ಮಂಗಳೂರು, (ಜುಲೈ.05): ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಆಪ್ತರೊಬ್ಬರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ

ಕರ್ನಾಟಕದ ಬಿಜೆಪಿ ಶಾಸಕರೊಬ್ಬರಿಗೆ ವಕ್ಕರಿಸಿದ ಕೊರೋನಾ

ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಿಗೆ ಕೊರೋನಾ ಅಟ್ಯಾಕ್ ಆಗಿದೆ. ಸೋಂಕಿತ ಬಿಜೆಪಿ ಮಖಂಡ ಶಾಸಕ ರಾಜೇಶ್ ನಾಯ್ಕ್ ಅವರ ಹಲವು ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ ಭಾಗವಹಿಸಿದ್ದಾರೆ. ಇದರಿಂದ  ಶಾಸಕ ರಾಜೇಶ್ ನಾಯ್ಕ್ ಕೊರೋನಾ ಭೀತಿ ಶುರುವಾಗಿದೆ.

ಅಷ್ಟೇ ಅಲ್ಲದೇ  ಕೆಲ ದಿನಗಳ ಹಿಂದಷ್ಟೇ ಸೋಂಕಿತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಭಾಗವಹಿಸಿದ್ದವರಿಗೂ ಸದ್ಯ ಕೊರೋನಾ ಆತಂಕ ಮನೆಮಾಡಿದೆ.

ಮಾಜಿ ಕೇಂದ್ರ ಸಚಿವರಿಗೂ ತಗುಲಿದ ಕೊರೋನಾ: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಮಂಗಳೂರು ಉತ್ತರ ಕ್ಷೇತ್ರದ ಭರತ್ ಶೆಟ್ಟ ಹಾಗೂ ಇದೇ ಜಿಲ್ಲೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರಿಗೆ ಕೊರೋನಾ ವಕ್ಕರಿಸಿದೆ. ಇದರ ಬೆನ್ನಲ್ಲೇ ಇದೀಗ ಶಾಸಕ ರಾಜೇಶ್ ನಾಯ್ಕ್ ಸಹ ಆತಂಕದಲ್ಲಿದ್ದಾರೆ.