Asianet Suvarna News Asianet Suvarna News

Political Crisis ಕಾಂಗ್ರೆಸ್‌ಗೆ ಮತ್ತೊಂದು ಶಾಕ್, ಮಹಿಳಾ ಘಟಕದ ಅಧ್ಯಕ್ಷೆ ರಾಜೀನಾಮೆ!

ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವಕ್ಕೆ ಬ್ರೇಕ್ ಬೀಳುತ್ತಿಲ್ಲ. ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ ಬೆನ್ನಲ್ಲೇ ಹಲವು ಹಿರಿಯ ನಾಯಕರು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದರು. ಇದೀಗ ಮಹಿಳಾ ಕಾಂಗ್ರೆಸ್ ಘಟಕ ಮುಖ್ಯಸ್ಥೆ ರಾಜೀನಾಮೆ ನೀಡಿದ್ದಾರೆ.
 

Big set back for Congress Punjab Mahila Congress president resign Ahead of Bharat Jodo Yatra ckm
Author
First Published Sep 6, 2022, 7:24 PM IST

ಚಂಡಿಘಡ(ಸೆ.06): ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ಅಂತಿಮ ಹಂತದ ತಯಾರಿಯಲ್ಲಿದೆ. ಆದರೆ ಪಕ್ಷದೊಳಗಿನ ವಿಚಾರ ಪರಿಸ್ಥಿತಿ ಕೈಮೀರುವಂತಿದೆ. ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ ಪಕ್ಷದ ಬುಡವನ್ನೇ ಅಲುಗಾಡಿಸಿದೆ. ಕಾರಣ ಗುಲಾಂ ನಬಿ ಆಜಾದ್ ರಾಜೀನಾಮೆ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಗಣಿಸಿದೆ. ಒಬ್ಬರ ಹಿಂದೆ ಒಬ್ಬರು ರಾಜೀನಾಮೆ ನೀಡುತ್ತಿದ್ದಾರೆ. ಈಗಾಗಲೇ 60ಕ್ಕೂ ಹೆಚ್ಚು ಕಾಂಗ್ರೆಸ್ ಹಿರಿಯ ನಾಯಕರು ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಇದೀಗ ಪಂಜಾಬ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಬಲ್ವೀರ್ ರಾಣಿ ಸೋಧಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ. ಬಲ್ವೀರ್ ರಾಣಿ ರಾಜೀನಾಮೆಯಿಂದ ಇದೀಗ ಪಂಜಾಬ್ ಕಾಂಗ್ರೆಸ್‌ನಲ್ಲಿ ಮತ್ತೆ ತಳಮಳ ಆರಂಭಗೊಂಡಿದೆ.  ಈಗಾಗಲೇ ಹಲವು ನಾಯಕರು ಪಂಜಾಬ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಮಹಿಳಾ ಘಟಕ ಅಧ್ಯಕ್ಷೆ ರಾಜೀನಾಮೆ ಪಂಜಾಬ್ ಕಾಂಗ್ರೆಸನ್ನು ದುರ್ಬಲಗೊಳಿಸಿದೆ.

ಬಲ್ವೀರ್ ರಾಣಿ ಸೋಧಿ(Balvir Rani Sodhi ) ರಾಜೀನಾಮೆಗೆ ಪಕ್ಷದೊಳಗಿನ ಅಸಮಾಧಾನ, ಬಣ ರಾಜಕೀಯ ಕಾರಣವಲ್ಲ. ವೈಯುಕ್ತಿಕ ಕಾರಣದಿಂದ ರಾಜೀನಾಮೆ ನೀಡುವುದಾಗಿ ಬಲ್ವೀರ್ ರಾಣಿ ಸೋಧಿ(Punjab Mahila Congress chief) ಹೇಳಿದ್ದಾರೆ. ನನ್ನ ಕೌಟುಂಬಿಕ ಪರಿಸ್ಥಿತಿಗಳಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅನಿವಾರ್ಯ ಕಾರಣಗಳಿಂದ ನನಗೆ ಮಹಿಳಾ ಘಟಕ ಅಧ್ಯಕ್ಷೆಯಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ರಾಜೀನಾಮೆ ಪತ್ರದಲ್ಲಿ ಬಲ್ವೀರ್ ರಾಣಿ ಸೋಧಿ ಬರೆದುಕೊಂಡಿದ್ದಾರೆ. 

