Asianet Suvarna News Asianet Suvarna News

ಉ.ಪ್ರ.ದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ? ಸಮೀಕ್ಷೆ ಭವಿಷ್ಯ

  • ಮುಂದಿನ ವರ್ಷ ನಡೆಯಲಿರುವ ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ
  • ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲಿದೆ
Again bjp Govt will come to power in uttar pradesh snr
Author
bengaluru, First Published Nov 17, 2021, 7:13 AM IST
  • Facebook
  • Twitter
  • Whatsapp

ನವದೆಹಲಿ (ನ.17): ಮುಂದಿನ ವರ್ಷ ನಡೆಯಲಿರುವ ದೇಶದ ಅತಿದೊಡ್ಡ ರಾಜ್ಯ (state) ಉತ್ತರ ಪ್ರದೇಶ (Uttara Pradesh) ವಿಧಾನಸಭೆ ಚುನಾವಣೆಯಲ್ಲಿ (Assembly election) ಆಡಳಿತಾರೂಢ ಬಿಜೆಪಿ (BJP) ಮತ್ತೆ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲಿದೆ ಎಂದು ‘ಟೈಮ್ಸ್‌ ನೌ’  ಚುನಾವಣಾ ಪೂರ್ವ ಸಮೀಕ್ಷೆ (Times Now ) ಭವಿಷ್ಯ ನುಡಿದಿದೆ.

ಈ ಪ್ರಕಾರ ಒಟ್ಟಾರೆ 403 ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಬಾರಿ 312 ಸ್ಥಾನ ಗೆದ್ದಿದ್ದ ಬಿಜೆಪಿ ಈ ಸಲ 239ರಿಂದ 245 ಸ್ಥಾನಗಳಲ್ಲಿ ಗೆದ್ದು, ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ. ಮುಂದಿನ ಸಲ ಅಧಿಕಾರಕ್ಕೆ ಏರಲೇಬೇಕು ಎಂಬ ಗುರಿಯೊಂದಿಗೆ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ (Akhilesh yadav) ನೇತೃತ್ವದ ಸಮಾಜವಾದಿ ಪಕ್ಷವು (SP) ಬಿಜೆಪಿಗೆ (BJP) ಪ್ರಬಲ ಪೈಪೋಟಿ ಒಡ್ಡುತ್ತಿದೆ. ಆದಾಗ್ಯೂ, 119ರಿಂದ 125 ಕ್ಷೇತ್ರಗಳಲ್ಲಿ ಜಯಿಸಲಷ್ಟೇ ಶಕ್ತವಾಗಲಿದೆ. ಇನ್ನು ಕಳೆದ ಬಾರಿ 47 ಸ್ಥಾನ ಗೆದ್ದಿದ್ದ ಮಾಯಾವತಿ (Mayavathi) ನೇತೃತ್ವದ ಬಿಎಸ್‌ಪಿ (bsp) ಈ ಸಲ ಕೇವಲ 28-32 ಸ್ಥಾನ ಮಾತ್ರ ಗೆಲ್ಲಲಿದೆ. ಪ್ರಿಯಾಂಕಾ ಗಾಂಧಿ (Priyanka gandhi) ನೇತೃತ್ವದಲ್ಲಿ ಅಖಾಡಕ್ಕೆ ಇಳಿದಿರುವ ಕಾಂಗ್ರೆಸ್‌ ಕೇವಲ 5-8 ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಯಶಸ್ವಿಯಾಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಟೈಮ್ಸ್‌ ನೌ ಸಮೀಕ್ಷೆ

ಪಕ್ಷ ಗೆಲ್ಲುವ ಸ್ಥಾನ

ಬಿಜೆಪಿ 239-245

ಎಸ್‌ಪಿ 119-125

ಬಿಎಸ್‌ಪಿ 28-32

ಕಾಂಗ್ರೆಸ್‌ 5-8

ಇತರರು 0-1

ಪಂಚರಾಜ್ಯಗಳಲ್ಲಿ ನಾಲ್ಕು ಬಿಜೆಪಿಗೆ : 

