Asianet Suvarna News Asianet Suvarna News

ಯತ್ನಾಳ್ ಅವನೇನು ಮೆಂಟಲ್ಲಾ..?: ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ವಾಗ್ದಾಳಿ

* ಹುಬ್ಬಳ್ಳಿಯಲ್ಲ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ

* ಇಡೀ ಭಾರತ ದೇಶವೇ ತಲ್ಲಣಗೊಳ್ಳುವ  ಸುದ್ದಿ ನೀವು ಕೊಟ್ಟಿದ್ದೀರಿ.

* ಸಿಎಂ ಆಗಲು 2500 ಕೋಟಿ ರೂಪಾಯಿ ರೆಡಿ ಮಾಡಿಕೊಳ್ಳಿ ಎಂಬ ಉತ್ನಾಳ ಹೇಳಿಕೆ ವಿಚಾರ.

basanagouda Patil Yatnal Charges Should Be Probed Says DK Shivakumar Pod
Author
Bangalore, First Published May 7, 2022, 1:14 PM IST

ಹುಬ್ಬಳ್ಳಿ(ಮೇ.07): ರಾಜ್ಯದ ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ರು. ಹಾಗೂ ಮಂತ್ರಿ ಆಗಬೇಕಾದರೆ 100 ಕೋಟಿ ರು. ನೀಡಬೇಕು ಎಂದು ಖುದ್ದು ಬಿಜೆಪಿ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್‌ ಗಂಭೀರ ಹೇಳಿಕೆ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕಿರುವ ಈ ವಿಚಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕೆಪಿಸಿಸ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇಡೀ ಭಾರತ ದೇಶವೇ ತಲ್ಲಣಗೊಳ್ಳುವ  ಸುದ್ದಿ ನೀವು ಕೊಟ್ಟಿದ್ದೀರಿ. ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ, ಹಾಲಿ ಶಾಸಕ ರಾಜ್ಯದ ಜನರಿಗೆ ತಿಳಿಸಿದ್ದಾರೆ. ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ರೆಡಿ ಮಾಡಿಕೊಂಡು ಬನ್ನಿ ಅಂತ ತಿಳಿಸಿದ್ದಾರೆ. ಎಸಿಬಿ ಅಷ್ಟೇ ಅಲ್ಲ, ರಾಜ್ಯದ ಸಿಎಂ ರಿಗೆ ರಾಜಕೀಯ ಬದ್ಧತೆ ಇದ್ದರೆ. ಪಕ್ಷದ ಗೌರವ ಉಳಿಸುಕೊಳ್ಳುವುದು ಬಿಟ್ಟಿ ತನಿಖೆಗೆ ಆದೇಶಿಸಲಿ. ರಾಜ್ಯ ಸರ್ಕಾರದ ಹಗರಣಗಳನ್ನು ಎಲ್ಲರೂ ಗಮನಿಸಿದ್ದಾರೆ. ಈ ಸರ್ಕಾರ ಹುಟ್ಟಿದ್ದೇ ಶಾಸಕರ ಖರೀದಿ ಮಾಡೋಕೆ. ಬೇರೆ ಪಕ್ಷದ ಶಾಸಕರಿಗೂ ಬಿಜೆಪಿ ಆಮಿಷ ಒಡ್ಡಿದನ್ನು ನಾವು ನೋಡಿದ್ದೇವೆ. ಸರ್ಕಾರ ಪ್ರತಿ ಹಂತದಲ್ಲು ಭ್ರಷ್ಟಾಚಾರ ನಡೆಸುತ್ತಿದೆ.
ಪ್ರತಿಯೊಂದು ನೇಮಕಾತಿಗೂ ಒಂದೊಂದು ರೇಟ್ ಫಿಕ್ಸ್ ಆಗಿದೆ. ಹೋಟೆಲ್ ನಲ್ಲಿ ತಿಂಡಿ ದರ‌ ನಿಗದಿ ಪಡಿಸಿದಂತೆ ಇವರು ಫಿಕ್ಸ್ ಮಾಡಿದ್ದಾರೆ ಎಂದಿದ್ದಾರೆ.