Gujarat Election ಸಾಲ ಮನ್ನ, ಉಚಿತ ವಿದ್ಯುತ್, 500 ರೂಗೆ ಸಿಲಿಂಡರ್, ಜನತೆಗೆ ರಾಹುಲ್ ಗಾಂಧಿ ಭರವಸೆ!

ತಾನು ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವುದಾಗಿ ಬಲ್ವೀರ್ ರಾಣಿ ಸೋಧಿ ಹೇಳಿದ್ದಾರೆ. ತನ್ನ ನಿಷ್ಠೆ ಎಂದಿಗೂ ಕಾಂಗ್ರೆಸ್(Congress) ಪಕ್ಷಕ್ಕೆ ಇರಲಿದೆ ಎಂದು ಬಲ್ವೀರ್ ಹೇಳಿಕೊಂಡಿದ್ದಾರೆ. ಇದೇ ವೇಳೆ ಪಂಜಾಬ್ ಕಾಂಗ್ರೆಸ್(Punjab Congress) ಅಧ್ಯಕ್ಷರು ಹಾಗೂ ಪಕ್ಷದಲ್ಲಿ ಯಾವುದೇ ಭಿನ್ನಾಬಿಪ್ರಾಯಗಳಿಲ್ಲ. ನನ್ನ ವೈಯುಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ. ಇದರಲ್ಲಿ ರಾಜಕೀಯ ಉದ್ದೇಶ ಹಾಗೂ ಅಸಮಾಧಾನದ ಮಾತಿಲ್ಲ ಎಂದು ಬಲ್ವೀರ್ ಸ್ಪಷ್ಟಪಡಿಸಿದ್ದಾರೆ. ಬಲ್ವೀರ್ ವೈಯುಕ್ತಿಕ ಕಾರಣದಿಂದ ರಾಜೀನಾಮೆ(Congress Crisis) ನೀಡಿದ್ದಾರೆ. ಆದರೆ ಪಕ್ಷದಲ್ಲಿನ ರಾಜೀನಾಮೆ ಪರ್ವ(Resign Politics) ಮುಂದುವರಿಯುತ್ತಲೇ ಇದೆ. 

Karnataka Politics: ಕಾಂಗ್ರೆಸ್‌ನ ಹಲವರು ಜೆಡಿಎಸ್‌ಗೆ ಸೇರ್ಪಡೆ

ಮುದ್ದ ಹನುಮೇಗೌಡ ಕಾಂಗ್ರೆಸ್‌ಗೆ ರಾಜೀನಾಮೆ
ತುಮಕೂರು ಮಾಜಿ ಸಂಸದ ಎಸ್‌.ಪಿ. ಮುದ್ದ ಹನುಮೇಗೌಡ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದರು. ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಅವರು, ಪಕ್ಷದಲ್ಲಿ ತಮಗೆ ಆಗಿರುವ ಅನ್ಯಾಯ, ತಮಗಿರುವ ಅಸಮಾಧಾನ ಹಾಗೂ ಪಕ್ಷ ಬಿಡುತ್ತಿರುವ ಕಾರಣಗಳನ್ನು ವಿವರಿಸಿ ಪಕ್ಷ ತೊರೆಯುತ್ತಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಮನವೊಲಿಸಲು ಯತ್ನಿಸಿದರೂ, ಗುರುವಾರ ಸಂಜೆ ವೇಳೆಗೆ ಕೆಪಿಸಿಸಿ ಅಧ್ಯಕ್ಷರಿಗೆ ತಮ್ಮ ಎರಡಲು ಸಾಲಿನ ರಾಜೀನಾಮೆ ಪತ್ರ ರವಾನಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ‘ಕಾಂಗ್ರೆಸ್‌ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ದಯಮಾಡಿ ಅಂಗೀಕರಿಸಿ’ ಎಂದಷ್ಟೇ ಮುದ್ದ ಹನುಮೇಗೌಡ ಬರೆದಿದ್ದಾರೆ.

Follow Us:
Download App:
  • android
  • ios