 2022ರ ಆರಂಭದಲ್ಲಿ ನಡೆಯಲಿರುವ ಪಂಚರಾಜ್ಯಗಳ ಚುನಾವಣೆ (Five State Elections) ಪೈಕಿ ಬಿಜೆಪಿ ಉತ್ತರಪ್ರದೇಶ ಸೇರಿ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವ ಸಾಧ್ಯತೆ ಇದೆ ಎಂದು ಚುನಾವಣಾಪೂರ್ವ ಸಮೀಕ್ಷೆಯೊಂದು (Pre-poll survey) ಭವಿಷ್ಯ ನುಡಿದಿದೆ. ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಂಭವವಿದೆ. ಆದರೆ ಪಂಜಾಬ್‌ನಲ್ಲಿ ಶೂನ್ಯ ಸಂಪಾದನೆ ಮಾಡುವ ನಿರೀಕ್ಷೆ ಇದೆ ಎಂದು ಎಬಿಪಿ ನ್ಯೂಸ್‌ ಹಾಗೂ ಸಿ-ವೋಟರ್‌ (ABP-CVoter Survey) ನಡೆಸಿರುವ ಸಮೀಕ್ಷೆ ತಿಳಿಸಿದೆ.

ಉತ್ತರಪ್ರದೇಶ ಮತ್ತೆ ಬಿಜೆಪಿ ವಶ

403 ಸದಸ್ಯ ಬಲದ ಉತ್ತರಪ್ರದೇಶ (Uttar Pradesh) ವಿಧಾನಸಭೆಯಲ್ಲಿ ಬಹುಮತಕ್ಕೆ 202 ಸ್ಥಾನಗಳು ಬೇಕು. 2017ರಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಭರ್ಜರಿ ಬಹುಮತ ಗಳಿಸಿತ್ತು. ಆದರೆ ಈ ಬಾರಿ ಬಿಜೆಪಿ (BJP) 108 ಸ್ಥಾನಗಳನ್ನು ಕಳೆದುಕೊಳ್ಳುವ ನಿರೀಕ್ಷೆ ಇದೆ. ಆದರೂ ಬಿಜೆಪಿ ಹಾಗೂ ಮಿತ್ರ ಪಕ್ಷಗಳು 217 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಸಮಾಜವಾದಿ ಪಕ್ಷ ಪುಟಿದೆದ್ದಿದ್ದು 156 ಸ್ಥಾನ ಗಳಿಸುವ ಸಾಧ್ಯತೆ ಇದ್ದರೆ, ಬಿಎಸ್ಪಿ 18 ಹಾಗೂ ಕಾಂಗ್ರೆಸ್‌ ಕೇವಲ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು.

ಪಂಜಾಬ್‌ನಲ್ಲಿ ಆಪ್‌:

117 ಸದಸ್ಯ ಬಲದ ಪಂಜಾಬ್‌ ವಿಧಾನಸಭೆಯಲ್ಲಿ ಬಹುಮತಕ್ಕೆ 59 ಸ್ಥಾನಗಳು ಬೇಕು. 2017ರಲ್ಲಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ (Amarinder Singh) ನೇತೃತ್ವದಲ್ಲಿ ಕಾಂಗ್ರೆಸ್‌ 77 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ 46 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ನಿರೀಕ್ಷೆ ಇದೆ. ಆದರೆ ಆಮ್‌ ಆದ್ಮಿ ಪಕ್ಷ 51 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಅಕಾಲಿ ದಳ 20 ಸ್ಥಾನ ಗಳಿಸುವ ಸಾಧ್ಯತೆ ಇದ್ದರೆ, ಬಿಜೆಪಿ ಶೂನ್ಯ ಸಂಪಾದನೆ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಉತ್ತರಾಖಂಡ ಬಿಜೆಪಿಗೆ:

