ಶಿವಾಜಿನಗರ.. ಹೆಬ್ಬಾಳ.. ಶತ್ರುಗಳ ‘ರೋಷ’ ಸಿದ್ದು ವಿರುದ್ಧ ದ್ವೇಷ..!ಆಪರೇಷನ್ ಟಗರು ಕಾರ್ಯಾಚರಣೆಗೆ ಆಪ್ತಮಿತ್ರನಿಂದಲೇ ಮುಹೂರ್ತ..! ರಾಜಧಾನಿಯಿಂದಲೇ ರಣವೀಳ್ಯ.. ಏನಿದು ರೋಷ.., ದ್ವೇಷದ ಕಥೆ…?
ಶತ್ರು ‘ರೋಷ’.. ಸಿದ್ದುದ್ವೇಷ... ಇದು ಕರ್ನಾಟಕದ ಮಾಸ್ ಲೀಡರ್ ಸಿದ್ದರಾಮಯ್ಯನವರ ಸುತ್ತ ಸಿದ್ಧವಾಗ್ತಿರೋ ಶತ್ರು ಚಕ್ರವ್ಯೂಹದ ಸ್ಫೋಟಕ, ರೋಚಕ ಸುದ್ದಿ ವೀಕ್ಷಕರೇ... ಟಗರು ಬೇಟೆಗೆ ಖೆಡ್ಡಾ ತೋಡಿ ಕಾಯ್ತಿರೋ ಸಿದ್ದರಾಮಯ್ಯನವರ ಒಂದು ಕಾಲದ ಆಪ್ತಮಿತ್ರ, ಅತ್ಯಾಪ್ತ ಮಿತ್ರ. ಆ ಸುದ್ದಿ ಕೇಳಿದ ಸಿದ್ದರಾಮಯ್ಯ ಬೆಂಕಿಯಾಗಿ ಬಿಟ್ಟಿದ್ದಾರೆ. ನೋಡಿ ಟಗರು ಕೋಪ ಹೇಗಿದೆ ಅನ್ನೋದನ್ನು.
ಏನ್ ಸಾರ್ ನಿಮ್ಮ ಆಪ್ತಮಿತ್ರನೇ ನಿಮ್ಗೆ ಖೆಡ್ಡಾ ತೋಡ್ತಿದ್ದಾರಲ್ಲಾ ಅಂತ ಕೇಳಿದ್ದಕ್ಕೆ, ಸಿದ್ದರಾಮಯ್ಯನವರು ಅದ್ಯಾವ ಪರಿ ರೊಚ್ಚಿಗೆದ್ರು ಅನ್ನೋದಕ್ಕೆ ಈ ದೃಶ್ಯಗಳೇ ಸಾಕ್ಷಿ. ಹಾಗಾದ್ರೆ ಸಿದ್ದರಾಮಯ್ಯ ವಿರುದ್ಧ ತೆರೆಯ ಹಿಂದೆ ಸಿದ್ಧವಾಗ್ತಿರೋದು ಅದೆಂಥಾ ಚಕ್ರವ್ಯೂಹ..? ಟಗರು ಬೇಟೆಗೆ ಮುಹೂರ್ತವಿಟ್ಟ ಆ ಆಪ್ತಮಿತ್ರ ಯಾರು..? ಏನಿದು ರೋಷ.., ದ್ವೇಷದ ಕಥೆ..? ಸಿದ್ದರಾಮಯ್ಯನವರಿಗೆ ರಾಜಧಾನಿಯಿಂದಲೇ ರಣವೀಳ್ಯ ಕೊಟ್ಟವರು ಯಾರು..?
ಸಚಿವ ಆರಗಗೆ ಅನುಭವವೂ ಇಲ್ಲ. ಇಲಾಖೆಯನ್ನೂ ನಿಭಾಯಿಸಲೂ ಬರಲ್ಲ: ಸಿದ್ದರಾಮಯ್ಯ ಆಕ್ರೋಶ
ಖೆಡ್ಡಾ ರೆಡಿ... ಅಖಾಡವೂ ರೆಡಿ..ಬಲೆಗೆ ಬೀಳುತ್ತಾ ಟಗರು..?
