Asianet Suvarna News Asianet Suvarna News

'ಪಕ್ಷಾಂತರಿಗಳಿಗೆ ಸಾರ್ವಜನಿಕ ಹುದ್ದೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ನಿಷೇಧಿಸಿ'

ದೇಶದಲ್ಲಿ ಅಧಿಕಾರದ ಆಸೆಗಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವುದೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಾಂತರ ಮಾಡುವವರನ್ನು ಪಕ್ಷಾಂತರಿಗಳಿಗೆ ಸಾರ್ವಜನಿಕ ಹುದ್ದೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ನಿಷೇಧಿಸಿ ಎನ್ನುವ ಕೂಗು ಕೇಳಿಬಂದಿದೆ.

Ban defectors from holding public office for 5 years Says Kapil Sibal
Author
Bengaluru, First Published Jul 19, 2020, 2:46 PM IST

ನವದೆಹಲಿ, (ಜುಲೈ.19): ಒಂದೆಡೆ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಸಚಿನ್ ಪೈಲಟ್ ಮತ್ತು ಇತರ ಕೆಲ ಶಾಸಕರನ್ನು ಅವರ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ. ಇದರ ಮಧ್ಯೆ ಪಕ್ಷಾಂತರವಾಗುವ ನಾಯಕರನ್ನು 5 ವರ್ಷ ಸಾರ್ವಜನಿಕ ಹುದ್ದೆಯಿಂದ ನಿಷೇಧಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಸಿಬಲ್, ಪಕ್ಷಾಂತರಿಗಳು ಮುಂದಿನ 5 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆ ಪಡೆಯದಂತೆ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದರ ಮೇಲೆ ನಿಷೇಧ ಹೇರಬೇಕು ಎಂದು ಹೇಳಿದ್ದಾರೆ.

ಶಾಸಕರ ಪಕ್ಷಾಂತರಕ್ಕೆ ಕೊನೆ ಮೊಳೆ? ಪರಿಚ್ಛೇದ10 ತಿದ್ದುಪಡಿ ಸಭೆಯಲ್ಲಿ ಸಿದ್ದು ಅಭಿಪ್ರಾಯ

ಜನರಿಂದ ಆಯ್ಕೆಯಾದ ಸರ್ಕಾರವನ್ನು ಕೆಡವುವಂಥ ವೈರಸ್‌ ದೆಹಲಿಯಲ್ಲಿದೆ. ಇದು ವುಹಾನ್‌ ವೈರಸ್‌ನಷ್ಟೇ ಅಪಾಯಕಾರಿ.  ಪಕ್ಷಾಂತರ ನಿಷೇಧ ಕಾನೂನಿಗೆ ತಿದ್ದುಪಡಿ ತಂದು, ಪಕ್ಷಾಂತರಿಗಳು ಐದು ವರ್ಷಗಳ ಕಾಲ ಯಾವುದೇ ಹುದ್ದೆ ಹೊಂದುವುದು ಹಾಗೂ ಮುಂದಿನ ಚುನಾವಣೆ ಎದುರಿಸುವುದನ್ನು ತಡೆಯಬೇಕು ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲೂ ಸಹ ಕಾಂಗ್ರೆಸ್ ಶಾಸಕರು ಬಿಜೆಗೆ ಪಕ್ಷಾಂತರಗೊಂಡಿದ್ದರಿಂದ ಅಲ್ಲಿನ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು. ಇನ್ನು ಕರ್ನಾಕದಲ್ಲೂ ಸಹ ಕಾಂಗ್ರೆಸ್‌ನ ಶಾಸಕರು ಬಿಜೆಪಿ ಸೇರಿರುವುದರಿಂದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒಂದು ವರ್ಷದಲ್ಲಿ ಬಿತ್ತು. 
ಇದೀಗ ಇದೇ ರೀತಿ ರಾಜಸ್ಥಾನದಲ್ಲೂ ರಾಜಕೀಯ ಹೈಡ್ರಾಮಾವೇ ನಡೆದಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹಗ್ಗಾಜಗ್ಗಾಟ ನಡೆದಿದೆ. 

Follow Us:
Download App:
  • android
  • ios