ಪಾಟ್ನಾ, (ಅ. 25): ಬಿಹಾರ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಮದ್ಯೆ ಶಿಯೋಹರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನತಾದಳ ರಾಷ್ಟ್ರವಾದಿ ಪಕ್ಷದ  ಅಭ್ಯರ್ಥಿಯನ್ನು ದುಷ್ಕರ್ಮಿಗಳು ಗುಂಡಿಕ್ಕೆ ಹತ್ಯೆ ಮಾಡಿದ್ದಾರೆ.

ನಾರಾಯಣ್ ಸಿಂಗ್ ಮೃತ ದುರ್ದೈವಿ. ಶನಿವಾರ (ಅ. 24) ಶಿಯೋಹರ್‌ನಲ್ಲಿ ಪ್ರಚಾರ ನಡೆಸುತ್ತಿರುವಾಗ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ನಾರಾಯಣ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಮತ್ತೊಂದು ಸಮೀಕ್ಷೆಯಲ್ಲೂ ಎನ್‌ಡಿಎಗೆ ಜಯ!

ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ನಾರಾಯಣ್ ಸಿಂಗ್ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಪರಿಣಾಮ ಸಿಂಗ್ ಸ್ಥಳದಲ್ಲೇ ಮೃತಪಟ್ಟರೇ, ಇಬ್ಬರ ಸಹಚರರು ಗಂಭೀರ ಗಾಯಗೊಂಡಿದ್ದರು.

ಸಹಚರರನ್ನು ಸಂತೋಷ್ ಕುಮಾರ್ ಮತ್ತು ಅಭಯ್ ಕುಮಾರ್ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಸಂತೋಷ್ ಕುಮಾರ್ ಭಾನುವಾರ (ಅ. 25) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

 ಜನತಾ ದಳ ರಾಷ್ಟ್ರವಾದಿ ಅಭ್ಯರ್ಥಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.