ಸಿದ್ದರಾಮಯ್ಯನವರನ್ನು ರಾಜಕೀಯದಲ್ಲಿ ಬೇಟೆಯಾಡೋದಂದ್ರೆ ಅದೇನು ಸುಮ್ನೆ ಮಾತಲ್ಲ. ರಾಜಕಾರಣದಲ್ಲಿ ಏಳು ಕೆರೆಗಳ ನೀರು ಕುಡಿದಿರೋ ಪೈಲ್ವಾನ್ ಬೇರೆ. ಅಖಾಡದಲ್ಲಿ ತೊಡೆ ತಟ್ಟಿ ನಿಂತ್ರೆ ಸಿದ್ದರಾಮಯ್ಯ ಏನ್ ಮಾಡಬಲ್ರು ಅನ್ನೋದಕ್ಕೆ ರಾಜ್ಯ ರಾಜಕಾರಣ ಹಲವಾರು ವರ್ಷಗಳಿಂದ ಸಾಕ್ಷಿಯಾಗ್ತಾನೇ ಬಂದಿದೆ. ಅಂತಹ ಸಮರ ಪ್ರಚಂಡನಿಗೇ ಈಗ ಸವಾಲ್ ಹಾಕಿ ನಿಂತಿದೆ ಶತ್ರುಕೂಟ. ಆಪ್ತಮಿತ್ರನೇ ಶತ್ರುವಾಗಿ ಸಿದ್ದರಾಮಯ್ಯ ವಿರುದ್ಧ ನಿಂತಿದ್ದಾನೆ. ನೇರಾನೇರ ಸಿದ್ದು ದುಷ್ಮನ್"ಗಳ ಸೈನ್ಯ ಸೇರಿ ರಾಜಧಾನಿಯಿಂದಲೇ ಸಿದ್ದುಗೆ ರಣವೀಳ್ಯವನ್ನೂ ಕೊಟ್ಟು ಬಿಟ್ಟಿದ್ದಾನೆ. ಆ ರಣವೀಳ್ಯದ ಅಖಾಡ ಯಾವುದು ಗೊತ್ತಾ ವೀಕ್ಷಕರೇ..
Spot...
ರಾಜಧಾನಿ ವ್ಯೂಹ ಹೆಣೆದು ತೊಡೆ ತಟ್ಟಿದ ಸಿದ್ದು ಶತ್ರು ಪಡೆ..!
ಯೆಸ್... ಸಿದ್ದರಾಮಯ್ಯನವರ ಶಕ್ತಿ ಕುಂದಿಸಲು, ಚುನಾವಣೆಗೂ ಮೊದ್ಲೇ ಸಿದ್ದು ಬಲ ಕಮ್ಮಿ ಮಾಡಲು ಅಖಾಡ ರೆಡಿಯಾಗಿರೋದು ರಾಜಧಾನಿ ಬೆಂಗಳೂರಲ್ಲಿ. ರಾಜಧಾನಿಯ ಎರಡು ರಣಕಣಗಳಲ್ಲಿ ಟಗರು ಸಿದ್ದು ಬೇಟೆಗೆ ಅವರ ಶತ್ರು ಪಡೆ ಬಲೆ ಬೀಸಿಯೇ ಬಿಟ್ಟಿದೆ. ಆ ಎರಡು ರಣಕಣಗಳಲ್ಲಿ ಒಂದು ಶಿವಾಜಿನಗರ, ಮತ್ತೊಂದು ಹೆಬ್ಬಾಳ.
ಏನಿದು ರಾಜಧಾನಿ ವ್ಯೂಹ..?
* ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಖಾಡ ಬಾಗಲಕೋಟ ಜಿಲ್ಲೆಯ ಬಾದಾಮಿ. * ತವರು ಕ್ಷೇತ್ರ ಚಾಮುಂಡೇಶ್ವರಿ ಕೈಕೊಟ್ಟಾಗ ಸಿದ್ದರಾಮಯ್ಯನವರ ರಾಜಕೀಯ ಅಸ್ತಿತ್ವ ಉಳಿಸಿದ್ದೇ ಉತ್ತರ ಕರ್ನಾಟಕದ ಬಾದಾಮಿ ವಿಧಾನಸಭಾ ಕ್ಷೇತ್ರ.
