ಭಯೋತ್ಪಾದಕರಿಗೆ ಸಹಕಾರ ನೀಡಿದಂತಾಗಲಿದೆ, ಜಮೀರ್ಗೆ ತಿವಿದ ಬಿಸಿ ಪಾಟೀಲ್
* ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರಿಗೆ ಆಹಾರದ ಕಿಟ್
* ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಆಕ್ರೋಶ
* ಭಯೋತ್ಪಾದಕರಿಗೆ ಸಹಕಾರ ನೀಡಿದಂತಾಗಲಿದೆ ಎಂದ ಬಿಸಿ ಪಾಟೀಲ್
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಏ.29): ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರಿಗೆ ಆಹಾರದ ಕಿಟ್ ನೀಡುತ್ತೇನೆ ಎಂದು ಹೇಳಿರುವ ಶಾಸಕ ಜಮೀರ್ ಅಹಮ್ಮದ್ ಖಾನೆ ನಡೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಭಯೋತ್ಪಾದಕರಿಗೆ ಸಹಕಾರ ನೀಡಿದಂತಾಗಲಿದೆ ಎಂದು ಜಮೀರ್ ಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಭೆ ಮಾಡಿ ಜನರ ಸಾಮರಸ್ಯ ಕದಡಿದಂತಹ ವ್ಯಕ್ತಿಗಳಿಗೆ ಶಾಸಕ ಜಮೀರ್ ಅಹಮ್ಮದ್ ಖಾನ್ ಆಹಾರ ಕಿಟ್ ನೀಡುವುದು ಪ್ರಚೋದನಾಕಾರಿಯಾಗಲಿದೆ ಎಂದು ಕಿಡಿಕಾರಿದ ಅವರು, ಇದು ಭಯೋತ್ಪಾದಕರಿಗೆ ಸಹಕಾರ ನೀಡುವಂತ ಕಾರ್ಯ ಆಗಲಿದೆ. ಅದ್ದರಿಂದ ಇದು ಸರಿಯಲ್ಲ. ಅಲ್ಲದೆ ಆಹಾರ ಕಿಟ್ ನೀಡುವ ಪರಿಸ್ಥಿತಿ ಕರ್ನಾಟಕದಲ್ಲಿ ಇನ್ನೂ ಬಂದಿಲ್ಲ ಎಂದು ಲೇವಡಿ ಮಾಡಿದರು.
ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಬಾಸು ಕಾಸು, ರೇಣುಕಾಚಾರ್ಯ ಬುಸ್..ಬುಸ್..
ರಾಜ್ಯದಲ್ಲಿನ ಎಲ್ಲಾ ಸಚಿವರು ಜನರ ರಕ್ತ ಹಿರುತ್ತಿದ್ದಾರೆ ಎಂಬ ಜೆಡಿಎಸ್ ನ ಹೆಚ್.ಡಿ.ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ.ಪಾಟೀಲ್, ನಮಗೆ ರಕ್ತಹೀರಿ ಗೊತ್ತಿಲ್ಲ, ನಾವು ಅನ್ನ ತಿನ್ನುವ ಮನುಷ್ಯರು, ರಕ್ತ ಕುಡಿಯುವ ವ್ಯಕ್ತಿಗಳು ರಕ್ತದ ಬಗ್ಗೆ ಮಾತನಾಡುತ್ತಾರೆ ಎಂದು ಟಾಂಗ್ ನೀಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಿರೋಧ ಮಾಡುವುದೆ ಕೆಲಸ. ವಿರೋಧ ಮಾಡದಿದ್ದರೆ ಅವರಿಗೆ ಆ ಸ್ಥಾನದಲ್ಲಿ ಉಳಿಸಲ್ಲ. ಹಾಗಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು.
ನಟ ಸುದೀಪ್-ಅಜಯ್ ದೇವಗನ್ ಭಾಷೆ ವಿಷಯವಾಗಿ ಟ್ವೀಟ್ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವರಿಗೆ ಮಾಡಲು ಕೆಲಸ ಇಲ್ಲ. ಭಾಷೆ ರಾಜಕಾರಣಕ್ಕೂ ಬಿಜೆಪಿ ಗೂ ಏನು ಸಂಬಂಧ. ನಮ್ಮನ್ನ ಟೀಕೆ ಮಾಡುವುದೆ ಅವರ ಕೆಲಸವಾಗಿದ್ದು, ಈಗಾಗಲೇ ಪೂರ್ಣ ರಾಷ್ಟ್ರದಲ್ಲಿ ಕಾಂಗ್ರೇಸ್ ಮುಳುಗಿದ್ದು, ಸಿದ್ದರಾಮಯ್ಯ-ಡಿಕೆಶಿ ಕಿತ್ತಾಟದಲ್ಲಿ ಇಲ್ಲಿಯೂ ಬಹು ಬೇಗ ಮುಳುಗಲಿದೆ ಎಂದು ಭವಿಷ್ಯ ನುಡಿದರು....,
ರಾಜ್ಯದಲ್ಲಿ ಹಿಂದಿ ಏರಿಕೆ ಮಾಡುತ್ತೇವೆ ಎಂದು ಯಾರು ಕೂಡಾ ಹೇಳಿಲ್ಲ. ನಾವು ಕನ್ನಡಿಗರು, ಕನ್ನಡದ ಬಗ್ಗೆ ಸ್ವಾಭಿಮಾನ ಇದೆ. ನಮಗೆ ಕನ್ನಡ ಮುಖ್ಯ. ಕನ್ನಡಕ್ಕೆ ಬೆಂಬಲ ಮಾಡಬೇಕು. ನಮ್ಮ ಭಾಷೆಗೆ ನಮ್ಮ ಬೆಂಬಲ ಎಂದು ಸ್ವಷ್ಟಪಡಿಸಿದರು.