ಕರ್ನಾಟಕದಲ್ಲಿ ಕೊರೋನಾ ಎಡರನೇ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಆದರೂ ಕೊವಿಡ್ ನಿಯಮದ ಪ್ರಕಾರವೇ ನಡೆದ ಮದುವೆಯಲ್ಲಿ ಭಾಗವಹಿಸಿದ್ದ 8 ಜನರಿಗೆ ಕೊರೋನಾ ಸೋಂಕು ಅಟ್ಯಾಕ್ ಆಗಿದೆ.

ಬಾಗಲಕೋಟೆ, (ಏ.27): ಮಾಜಿ ಶಾಸಕ ಪಿ.ಹೆಚ್.ಪೂಜಾರ ಪುತ್ರಿ ಮದುವೆ ಬಳಿಕ 8 ಜನರಿಗೆ ಕೊರೋನಾ ಸೋಂಕು ತಗುಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಗಲಕೋಟೆ ಮಾಜಿ ಶಾಸಕ ಪಿ.ಹೆಚ್.ಪೂಜಾರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಆದರೆ ಮದುವೆಗೆ ಬಂದಿದ್ದ ಎಂಟು ಜನರಿಗೆ ಈಗ ಕೊರೊನಾ ಸೋಂಕು ದೃಢಪಟ್ಟಿದೆ.

ಬಾಗಲಕೋಟೆ: ಕೊರೋನಾ ನಿಯಮ ಮೀರಿ ಜನರ ಸೇರಿಸಿ ಮದುವೆ, ಕೇಸ್ ದಾಖಲು

ಏಪ್ರಿಲ್ 24ರಂದು ಮಾಜಿ ಶಾಸಕದ ಪುತ್ರಿಯ ಮದುವೆ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮದುವೆ ನಡೆದಿತ್ತು. ಕೊವಿಡ್ ನಿಯಮದ ಪ್ರಕಾರವೇ ಮದುವೆ ಸಮಾರಂಭ ನಡೆದಿತ್ತು. ಆದರೂ ಕೂಡ 8 ಜನರಿಗೆ ಕೊರೊನಾ ತಗುಲಿದೆ. 

ಸದ್ಯ ಮಾಜಿ ಶಾಸಕರ ಮನೆ ಬಳಿ ಬ್ಯಾರಿಕೇಡ್‌ ಹಾಕಿ ಸೀಲ್‌ಡೌನ್‌ ಹಾಕಲಾಗಿದೆ. ಬಾಗಲಕೋಟೆಯ ಮನೆ ಮಿನಿ ಕಂಟೇನ್ಮೆಂಟ್ ಜೋನ್ ಆಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರ ಸಂಪರ್ಕ ಪತ್ತೆ ಹಚ್ಚುತ್ತಿದ್ದಾರೆ.