ಮಮತಾ ರಾಜಕೀಯ ನಿರಾಶ್ರಿತ ಆಗುವುದು ನಿಶ್ಚಿತ| ಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಅಮಿತ್‌ ಶಾ

ಕೋಲ್ಕತಾ(ಜೂ.10): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಅಮಿತ್‌ ಶಾ, ‘ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಸಂಸ್ಕೃತಿ ಇದೆ. ಈ ಭಯದ ವಾತಾವರಣಕ್ಕೆ ಅಂಕುಶ ಹಾಕಲು ರಾಜ್ಯದಲ್ಲಿ ತನ್ನ ಬಲ ವರ್ಧಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ’ ಎಂದಿದ್ದಾರೆ.

'ಕೊರೋನಾ ಸಮರದಲ್ಲಿ ನಾವು ಕೊಂಚ ಎಡವಿರಬಹುದು, ಆದ್ರೆ ವಿಪಕ್ಷಗಳೇನು ಮಾಡಿದೆ?'

‘ಜನ ಸಂವಾದ’ ಬಿಜೆಪಿ ರಾರ‍ಯಲಿಯನ್ನು ಉದ್ದೇಶಿಸಿ ವಿಡಿಯೋ ಲಿಂಕ್‌ ಮೂಲಕ ಮಂಗಳವಾರ ಮಾತನಾಡಿದ ಅವರು, ‘ರಾಜಕೀಯ ಹಿಂಸಾಚಾರ ವೃದ್ಧಿಸುತ್ತಿರುವ ದೇಶದ ಏಕೈಕ ರಾಜ್ಯವೆಂದರೆ ಬಂಗಾಳ’ ಎಂದು ಆರೋಪಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮಮತಾ ವಿರೋಧಿಸಿದ್ದನ್ನು ಪ್ರಸ್ತಾಪಿಸಿದ ಶಾ, ‘ಬಂಗಾಳದ ಜನರು ಮಮತಾರನ್ನು ರಾಜಕೀಯ ನಿರಾಶ್ರಿತರನ್ನಾಗಿ ಮಾಡುತ್ತಾರೆ’ ಎಂದು ಭವಿಷ್ಯ ನುಡಿದರು.ಆಯುಷ್ಮಾನ್‌ ಭಾರತ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಮಮತಾ ಬೆಂಬಲಿಸುತ್ತಿಲ್ಲ. ಅಂಫಾನ್‌ ಚಂಡಮಾರುತದ ವೇಳೆಯೂ ಭ್ರಷ್ಟಾಚಾರ ಮಿತಿಮೀರಿದೆ. ಶ್ರಮಿಕ ರೈಲುಗಳನ್ನು ರಾಜ್ಯದೊಳಗೆ ಮಮತಾ ಬಿಟ್ಟುಕೊಳ್ಳಲಿಲ್ಲ. ಹೀಗಾಗಿ ಶ್ರಮಿಕ ವಲಸಿಗರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಕಿಡಿಕಾರಿದರು.