ಪಾಟ್ನಾ(ನ.10): ಬಿಹಾರ ವಿಧಾನನಸಭಾ ಚುನಾವಣೆಯಲ್ಲಿ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಇಲ್ಲಿ ಮಹಾಘಟ್‌ಬಂಧನ್ ಜಯ ಸಾಧಿಸಲಿದೆ ಎಂದಿವೆ. ಹೀಗಿದ್ದರೂ ಸದ್ಯದ ಟ್ರೆಂಡ್(12. 00) ಅನ್ವಯ ಎನ್‌ಡಿಎ ಮುನ್ನಡೆ ಸಾಧಿಸಿದೆ. ಒಂದು ವೇಳೆ ಸಮೀಕ್ಷೆಗಳು ನಿಜವಾದರೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮೂರು ನೂತನ ದಾಖಲೆ ನಿರ್ಮಿಸಲಿದ್ದಾರೆ. ಅವರು ಭಾರತದ ಅತ್ಯಂತ ಯುವ ಮುಖ್ಯಮಂತ್ರಿಯಾಗಲಿದ್ದಾರೆ. ಅಲ್ಲದೇ ಬಬಿಹಾರದ ಒಂದೇ ಕುಟುಂಬದಿಂದ ಸಿಎಂ ಆದ ಮೂರನೇ ವ್ಯಕ್ತಿಯಾಗಲಿದ್ದಾರೆ. ಅಲ್ಲದೇ ಅವರು ಅಧಿಕಾರಕ್ಕೇರಿದರೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ತಂದೆ ತಾಯಿಯ ಪುತ್ರರಾಗಲಿದ್ದಾರೆ.

ತೇಜಸ್ವಿ 1989ರ ನವೆಂಬರ್ 9 ರಂದು ಜನಿಸಿದರು. ನಿನ್ನೆಯಷ್ಟೇ ಅವರು ತಮ್ಮ 31ನೇ ಜನ್ಮ ದಿನವನ್ನಾಚರಿಸಿದರು. ಇನ್ನು ಅಂಕಿ ಅಂಶಗಳನ್ನು ಗಮನಿಸುವುದಾದರೆ ಈವರೆಗೂ ಎಂಒಎಚ್ ಫರೂಕ್ ದೇಶದ ಅತ್ಯಂತ ಯುವ ಮುಖ್ಯಮಮತ್ರಿಯಾಗಿದ್ದರು. ಅವರು 1967ರಲ್ಲಿ ತಮ್ಮ 29ರಂದು ಪುದುಚೇರಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಅವರು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಹೀಗಿರುವಾಗ  31 ವರ್ಷದ ತೇಜಸ್ವಿ ಸಿಎಂ ಆದರೆ ಭಾರತದ ರಾಜ್ಯವೊಂದರ ಅತ್ಯಂತ ಯುವ ಮುಖ್ಯಮಂತ್ರಿ ಎಂಬ ಹಿರಿಮೆ ಗಳಿಸಲಿದ್ದಾರೆ.

ಬಿಹಾರದ ಅತ್ಯಂತ ಯುವ ಸಿಎಂ ನಿತೀಶ್ ಪ್ರಸಾದ್

ಇನ್ನು ಬಿಹಾರದ ಅತ್ಯಂತ ಕಿರಿಯ ಮುಖ್ಯಮಂತ್ರಿಯ ಕುರಿತು ಹೇಳುವುದಾದರೆ ಸತೀಶ್ ಪ್ರಸಾದ್ ಸಿಂಗ್ ಹೆಸರಲ್ಲಿ ಈ ದಾಖಲೆ ಇದೆ. ಅವರು 1968ರಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಬಿಹಾರ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಡಾ. ಜಗನ್ನಾಥ್ ಮಿಶ್ರಾ 38ನೇ ವಯಸ್ಸಲ್ಲಿ 1975ರಲ್ಲಿ ಬಿಹಾರ ಸಿಎಂ ಆಗಿದ್ದರು.