್ಲಿ ನಾವು ಸರ್ಕಾರದ ಭಾಗ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಬಿಜೆಪಿ ಹೈಕಮಾಂಡ್ ನಾಯಕರು ಅದರಲ್ಲೂ ಅಮಿತ್ ಶಾ ಅವರ ಹಸ್ತಕ್ಷೇಪ ಹೆಚ್ಚಿತ್ತು. ಬಿಜೆಪಿ ಸಖ್ಯದೊಂದಿಗೆ ಚುನಾವಣಾ ಪೂರ್ವ ಸಹಯೋಗ ಮಾಡಿಕೊಂಡು ಜೆಡಿಯು ಹೋದರೂ ನಿತೀಶ್ ಕುಮಾರ್ ಮತ್ತು ಬಿಜೆಪಿ ಹೈಕಮಾಂಡ್ ನಾಯಕರ ನಡುವೆ ಹೊಂದಾಣಿಕೆ ಆಗಲೇ ಇಲ್ಲ. ಪ್ರಧಾನಿ ಮೋದಿಯವರ ಕರೆದ ಹಲವಾರು ಪ್ರಮುಖ ಸಭೆಗಳಿಗೆ ನಿತೀಶ್ ಹೋಗದೇ ತಮ್ಮ ಮುನಿಸು ವ್ಯಕ್ತಪಡಿಸಿದ್ದರು.

ಇದರ ಒಳಸುಳಿವು ಅರಿತ ಬಿಜೆಪಿ, ಮಹಾರಾಷ್ಟçದ ಮಾದರಿಯಲ್ಲಿ ಅಂದರೆ ಶಿವಸೇನೆ ಇಬ್ಭಾಗ ಮಾಡಿದಂತೆ, ಜೆಡಿಯು ಪಕ್ಷದ ಅಸಮಧಾನಿತ ನಾಯಕರನ್ನು ಅವರದ್ದೇ ಪಕ್ಷದ ನಾಯಕರನ್ನು ಎತ್ತಿಕಟ್ಟಲು ಶುರು ಮಾಡಿತ್ತು. ಅದರ ಮೊದಲ ಭಾಗವಾಗಿ ಕೇಂದ್ರ ಮಾಜಿ ಸಚಿವ ಆರ್.ಸಿ.ಪಿ.ಸಿಂಗ್. ಜೆಡಿಯು ರಾಜ್ಯಸಭಾ ಸದಸ್ಯರಾಗಿದ್ದರೂ ನಿತೀಶ್ ಅವರ ಒಪ್ಪಿಗೆಯೂ ಪಡೆಯದಂತೆ ನೇರವಾಗಿ ಸಂಪುಟಕ್ಕೆ ಸೇರಿಕೊಂಡಿದ್ದು ಅಸಮಧಾನ ಹೆಚ್ಚಲು ಕಾರಣವಾಯಿತು. 

ಬಿಜೆಪಿ ಜೊತೆಗಿನ ಮೈತ್ರಿ ಮುರಿದ ಜೆಡಿಯು, ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ!

ಆರ್.ಸಿ.ಪಿ.ಸಿಂಗ್ ಹೆಚ್ಚು ಬಿಜೆಪಿ ಸಖ್ಯ ಸೇರಿ ಒಳಗೊಳಗೆ ತಂತ್ರಗಾರಿಕೆಯನ್ನು ಮಾಡುತ್ತಿದ್ದ ಕಾರಣಕ್ಕೆ ಜೆಡಿಯು ಮತ್ತೆ ಅವರಿಗೆ ರಾಜ್ಯಸಭೆಗೆ ಅವಕಾಶ ಕೊಡಲಿಲ್ಲ. ಹಾಗಾಗಿ ಸಿಂಗ್ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಮಹಾರಾಷ್ಟ್ರದ ಮಾಡೆಲ್ ರೀತಿಯಲ್ಲೇ ಜೆಡಿಯು ನಾಯಕರನ್ನು ಸೆಳೆದು ಜೆಡಿಯುಗೆ ಅಂತಿಮ ಮಹುರ್ತ ಫಿಕ್ಸ್ ಮಾಡುವ ಬಿಜೆಪಿ ಪ್ಲಾನ್ ಗೊತ್ತಾದ ಬೆನ್ನಲೇ ನಿತೀಶ್ ತಮ್ಮ`ಎಂಜಿನಿಯರಿಂಗ್' ವಿದ್ಯೆ ಪ್ರದರ್ಶಸಿ ಎನ್‌ಡಿಎ ಕೂಟದಿಂದ ಹೊರಬಂದರು.

* ಬಿಹಾರದಲ್ಲಿ ಜಾತಿ ಜನಗಣತಿ ಹೊಸ ಅಸ್ತ್ರ ಹಿಡಿದು ದೆಹಲಿಗೆ ಬಂದ ನಿತೀಶ್ ಬಿಜೆಪಿಯಿಂದ ಬೆಂಬಲ ಸಿಗಲೇ ಇಲ್ಲ. ಸಾಲದ್ದಕ್ಕೆ ಜಾತಿಗಣತಿ ಹೆಸರಲ್ಲಿ ಅಕ್ರಮ ಬಾಂಗ್ಲದೇಶ ವಾಸಿಗಳು ಮತ್ತು ರೋಹಿಂಗ್ಯಾಗಳ ತಲೆಎಣಿಕೆಗೆ ಬಿಜೆಪಿ ತೀವ್ರ ಆಕ್ಷೇಪ ಎತ್ತಿತ್ತು. ಆದರೆ ನಿತೀಶ್ ಸರ್ಕಾರದ ಕ್ಯಾಬಿನೆಟ್ ಜಾತಿಗಣತಿ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿತ್ತು. ಇತ್ತ ತೇಜಸ್ವಿ ಯಾದವ್ ಕೂಡ ಜಾತಿಗಣತಿಯ ಪರವಾಗಿ ನಿಂತಿದ್ದರು. ಅಲ್ಲದೇ ಜಾತಿಗಣತಿಗೆ ಬೆಂಬಲ ಸೂಚಿಸಿದ್ದಕ್ಕೆ ಆರ್‌ಜೆಡಿ ನಾಯಕರ ಮೇಲೆ ಸಿಬಿಐ ರೇಡ್ ಆಗಿತ್ತು ಎಂಬ ಮಾಹಿತಿಗಳು ಕೂಡ ಇವೆ.

* ಅಗ್ನಿಪಥ್ ಯೋಜನೆ ಕಿಚ್ಚು ಬಿಹಾರದಲ್ಲಿ ಹೊತ್ತಿಕೊಂಡಾಗ ನಿತೀಶ್ ಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಹಾರದಲ್ಲಿ ಹೊಸ ಯೋಜನೆಗಳು ಬಿಜೆಪಿ ಅಡ್ಡಗಾಲು ಹಾಕುತ್ತಿತ್ತು ಎನ್ನುವುದು ಜೆಡಿಯು ಅಸಮಧಾನ.

* ಜೊತೆಗೆ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ದೇಶಾದ್ಯಂತ ಪೂರ್ಣ ಅಪೋಷಣೆ ತೆಗೆದುಕೊಳ್ಳುತ್ತಿರುವುದು ಎನ್‌ಡಿಎ ಯಿಂದ ನಿತೀಶ್ ಹೊರಬರಲು ಮುಖ್ಯ ಕಾರಣ ಎನ್ನುತ್ತಾರೆ ಬಿಹಾರ ರಾಜಕೀಯ ಬಲ್ಲವರು.

Latest Videos
Follow Us:
Download App:
  • android
  • ios