ಇಂದೋರ್(ಜು. 24) ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್ ಗೆ ಒಂದಾದ ಮೇಲೆ ಒಂದು ಆಘಾತ ಎದುರಾಗುತ್ತಲೇ ಇದೆ.  ಕಾಂಗ್ರೆಸ್ ಶಾಸಕ ನಾರಾಯಣ ಸಿಂಗ್ ಪಟೇಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ  ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಈ ಮೂಲಕ  230 ಜನರ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ  89ಕ್ಕೆ ಇಳಿದಿದೆ.  ಮಧ್ಯಪ್ರದೇಶದ 27  ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಾಗಿದೆ.

ಶಾಸಕ ದುರ್ಯೋಧನ ದರ್ಪ, ತಹಶೀಲ್ದಾರ್ ಗೆ ಕಿರುಕುಳ

ಐದು ದಿನಗಳ ಹಿಂದೆ ಪ್ರದ್ಯಮ್ನ ಸಿಂಗ್ ಲೋಧಿ ಕಾಂಗ್ರೆಸ್ ತೊರೆದಿದ್ದರು.  ಮೊದಲ ಸಾರಿ ಎಂಎಲ್ ಎ ಆಗಿದ್ದ ಪಟೇಲ್ ರಾಜೀನಾಮೆ ಸಲ್ಲಿಸಿದ್ದಾರೆ.  ನನ್ನ ಕ್ಷೇತ್ರ ಮಂಧಾಟಾದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಪಟೇಲ್ ತಿಳಿಸಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯಾ ಜತೆ ಕಾಂಗ್ರೆಸ್ ಶಾಸಕರು ತಂಡೊಪ ತಂಡವಾಗಿ ರಾಜೀನಾಮೆ ನೀಡಿದ್ದರು. ಆ ಪರ್ವ ಮುಂದುವರಿದೆ ಇದೆ.