* ಹಾಗಾದ್ರೆ ಬಾದಾಮಿ ದೊರೆಗೆ ಇದೇನಿದು ಶಿವಾಜಿನಗರ ಹೆಬ್ಬಾಳ ಟೆನ್ಷನ್..?
* ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇನಾದ್ರೂ ಶಿವಾಜಿನಗರದಿಂದ ಅಥವಾ ಹೆಬ್ಬಾಳದಿಂದ ಸ್ಪರ್ಧಿಸ್ತಾರಾ..?
* ಅದೇ ಕಾರಣದಿಂದ ಸಿದ್ದು ವಿರುದ್ಧ ರಾಜಧಾನಿ ವ್ಯೂಹ ರೆಡಿಯಾಗಿದ್ಯಾ..?
* ಅಷ್ಟಕ್ಕೂ ಟಗರು ಬೇಟೆಗೆ ಇಂಥದ್ದೊಂದು ವ್ಯೂಹ ರೆಡಿ ಮಾಡಿದ ಸೂತ್ರಧಾರ ಯಾರು ಗೊತ್ತಾ..?
* ಸಿದ್ದರಾಮಯ್ಯನವರ ಒಂದು ಕಾಲದ ಅತ್ಯಾಪ್ತ ಮಿತ್ರ, ಸಿದ್ದು ರಾಜಕೀಯ ನಿರ್ಧಾರಗಳಲ್ಲಿ ಅವರ ಜೊತೆಗೇ ಇದ್ದ ಖಾಸಾ ಖಾಸಾ ದೋಸ್ತ್.
ಹೌದು... ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸದ್ಯದ ಪರಿಸ್ಥಿತಿಯಿದು ವೀಕ್ಷಕರೇ... ಸಿದ್ದು ಫಾರ್ಮ್ ಹೌಸ್'ನ ಗಿಣಿಯೊಂದು ಈಗ ಗೂಡಿನಿಂದ ಹೊರ ಬಂದು, ಹದ್ದಾಗಿ ಕುಕ್ಕುತ್ತಿದೆ. ಅಷ್ಟಕ್ಕೂ ಆ ಹದ್ದು ಯಾವುದು..? ಸಿದ್ದರಾಮಯ್ಯನವರ ವಿರುದ್ಧ ಸಿಡಿದೆದ್ದು ನಿಂತಿರೋ ಅವರ ಆಪ್ತಮಿತ್ರ ಯಾರು..? ಸಿದ್ದು ಬೇಟೆಗೆ ಆ ಆಪ್ತಮಿತ್ರ ಸಿದ್ಧಮಾಡಿರೋ ಬಲೆ ಅದೆಷ್ಟು ಪವರ್'ಫುಲ್..? ಆ ಬಲೆಯ ಹಿಂದಿನ ಸೂತ್ರಧಾರ ಯಾರು ಅನ್ನೋ ಗುಟ್ಟನ್ನು ರಟ್ಟು ಮಾಡ್ತೀವಿ ನೋಡಿ.
ಸಿ.ಎಂ ಇಬ್ರಾಹಿಂ... ಟಗರು ಬೇಟೆಗೆ ರಾಜಧಾನಿ ವ್ಯೂಹ ಹೆಣೆದಿರೋ ತಂತ್ರಗಾರಿಕೆಯ ಸೂತ್ರಧಾರ ಇವ್ರೇ... ಮಾತಿನ ಮಲ್ಲ ಇಬ್ರಾಹಿಂ ಪರಿಚಯ ನಿಮ್ಗೆ ಇದ್ದೆ ಇರತ್ತೆ ವೀಕ್ಷಕರೇ... ಜನತಾ ಪರಿವಾರದಿಂದ ರಾಜಕಾರಣ ಶುರು ಮಾಡಿ, ಮಧ್ಯದಲ್ಲೊಮ್ಮೆ ಕಾಂಗ್ರೆಸ್'ಗೆ ಹೋಗಿ, ಮತ್ತೆ ದೇವೇಗೌಡರ ಜೊತೆ ಸೇರಿ ಬಳಿಕ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್'ಗೆ ಬಂದು ಎರಡೆರಡು ಬಾರಿ ಎಂಎಲ್'ಸಿಯಾದವರು ಇಬ್ರಾಹಿಂ. ಈಗ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗ್ಲಿಲ್ಲ ಅಂತ ಎಂಎಲ್'ಸಿ ಸ್ಥಾನವನ್ನೂ ತ್ಯಜಿಸಿ, ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಸೇರಿದ್ದಾರೆ ಇಬ್ರಾಹಿಂ.
ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಸಿದ್ದು ಜೊತೆ ಕೈ ಕೋಟೆಗೆ ಕಾಲಿಟ್ಟವರು ಇಬ್ರಾಹಿಂ. ಸಿದ್ದರಾಮಯ್ಯನವರ ಆಪ್ತವಲಯದಲ್ಲಿದ್ದ ಇಬ್ರಾಹಿಂ ಈಗ ಸಿದ್ದುಗೆ ಶಾಕ್ ಕೊಟ್ಟು ಜೆಡಿಎಸ್ ಕಡೆ ಹೊರಟಿದ್ದೂ ಆಗಿದೆ, ಪಕ್ಷ ತೊರೆದಿರೋ ಆಪ್ತಮಿತ್ರನ ವಿರುದ್ಧ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದೂ ಆಗಿದೆ.
ದಶಕಗಳ ಕಾಲ ಒಂದಾಗಿದ್ದ ಸ್ನೇಹಿತರು ರಾಜಕೀಯವಾಗಿ ದೂರವಾಗಿದ್ದಾರೆ. ಇಬ್ರಾಹಿಂ ಅವರು ಹೋಗಿ ಸೇರಿಕೊಂಡಿರೋದು ಸಿದ್ದರಾಮಯ್ಯನವರ ಅತೀ ದೊಡ್ಡ ರಾಜಕೀಯ ವೈರಿ ದೇವೇಗೌಡ್ರು ಮತ್ತು ಕುಮಾರಸ್ವಾಮಿ ಜೊತೆಗೆ. ಜೆಡಿಎಸ್ ಗರಡಿ ಸೇರಿದ್ದೇ ತಡ, ಸಿದ್ದು ಬೇಟೆಗೆ ರೋಚಕ ತಂತ್ರವೊಂದನ್ನು ಇಬ್ರಾಹಿಂ ರೆಡಿ ಮಾಡಿಯೇ ಬಿಟ್ಟಿದ್ದಾರೆ. ಸಿದ್ದರಾಮಯ್ಯನವರ ಜಂಘಾಬಲ ಉಡುಗಿಸೋದಕ್ಕೆ ಹೊರಟಿರೋ ಸಿಎಂ ಇಬ್ರಾಹಿಂ ಕೈಗೆ ಸಿಕ್ಕಿರೋ ಅಸ್ತ್ರವೇ ಬೆಂಗಳೂರು ರಾಜಕೀಯ ಅಖಾಡದ ಹಳೇಹುಲಿ, ಮುಸ್ಲಿಂ ಸಮುದಾಯದ ಮತ್ತೊಬ್ಬ ಹಿರಿಯ ನಾಯಕ, ಮಾಜಿ ಸಚಿವ ರೋಷನ್ ಬೇಗ್.
ಸಿದ್ದು ವಿರುದ್ಧದ "ರೋಷಾ"ಗ್ನಿಯನ್ನೇ ಅಸ್ತ್ರವಾಗಿಸಿಕೊಂಡ ಇಬ್ರಾಹಿಂ..!
ಆರ್.ರೋಷನ್ ಬೇಗ್... ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಗೆದ್ದಿದ್ದ ರಾಜ್ಯ ರಾಜಕಾರಣದ ಹಳೇ ಪೈಲ್ವಾನ್. ಜನತಾದಳದಿಂದ 2 ಬಾರಿ, ಕಾಂಗ್ರೆಸ್'ನಿಂದ ಮೂರು ಬಾರಿ... ಒಟ್ಟು ಐದು ಬಾರಿ ಶಿವಾಜಿನಗರದಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದ ರೋಷನ್ ಬೇಗ್, ಈಗ ಕಾಂಗ್ರೆಸ್"ನಲ್ಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಇಬ್ರಾಹಿಂ, ರಾಜಕೀಯವಾಗಿ ಸೈಲೆಂಟಾಗಿರೋ ರೋಷನ್ ಬೇಗ್ ಅವರನ್ನು ಸಿದ್ದು ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಜೆಡಿಎಸ್ ಸೇರುತ್ತಲೇ ಆಪರೇಷನ್ ಶುರು ಮಾಡಿರೋ, ಸಿಎಂ ಇಬ್ರಾಹಿಂ, ಪ್ರಭಾವಿ ಮುಸ್ಲಿಂ ನಾಯಕ ರೋಷನ್ ಬೇಗ್'ರನ್ನು ಜೆಡಿಎಸ್"ಗೆ ಕರೆ ತರಲು ವೇದಿಕೆ ರೆಡಿ ಮಾಡಿದ್ದು, ಈಗಾಗ್ಲೇ ಒಂದು ಸುತ್ತಿನ ಯಶಸ್ವೀ ಮಾತುಕತೆಯನ್ನೂ ನಡೆಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ರೋಷನ್ ಬೇಗ್ ಜೆಡಿಎಸ್ ಸೇರೋದು ಪಕ್ಕಾ. ಅಷ್ಟಕ್ಕೂ ಸಿದ್ದರಾಮಯ್ಯ ವಿರುದ್ಧ ರೋಷನ್ ಬೇಗ್ ಅವರಿಗೆ ಇರೋ ಕೋಪ ಎಂಥದ್ದು ಗೊತ್ತಾ ವೀಕ್ಷಕರೇ...
2019ರ ಲೋಕಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ರೋಷನ್ ಬೇಗ್ ಹೊರ ಹಾಕಿದ್ದ ರೋಷಾಗ್ನಿಯಿದು. ಸಿದ್ದರಾಮಯ್ಯ ಮೇಲಿನ ಕೋಪಕ್ಕೆ ಕಾಂಗ್ರೆಸ್'ನಿಂದ ದೂರವಾಗಿರೋ ರೋಷನ್ ಬೇಗ್, ಜೆಡಿಎಸ್ ಬಾಗಿಲಲ್ಲಿ ನಿಂತಿದ್ದು, ಸಿದ್ದು ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಸಿಎಂ ಇಬ್ರಾಹಿಂ ಮತ್ತು ರೋಷನ್ ಬೇಗ್ ಜೋಡಿಯ ಆ ಸೇಡಿನ ಅಖಾಡವೇ ಶಿವಾಜಿನಗರ ಮತ್ತು ಹೆಬ್ಬಾಳ.
ಶಿವಾಜಿನಗರ...ಹೆಬ್ಬಾಳದಲ್ಲಿ ಸಿದ್ದು ವಿರುದ್ಧ ಶತ್ರು ತಂತ್ರ..!
ಕಾಂಗ್ರೆಸ್ ತೊರೆದಿರುವ ಸಿದ್ದರಾಮಯ್ಯನವರ ಆಪ್ತ ಸಿಎಂ ಇಬ್ರಾಹಿಂ ಒಂದು ಕಡೆ.. ಸಿದ್ದರಾಮಯ್ಯ ವಿರುದ್ಧ ಸಿಟ್ಟಿಗೆದ್ದು ಕಾಂಗ್ರೆಸ್'ನಿಂದ ದೂರವಾಗಿರುವ ರೋಷನ್ ಬೇಗ್ ಮತ್ತೊಂದ್ಕಡೆ... ಇಬ್ಬರೂ ಸಿದ್ದು ಶತ್ರುಗಳು ಒಂದೇ ಕಡೆ ಸೇರಿದ್ದಾರೆ. ಅದು ದೇವೇಗೌಡರ ಗರಡಿಯಲ್ಲಿ. ಇಬ್ಬರ ಟಾರ್ಗೆಟ್ ಒಂದೇ. ಸಿದ್ದರಾಮಯ್ಯನವರ ವಿರುದ್ಧ ಸೇಡು ತೀರಿಸಿಕೊಳ್ಳೋದು. ಹಾಗಂತ ಸಿದ್ದು ವಿರುದ್ಧ ಚುನಾವಣೆಗೇನೂ ಸ್ಪರ್ಧಿಸ್ತಾ ಇಲ್ಲ. ಬದ್ಲಾಗಿ ಸಿದ್ದರಾಮಯ್ಯನವರ ಅತ್ಯಾಪ್ತ ಶಾಸಕರಿಬ್ಬರನ್ನು ಸೋಲಿಸಿ ಸಿದ್ದುಗೆ ಶಾಕ್ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ರೆಡಿಯಾಗಿರೋದೇ ಶಿವಾಜಿನಗರ ಮತ್ತು ಹೆಬ್ಬಾಳ ಅಖಾಡ.