70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಕಳೆದ ಬಾರಿ 57 ಸ್ಥಾನ ಗಳಿಸಿದ್ದ ಬಿಜೆಪಿ ತನ್ನ ಆಳ್ವಿಕೆಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಹೊರತಾಗಿಯೂ ಈ ಬಾರಿ 38 ಸ್ಥಾನ ಗೆದ್ದು ಬಹುಮತ ಗಳಿಸಲಿದೆ. ಆ ಪಕ್ಷಕ್ಕೆ ಕಾಂಗ್ರೆಸ್ಸಿನಿಂದ ತೀವ್ರ ಪೈಪೋಟಿ ಇದ್ದು 32 ಸ್ಥಾನಗಳನ್ನು ಗಳಿಸಲಿದೆ.

ಗೋವಾ ಬಿಜೆಪಿಗೆ:

40 ಶಾಸಕ ಬಲದ ಗೋವಾ ವಿಧಾನಸಭೆಯಲ್ಲಿ ಬಹುಮತಕ್ಕೆ 21 ಸ್ಥಾನ ಬೇಕು. 2017ರಲ್ಲಿ ಕೇವಲ 13 ಸ್ಥಾನ ಗೆದ್ದರೂ ಮಿತ್ರ ಪಕ್ಷಗಳ ಸಹಾಯದಿಂದ ರಾಜಕೀಯ ತಂತ್ರಗಾರಿಕೆ ಮೆರೆದು ಅಧಿಕಾರಕ್ಕೇರುವ ಮೂಲಕ ಕಾಂಗ್ರೆಸ್ಸಿಗೆ ಬಿಜೆಪಿ ಚಳ್ಳೆ ಹಣ್ಣು ತಿನ್ನಿಸಿತ್ತು. ಆದರೆ ಈ ಬಾರಿ ಬಿಜೆಪಿ 21 ಸ್ಥಾನ ಗಳಿಸುವ ನಿರೀಕ್ಷೆ ಇದೆ. 5 ಸ್ಥಾನ ಗೆದ್ದು ಆಪ್‌ ಇದೇ ಮೊದಲ ಬಾರಿಗೆ ಖಾತೆ ತೆರೆಯುವ ಸಾಧ್ಯತೆ ಇದೆ. ಕಾಂಗ್ರೆಸ್‌ ಕೇವಲ 4 ಸೀಟು ಗಳಿಸಿ ಮೂರನೇ ಸ್ಥಾನಕ್ಕೆ ಜಾರಲಿದೆ ಎಂದು ಸಿ-ವೋಟರ್‌ ಭವಿಷ್ಯ ಹೇಳಿದೆ.

ಮಣಿಪುರ ಮತ್ತೆ ಬಿಜೆಪಿಗೆ:

60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಬಹುಮತಕ್ಕೆ 31 ಸ್ಥಾನಗಳ ಅಗತ್ಯವಿದೆ. ಕಳೆದ ಬಾರಿ ಕೇವಲ 21 ಸ್ಥಾನ ಗೆದ್ದರೂ ಬಿಜೆಪಿ ಇತರೆ ಪಕ್ಷಗಳ ಸಹಾಯದಿಂದ ಅಧಿಕಾರಕ್ಕೇರಿತ್ತು. ಈ ಬಾರಿ 29ರವರೆಗೂ ಬಿಜೆಪಿ ಸ್ಥಾನ ಗಳಿಸಲಿದೆ. ಕಾಂಗ್ರೆಸ್ಸಿನಿಂದ ತುರುಸಿನ ಪೈಪೋಟಿ ಇದ್ದು, 24 ಸ್ಥಾನ ಗಳಿಸುವ ಸಂಭವ ಇದೆ ಎಂದು ಸಿ-ವೋಟರ್‌ ತಿಳಿಸಿದೆ.

Follow Us:
Download App:
  • android
  • ios