Asianet Suvarna News Asianet Suvarna News

ಹೆಚ್‌ಡಿಕೆ ಬ್ರಾಹ್ಮಣ ಸಿಎಂ ಅಸ್ತ್ರಕ್ಕೆ ಫುಲ್‌ಸ್ಟಾಪ್ ಹಾಕಿದ ಅಮಿತ್ ಶಾ, ಬೊಮ್ಮಾಯಿ ಮುಂದಿನ ಸಿಎಂ ಸುಳಿವು!

ಕಳೆದ ಕೆಲದಿನದಿಂದ ಹೆಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಅನ್ನೋ ಚರ್ಚೆ ಹುಟ್ಟುಹಾಕಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿದ್ದರು. ಆದರೆ ಇದಕ್ಕೆ ಅಮಿತ್ ಶಾ ಪುತ್ತೂರಿನಲ್ಲಿ ತಿರುಗೇಟು ನೀಡಿದ್ದಾರೆ. ಮತ್ತೊಮ್ಮೆ ಲಿಂಗಾಯಿತ ಮುಖ್ಯಮಂತ್ರಿ ಅನ್ನೋ ಪರೋಕ್ಷ ಸೂಚನೆಯನ್ನು ಅಮಿತ್ ಶಾ ನೀಡಿದ್ದಾರೆ. ಅಮಿತ್ ಶಾ ಭಾಷಣದ ಹೈಲೈಟ್ಸ್ ಇಲ್ಲಿದೆ.
 

Amit shah slams HD Kumaraswamy indirectly on Brahmin cm ask people to support Bommai for next term in Puttur Karnataka ckm
Author
First Published Feb 11, 2023, 6:26 PM IST | Last Updated Feb 11, 2023, 6:45 PM IST

ಪುತ್ತೂರು(ಫೆ.11): ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹೆಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಅಸ್ತ್ರ ಮುಂದಿಟ್ಟು ಕಟ್ಟಿಹಾಕುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಲಿಂಗಾಯಿತ ಸಮುದಾಯದ ಮತಗಳನ್ನು ಚದುರಿಸುವ ಭಾರಿ ರಣತಂತ್ರ ಹೂಡಿದ್ದರು. ಆದರೆ ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬ್ರಾಹ್ಮಣ ಸಿಎಂ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮುಂದಿನ ಬಾರಿಯೂ ಬಸವರಾಜ್ ಬೊಮ್ಮಾಯಿ ನಾಯಕತ್ವದಲ್ಲೇ ಬಿಜೆಪಿ ಮುಂದುವರಿಯಲಿದೆ ಅನ್ನೋ ಸುಳಿವನ್ನು ಅಮಿತ್ ಶಾ ನೀಡಿದ್ದಾರೆ. ಭಾಷಣದ ಅಂತ್ಯದಲ್ಲಿ ಬೊಮ್ಮಾಯಿ ಕೈ ಬಲಪಡಿಸಿ ಅನ್ನೋ ಸೂಚನೆ ನೀಡಿದ್ದಾರೆ. ಬೊಮ್ಮಾಯಿ ನಾಯಕತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ಲಿಂಗಾಯಿತ ಸಮುದಾಯಕ್ಕೆ ಮತ್ತೆ ಸಿಎಂ ಪಟ್ಟ ಅನ್ನೋದನ್ನು ಪರೋಕ್ಷವಾಗಿ ನೀಡಿದ್ದಾರೆ. 

ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಂಡ ಅಮಿತ್ ಶಾ, ರಾಜ್ಯ ರಾಜಕಾರಣದ ಹಲವು ವಿವಾದಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬ್ರಾಹ್ಮಣ ಸಿಂ, ಪೇಶ್ವೇ, ಗೋಡ್ಸೆ ಡಿಎನ್ಎ ಹೊಂದಿದವರನ್ನು ಸಿಎಂ ಮಾಡುಲ ಆರ್‌ಎಸ್‌ಎಸ್ ಮುಂದಾಗಿದೆ ಎಂದು ಮಾಜಿ ಸಿಎಂ ಹೆಚ್‌ಜಿ ಕುಮಾರಸ್ವಾಮಿ ಹೇಳಿದ್ದರು. ಆರಂಭದಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ಎಂಬಂತೆ ಬಿಂಬಿತವಾಗಿದ್ದರೂ, ಇದರ ರಾಜಕೀಯ ತಂತ್ರಗಾರಿ ಲಿಂಗಾಯಿತ ಸಮುದಾಯ ಮತ ಚದುರಿಸುವ ಮಾಸ್ಟರ್ ಪ್ಲಾನ್ ಅಡಗಿತ್ತು ಅನ್ನೋದು ಬಳಿಕ ಬಹಿರಂಗವಾಗಿತ್ತು. 

ಕಾಂತಾರ ಚಿತ್ರದ ಮೂಲಕ ಇಲ್ಲಿನ ಸಂಸ್ಕೃತಿ ಮನದಟ್ಟಾಯಿತು, ಪುತ್ತೂರಿನಲ್ಲಿ ಅಮಿತ್ ಶಾ ಭಾಷಣದ ಹೈಲೈಟ್ಸ್!

ಈ ಬಾರಿ ಆರ್‌ಎಸ್ಎಸ್ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ ನೀಡಲು ಮೀಟಿಂಗ್ ನಡೆಸಿದೆ. ಈ ಮೂಲಕ ಬಿಜೆಪಿ ಜೊತೆಗಿರುವ ಅತೀ ದೊಡ್ಡ ಸಮುದಾಯ ಲಿಂಗಾಯತಕ್ಕೆ ಏನೂ ಇಲ್ಲ. ಇತ್ತ ಬಿಎಸ್ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗಿದೆ. ಲಿಂಗಾಯಿತರ ಬದಲು ಬ್ರಾಹ್ಮಣ ಸಿಎಂ ಅನ್ನೋ ಹೇಳಿಕೆ ಬಿಜೆಪಿಯನ್ನು ಒಂದು ಹಂತಕ್ಕೆ ವಿಚಲಿತಗೊಳಿಸಿತ್ತು. ಆದರೆ ಇಂದು ಅಮಿತ್ ಶಾ, ಹೇಳಿಕೆ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.


 

ಅಮಿತ್ ಶಾ ಭಾಷಣ ಹೈಲೈಟ್ಸ್: -ಮುಂದಿನ ಚುನಾವಣೆಯಲ್ಲಿ ಸಿಎಂ ಬೊಮ್ಮಾಯಿ ಕೈ ಬಲಪಡಿಸಿ ಎಂದು ಹೇಳುವ ಮೂಲಕ ಕುಮಾರಸ್ವಾಮಿಯ ಬ್ರಾಹ್ಮಣ ಸಿಎಂ ಹೇಳಿಕೆಗೆ ಬ್ರೇಕ್ ಹಾಕುವ ಪ್ರಯತ್ನ. - ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ಟಿಪ್ಪು ಸುಲ್ತಾನ್ ಗೆ ಹೋಲಿಸಿದ ಅಮಿತ್ ಶಾ, ಬಿಜೆಪಿಯನ್ನು ರಾಣಿ ಅಬ್ಬಕ್ಕಗೆ ಹೋಲಿಕೆ - ಭಾಷಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಾಧನೆಯನ್ನು ಕೊಂಡಾಡಿದ ಅಮಿತ್ ಶಾ, - ಕೇಂದ್ರ ಬಜೆಟ್ಟಿನಲ್ಲಿ ಘೋಷಿಸಿದಂತೆ ಇನ್ನು ಮೂರು ವರ್ಷದಲ್ಲಿ ಎರಡು ಲಕ್ಷ ಗ್ರಾಮ ಪಂಚಾಯತಿಗಳಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯ ಗುರಿ - ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಹಾಕಿದಂತೆ, ಬಿಜೆಪಿಗೆ ಹಾಕಿದರೆ ನವ ಭಾರತ ನಿರ್ಮಾಣ, ಅಭಿವೃದ್ಧಿ

Latest Videos
Follow Us:
Download App:
  • android
  • ios