Asianet Suvarna News Asianet Suvarna News

ಜೆಡಿಎಸ್‌ ಮೈತ್ರಿ ಬಗ್ಗೆ ವಾರದ ಬಳಿಕ ನಾನು ಹೇಳುವೆ: ಸೋಮಣ್ಣ

ಲೋಕಸಭಾ ಚುಣಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆ ವಿಚಾರ ಇನ್ನೂ ಪ್ರೀಮೆಚ್ಯೂರ್ಡ (ಅಪಕ್ವ) ಹಂತದಲ್ಲಿದೆ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

About the BJP JDS alliance after a week I will say says V Somanna at bengaluru rav
Author
First Published Sep 10, 2023, 10:53 AM IST

ಬೆಂಗಳೂರು (ಸೆ.10) : ಲೋಕಸಭಾ ಚುಣಾವಣೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆ ವಿಚಾರ ಇನ್ನೂ ಪ್ರೀಮೆಚ್ಯೂರ್ಡ (ಅಪಕ್ವ) ಹಂತದಲ್ಲಿದೆ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈತ್ರಿ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದೆ. ರಾಜ್ಯದಲ್ಲಿನ ಅಸ್ಥಿರತೆ ಹಾಗೂ ಡೋಲಾಯಮಾನ ಪರಿಸ್ಥಿತಿ ಹೋಗಲಾಡಿಸಲು ಪಕ್ಷದ ವರಿಷ್ಠರು ಮೈತ್ರಿ ಪ್ರಯತ್ನ ಮಾಡುತ್ತಿರಬಹುದು. ಅವರು ಏನು ಮಾತನಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇನ್ನೂ ಮೈತ್ರಿ ವಿಚಾರ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ. ಇನ್ನೊಂದು ವಾರ ಕಾದು ನೋಡೋಣ. ಬಳಿಕ ನಾನು ಪ್ರತಿಕ್ರಿಯಿಸುವೆ’ ಎಂದರು.

ಡಿಕೆಶಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ವಿ.ಸೋಮಣ್ಣ

‘ಕೆಲವು ವಿಚಾರಗಳು ಹಾಗೂ ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಬಗ್ಗೆ ರಾಷ್ಟ್ರೀಯ ನಾಯಕರಿಗೆ ಹೇಳಿದ್ದೇನೆ. ಅವರು ಸರಿಪಡಿಸುವ ಕೆಲಸ ಮಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ ಎಂಬ ಭಾವನೆ ಇದೆ. ಒಂದು ವೇಳೆ ಸರಿ ಹೋಗಲಿಲ್ಲ ಎಂದರೆ, ನನಗೇನೂ ನಷ್ಟವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸೋಮಣ್ಣ ಪ್ರತಿಕ್ರಿಯಿಸಿದರು.

‘ಪ್ರಧಾನಿ ನರೇಂದ್ರ ಮೋದಿ(PM Narendra modi) ಅವರು ಈ ದೇಶದ ಚಿತ್ರಣ ಬದಲಿಸಿದ್ದಾರೆ. ಬಲಿಷ್ಠ ಭಾರತ ವ್ಯವಸ್ಥೆ ಸದೃಢಗೊಳಿಸಿದ್ದಾರೆ. ದೇಶ ಇನ್ನಷ್ಟುಬಲಿಷ್ಠವಾಗಬೇಕು. ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಅಮೆರಿಕದ ಅಧ್ಯಕ್ಷರು ನರೇಂದ್ರ ಮೋದಿ ಅವರ ಮನೆಗೆ ಹೋಗುತ್ತಾರೆ ಎಂದರೆ ಹೆಮ್ಮೆಯ ವಿಚಾರ. ಇಂತಹ ದೇಶದಲ್ಲಿ ನಾವು ಹುಟ್ಟಿರುವುದಕ್ಕೆ ಸಂತೋಷ ಪಡಬೇಕು. ಮೋದಿ ಅವರ ದೈವಶಕ್ತಿ ಈ ದೇಶಕ್ಕೆ ಸಮರ್ಪಣೆಯಾಗಲಿ’ ಎಂದು ಹೇಳಿದರು. 

ಹಿರಿಯರ ಮಾತು ಕೇಳಿ 2 ಕಡೆ ಸ್ಪರ್ಧಿಸಿ ತಪ್ಪು ಮಾಡಿದೆ: ಮಾಜಿ ಸಚಿವ ಸೋಮಣ್ಣ

Follow Us:
Download App:
  • android
  • ios