ನವದೆಹಲಿ(ನ.  22)  ಬಿಜೆಪಿ  ಐಟಿ ಸೆಲ್ ಮುಖ್ಯಸ್ಥ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಸರಿಯಾಗಿ ತಿವಿದಿದ್ದಾರೆ. 

'ಸೋನಿಯಾ ಮತ್ತು ರಾಹುಲ್ ಗೋವಾದಲ್ಲಿ ರಜಾ ದಿನ ಕಳೆಯುತ್ತಿದ್ದಾರೆ, ಪ್ರಿಯಾಂಕಾ ಹಿಮಾಚಲ ಪ್ರದೇಶದಲ್ಲಿ ಇದ್ದಾರೆ, ಗೃಹ ಸಚಿವ ಅಮಿತ್ ಶಾ ತಮಿಳುನಾಡಿನಲ್ಲಿ ಬಿಜೆಪಿ ಬಲಪಡಿಸುತ್ತಿದ್ದಾರೆ.. ಆದರೆ ಬಿಜೆಪಿ ಹೇಗೆ ಗೆಲ್ಲುತ್ತದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸುತ್ತಾರೆ'  ಎನ್ನುತ್ತ ಅಮಿತ್ ಶಾ ಕೊಂಡಾಡುತ್ತ ಗಾಂಧಿ ಕುಟುಂಬನ್ನು ವ್ಯಂಗ್ಯಮಾಡಿದ್ದಾರೆ .

ದೋಸ್ತಿ ಸರ್ಕಾರ ಬಿದ್ದುಹೋಗಿದ ದಿನಗಳಲ್ಲಿ ಏನಾಗಿತ್ತು?

'ಸೋನಿಯಾ ಮತ್ತು ರಾಹುಲ್ ಗೋವಾದಲ್ಲಿ ರಜಾ ದಿನ ಕಳೆಯುತ್ತಿದ್ದಾರೆ, ಪ್ರಿಯಾಂಕಾ ಹಿಮಾಚಲದಲ್ಲಿ ಇದ್ದಾರೆ, ರ್ಗರಹ ಸಚಿವ ಅಮಿತ್ ಶಾ ತಮಿಳುನಾಡಿನಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದು ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎಂಬ ವಿಚಾರ ಇಟ್ಟುಕೊಂಡು ಟಾಂಗ್ ನೀಡಿದ್ದಾರೆ.

ಎದೆಯಲ್ಲಿ ನೋವು ಕಾಣಿಸಿಕೊಂಡ ನಂತರ ಸೋನಿಯಾ ಅವರಿಗೆ ದೆಹಲಿ ಬಿಟ್ಟು ತೆರಳಲು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಸೋನಿಯಾ ಮತ್ತು ರಾಹುಲ್ ದಕ್ಷಿಣ ಗೋವಾಕ್ಕೆ ಬಂದಿದ್ದಾರೆ.

 ಬಿಹಾರ ಚುನಾವಣೆ ಪ್ರಚಾರದಲ್ಲಿ ಇದ್ದ ವೇಳೆ ರಾಹುಲ್ ಬ್ರೇಕ್ ತೆಗೆದುಕೊಂಡು ಹಿಮಾಚಲಕ್ಕೆ ಹೋಗಿದ್ದರು. ಸಹೋದರಿ ಪ್ರಿಯಾಂಕಾಳ ಹೊಚ್ಚ ಹೊಸ ಕ್ವಾಟೇಜ್ ನಲ್ಲಿ ದಿನ ಕಳೆದಿದ್ದರು.