ಶಿವಾಜಿನಗರದಿಂದಲೇ ಶುರು ಸಿದ್ದು ವಿರುದ್ಧ ಶತ್ರುಗಳ ಯುದ್ಧ..!
ಶಿವಾಜಿನಗರ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರ ಆತ್ಯಾಪ್ತರೇ ಶಾಸಕರಾಗಿದ್ದಾರೆ. ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್, ಹೆಬ್ಬಾಳದಲ್ಲಿ ರಿಜ್ವಾನ್ ಅರ್ಷಜ್. 2023ರ ಚುನಾವಣೆಯಲ್ಲಿ ಇಬ್ಬರನ್ನೂ ಸೋಲಿಸಿ ಸಿದ್ದರಾಮಯ್ಯಗೆ ಶಾಕ್ ನೀಡೋದು ಇಬ್ರಾಹಿಂ-ರೋಷನ್ ಬೇಗ್ ಜೋಡಿಯ ಲೆಕ್ಕಾಚಾರ. ಆ ತಂತ್ರದ ಗುಟ್ಟೇನು ಅನ್ನೋದನ್ನು ಡೀಟೇಲ್ಲಾಗಿ ನೋಡೋದಾದ್ರೆ..
ಸಿ.ಎಂ ಇಬ್ರಾಹಿಂ ಮತ್ತು ರೋಷನ್ ಬೇಗ್ ಜೋಡಿಯ ಈ ತಂತ್ರದ ಬಗ್ಗೆ ಗೊತ್ತಾಗ್ತಿದ್ದಂತೆ ಗುಡುಗಿರೋ ಸಿದ್ದರಾಮಯ್ಯ, ಗೆಲುವು-ಸೋಲು ಮತದಾರರ ಕೈಯಲ್ಲಿದೆಯೇ ವಿನಃ ಯಾರೋ ಇಬ್ಬರು ವ್ಯಕ್ತಿಗಳ ಕೈಯಲ್ಲಿಲ್ಲ ಅಂತ ಗುಡುಗಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 1967ರಿಂದ ನಡೆದ 13 ಚುನಾವಣೆಗಳಲ್ಲಿ 9 ಬಾರಿ ಮುಸ್ಲಿಂ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಈ ಪೈಕಿ ಐದು ಬಾರಿ ಗೆದ್ದಿರೋದು ರೋಷನ್ ಬೇಗ್. ಆದ್ರೆ 2019ರಲ್ಲಿ ನಡೆದ ಬೈ ಎಲೆಕ್ಷನ್"ನಲ್ಲಿ ರೋಷನ್ ಬೇಗ್ ಬಿಜೆಪಿಯನ್ನು ಬೆಂಬಲಿಸಿದ್ರೂ, ಕಾಂಗ್ರೆಸ್'ನಿಂದ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ 13 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ರು. ಇನ್ನು ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಆಪ್ತ ಭೈರತಿ ಸುರೇಶ್ 2018ರ ಚುನಾವಣೆಯಲ್ಲಿ 21 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ರು. ಈಗ ಈ ಎರಡೂ ಕ್ಷೇತ್ರಗಳ ಮೇಲೆ ಸಿದ್ದು ಶತ್ರುಗಳ ಕಣ್ಣು ಬಿದ್ದಿದ್ದು, ಮುಂದೇನು ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ.
"