ಯತ್ನಾಳ್ ಅವನೇನು ಮೆಂಟಲ್ಲಾ..?

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, ಯತ್ನಾಳ್‌ಗೇನು ಹುಚ್ಚು ಹಿಡಿದಿಲ್ಲವಲ್ಲ. ಹೀಗಿರ್ಬೇಕಾದ್ರೆ ಯತ್ನ ಹೇಳಿಕೆಯನ್ನು ಯಾಕೆ ಗಂಭೀರವಾಗಿ ಪರಿಗಣಿಸಿಲ್ಲ? ನಳಿನ್ ಕುಮಾರ್ ಕಟೀಲ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ನವರೇ ಮಾಡಿರಲಿ ತನಿಖೆ ಆಗಲಿ, ನಳಿನ್ ಕುಮಾರ್ ಕಟೀಲ್ ಸಹ ಇದನ್ನ ಮುಚ್ಚೋಕೆ ಪ್ರಯತ್ನ ಮಾಡುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಸುದ್ದಿಗೋಷ್ಠಿ ಮಾಡಿದ್ರೆ ಅವರಿಗೆ ನೋಟಿಸ್ ಕೊಟ್ಟಿದ್ದೀರಿ, ಯತ್ನಾಳ್ ಗೆ ಯಾಕೆ ಕೊಟ್ಟಿಲ್ಲ? ಅವ್ರೇನು ಮೆಂಟಲ್ಲಾ? ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಇನ್ನೊಂದು ನ್ಯಾಯವಾ? ಮಿಸ್ಟರ್ ಬಿಜೆಪಿ ಪ್ರೆಸಿಡೆಂಟ್, ಯಾಕೆ ಅಕ್ರಮವನ್ನ ಬಯಲಿಗೆಳೆಯುತ್ತಿಲ್ಲ? ಯಾವ ಮಂತ್ರಿ ಇದರಲ್ಲಿ ಭಾಗಿಯಾಗಿದ್ರು ಅದರ ತನಿಖೆ ಆಗಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಆಗಲಿ. ಕುಮಾರಸ್ವಾಮಿ ಹೇಳಿದ್ದಾರೆ ಅವರ ಹೇಳಿಕೆಯನ್ನ ಇವರು ಕೇಳುತ್ತಿಲ್ಲ. ನಾವು ಸಿಎಂ ರಾಜೀನಾಮೆಗೆ ಒತ್ತಾಯಿಸಲ್ಲ, ನಾನು ಕೇಳಿದ್ರೆ ರಾಜೀನಾಮೆ ಕೊಡ್ತಾರಾ ಅವರು..? ಎಂದು ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನ್ನ 40 ವರ್ಷದ ರಾಜಕಾರಣದಲ್ಲಿ ಈ ರೀತಿ ನೋಡಿರಲಿಲ್ಲ. ಎಂದೂ ಗುಡುಗಿದ್ದಾರೆ. 

ಇದೇ ವೇಳೆ ಕೇಂದ್ರ ಸರ್ಕಾರದ ಏಜೆನ್ಸಿಯವರು ತನಿಖೆ ಮಾಡಬೇಕು

ಕೇಂದ್ರ ಸರ್ಕಾರದ ಏಜೆನ್ಸಿಯವರು ತನಿಖೆ ಮಾಡಬೇಕು. ಯತ್ನಾಳ್ಳ್‌ರನ್ನ ಕೂಡಲೇ ವಶಕ್ಕೆ ಪಡೆಯಬೇಕು, ಅವರನ್ನ ಸಾಕ್ಷಿಯಾಗಿಸಿಕೊಂಡು ತನಿಖೆ ಮಾಡಬೇಕು ಎಂದೂ ಡಿಕೆಶಿ ಆಗ್ರಹಿಸಿದ್ದಾರೆ. 
 

Follow Us:
Download App:
  • android
  • ios