ಮುಂಬೈ, (ಜ.27): ಪಂಚ ಭಾಷಾ ನಟಿ ಹುಬ್ಬಳ್ಳಿ ಮೂಲಗಿದ ಇಶಾ ಕೊಪ್ಪಿಕರ್​​  ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.

 ಇಂದು (ಭಾನುವಾರ) ಮುಂಬೈನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ನೇತೃತ್ವದಲ್ಲಿ ಸೇರ್ಪಡೆಗೊಂಡರು. ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆಯೇ  ಇಶಾ ಕೊಪ್ಪಿಕರ್ ಅವರನ್ನು ಮಹಿಳಾ ಟ್ರಾನ್ಸ್‌ಪೋಟ್‌ ವಿಂಗ್‌ನ ಕಾರ್ಯಧ್ಯಕ್ಷರನ್ನಾಗಿ ನೇಮಿಸಲಾಗಿದೆ.

42 ವರ್ಷದ ಇಶಾ ಕೊಪ್ಪಿಕರ್​ ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮರಾಠಿ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.  ಕನ್ನಡದ ‘ಸೂರ್ಯವಂಶ’, ‘ಓ ನನ್ನ ನಲ್ಲೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸಿನಿಮಾದಿಂದ ರಾಜಕಾರಣಕ್ಕೆ ಎಂಟ್ರಿಕೊಟ್ಟಿರುವ ಇಶಾ ಕೊಪ್ಪಿಕರ್ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಅಥವಾ ಸ್ಟಾರ್​ ಪ್ರಚಾರಕಿಯಾಗಿ ಪಕ್ಷ ಸಂಘಟನೆಯಲದಲಿ ತೊಡಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.