ರಾಯಚೂರು(ನ.20): ಬೀದರ್‌ ಜಿಲ್ಲೆಯ ಬಸವಕಲ್ಯಾಣ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸೋದಿಲ್ಲ. ಪಕ್ಷ ನೀಡಿದ ಹುದ್ದೆಯಲ್ಲಿಯೇ ಮುಂದುವರೆಯುತ್ತೇನೆ. ಇನ್ನು ರಾಯಚೂರು ಜಿಲ್ಲೆಯ ಮಸ್ಕಿ ಉಪ ಚುನಾವಣೆ ಉಸ್ತುವಾರಿಯನ್ನ ರಾಜ್ಯದ ಮುಖಂಡರು ನೀಡಿದರೆ ನಿರ್ವಹಿಸುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

ಇಂದು(ಶುಕ್ರವಾರ) ಜಿಲ್ಲೆಯ ಸಿಂಧನೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆಯನ್ನು ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಉದ್ಘಾಟಿಸಿದ್ದಾರೆ.  ಇದೇ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ಇತ್ತೀಚೆಗೆ ಜರುಗಿದ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ನನ್ನೊಬ್ಬನಿಂದ ಪಕ್ಷ ಗೆಲುವು ಸಾಧಿಸಿಲ್ಲ. ಎಲ್ಲ ಮುಖಂಡರ ಹಾಗೂ ಕಾರ್ಯಕರ್ತರ ಶ್ರಮದಿಂದ ಜಯಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. 

ಮತ್ತೆರೆಡು ಉಪಚುನಾವಣೆಗೆ ಬಿಜೆಪಿ ಸಜ್ಜು, ಅಖಾಡಕ್ಕಿಳಿದ ಉಸ್ತುವಾರಿಗಳು..!

ಇದಕ್ಕೂ ಪೂರ್ವದಲ್ಲಿ ಮಂತ್ರಾಲಯದ ರಾಯರ ಸನ್ನಿಧಿಗೆ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ದರ್ಶನ ಮಾಡಿದ್ದಾರೆ. ಬಳಿಕ ಪೀಠಾಧಿಪತಿ ಸುಭದೇಂದ್ರ ತೀರ್ಥರಿಂದ ಆಶೀರ್ವಾದ ಪಡೆದಿದ್ದಾರೆ.