ಮಲ್ಲಿಕಾರ್ಜುನ ಖರ್ಗೆ ರೋಹ್ತಾಸ್ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿಗೆ ನಿಗದಿತ ಸಮಯಕ್ಕಿಂತ 1.5 ತಾಸು ತಡವಾಗಿ ಆಗಮಿಸಿದ್ದರು. ಇದಕ್ಕೆ ಕಾರಣ ವಿವರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಮೊದಲು ಸಾಗಲು ಆದ್ಯತೆ ನೀಡಿ ನನ್ನನ್ನು ವಿಮಾನ ನಿಲ್ದಾಣದಲ್ಲಿ ತಮ್ಮನ್ನು ನಿಲ್ಲಿಸಿದ್ದೇ ಇದಕ್ಕೆ ಕಾರಣ
ಪಟನಾ: ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೋಹ್ತಾಸ್ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿಗೆ ನಿಗದಿತ ಸಮಯಕ್ಕಿಂತ 1.5 ತಾಸು ತಡವಾಗಿ ಆಗಮಿಸಿದ್ದರು. ಇದಕ್ಕೆ ಕಾರಣ ವಿವರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಮೊದಲು ಸಾಗಲು ಆದ್ಯತೆ ನೀಡಿ ನನ್ನನ್ನು ವಿಮಾನ ನಿಲ್ದಾಣದಲ್ಲಿ ತಮ್ಮನ್ನು ನಿಲ್ಲಿಸಿದ್ದೇ ಇದಕ್ಕೆ ಕಾರಣ, ಬಿಜೆಪಿಯವರು ಸದಾ ನಮ್ಮ ದಾರಿಗೆ ಅಡ್ಡ ಬರುತ್ತಾರೆ ಎಂದು ಕಿಡಿಕಾರಿದ್ದಾರೆ.
ಹೆಲಿಕಾಪ್ಟರ್‌ನಲ್ಲಿಯೇ ಸುಮಾರು 1.5 ಗಂಟೆ ಕಾಲ ಕಾದೆ
ಸಭೆಯಲ್ಲಿ ಮಾತನಾಡಿದ ಖರ್ಗೆ, ‘ನಾನು ಸಮಯಕ್ಕೆ ಸರಿಯಾಗಿ ತಲುಪುತ್ತಿದ್ದೆ. ಆದರೆ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿಗಳು ಮೋದಿ ವಿಮಾನ ಹೊರಡುವವರಗೆ ಕಾಯಿರಿ ಎಂದರು. ಹಾಗಾಗಿ ನಾನು ಹೆಲಿಕಾಪ್ಟರ್‌ನಲ್ಲಿಯೇ ಸುಮಾರು 1.5 ಗಂಟೆ ಕಾಲ ಕಾದೆ’ ಎಂದರು,
ಮೋದಿಯವರು ತಮ್ಮ ಹೆಚ್ಚಿನ ಸಮಯವನ್ನು ವಿದೇಶದಲ್ಲಿ ಕಳೆಯುತ್ತಾರೆ
ಇದೇ ವೇಳೆ ಅವರು, ‘ಮೋದಿಯವರು ತಮ್ಮ ಹೆಚ್ಚಿನ ಸಮಯವನ್ನು ವಿದೇಶದಲ್ಲಿ ಕಳೆಯುತ್ತಾರೆ. ಚುನಾವಣೆಯ ಸಮಯದಲ್ಲಿ ಮಾತ್ರ ದೇಶದಲ್ಲಿ ಕಾಣಿಸಿಕೊಳ್ಳುತ್ತಾರೆ. ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳಲ್ಲಿಯೂ ಪ್ರಚಾರ ಮಾಡಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದು ಹರಿಹಾಯ್ದರು.
