ಸಚಿವರೋರ್ವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಯಾಬಿನೆಟ್‌ನಿಂದ ಹೊರ ನಡೆದಿದ್ದಾರೆ. ಅಲ್ಲದೇ ಸಾರ್ವನಿಕವಾಗಿಯೇ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
ಕೋಲ್ಕತಾ (ಜ.23): ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದ ಮತ್ತೊಂದು ವಿಕೆಟ್ ಪತನವಾಗಿದೆ. ಅರಣ್ಯ ಸಚಿವ ರಾಜೀವ್ ಬ್ಯಾನರ್ಜಿ ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜೀವ್, ‘ಪಕ್ಷದ ಕೆಲವು ನಾಯಕರು ವೈಯಕ್ತಿಕವಾಗಿ ತೀವ್ರ ನೋವುಂಟು ಮಾಡಿದ್ದರಿಂದ ನೊಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. 2 ವರ್ಷದ ಹಿಂದೆ ನನ್ನ ಖಾತೆ ಬದಲಾವಣೆ ಮಾಡಿದ್ದು ನೋವು ತಂದಿತ್ತು’ ಎಂದು ಹೇಳಿದರು. ಅಲ್ಲದೆ, ಇಂಥ ದಿನ ಬರುವುದು ಎಂದು ಎಣಿಸಿರಲಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲೇ ಅತ್ತರು.
ಬಿಎಸ್‌ಎಫ್‌ನಿಂದ ನಿರ್ದಿಷ್ಟ ಪಕ್ಷಕ್ಕೆ ಮತಕ್ಕೆ ಬೆದರಿಕೆ: ಟಿಎಂಸಿ ಗಂಭೀರ ಆರೋಪ! ..
ಆದರೆ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡುವ ಉದ್ದೇಶವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ರಾಜೀವ್ ಉತ್ತರಿಸಲು ನಿರಾಕರಿಸಿದರು.
ಈ ನಡುವೆ ಅತೃಪ್ತ ಶಾಸಕ ಬೈಸಾಖಿ ದಾಲ್ಮಿಯಾ ಅವರನ್ನು ಟಿಎಂಸಿ, ಶುಕ್ರವಾರ ಉಚ್ಚಾಟಿಸಿದೆ.
ಮಮತಾ ಸಂಪುಟದಲ್ಲಿದ್ದ ಸುವೇಂದು ಅಧಿಕಾರಿ ಸೇರಿದಂತೆ ಈಗಾಗಲೇ ಹಲವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರ ಮುಂದಿನ ನಡೆಯ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ.
