Asianet Suvarna News Asianet Suvarna News

Bharat Jodo Yatra: ರಾಹುಲ್‌ ಜತೆ 60 ಕಂಟೇನರ್‌ಗಳ ಯಾತ್ರೆ, ತಂಗಲು ಮಂಚ, ಸ್ನಾನಗೃಹ, ಎಸಿ ವ್ಯವಸ್ಥೆ..!

ಪಾದಯಾತ್ರಿಗಳು ಸಾಗುವ ದಾರಿಯುದ್ದಕ್ಕೂ 150 ದಿನಗಳ ಕಾಲ ಕಂಟೇನರ್‌ಗಳೂ ಸಾಥ್‌ 

60 Containers Yatra With Rahul Gandhi During Bharat Jodo Yatra grg
Author
First Published Sep 10, 2022, 1:00 AM IST

ಕನ್ಯಾಕುಮಾರಿ(ಸೆ.10):  ಪಕ್ಷ ಪುನರ್‌ ಸಂಘಟನೆ ನಿಟ್ಟಿನಲ್ಲಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್‌ ಜೋಡೋ ಪಾದಯಾತ್ರೆ ವೇಳೆ ನೂರಾರು ಯಾತ್ರಿಗಳ ಜೊತೆ 60 ಕಂಟೇನರ್‌ಗಳು ಕೂಡ ಸಾಗುತ್ತಿವೆ. ಪಾದಯಾತ್ರಿಗಳು ಸಾಗುವ ದಾರಿಯುದ್ದಕ್ಕೂ 150 ದಿನಗಳ ಕಾಲ ಈ ಕಂಟೇನರ್‌ಗಳೂ ಸಾಥ್‌ ನೀಡಲಿವೆ. ಹೌದು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗಲಿರುವ ಪಾದಯಾತ್ರೆ ವೇಳೆ ಕನಿಷ್ಠ 200 ಜನರು ಕಾಯಂ ಆಗಿ ಇರಲಿದ್ದಾರೆ. ಪ್ರತಿ ದಿನ ಯಾತ್ರೆಯ ಬಳಿಕ ಉಳಿದುಕೊಳ್ಳಲು ಇವರಿಗೆ ಹೋಟೆಲ್‌ಗಳ ಬದಲು ಕಂಟೇನರ್‌ಗಳ ವ್ಯವಸ್ಥೆ ಮಾಡಲಾಗಿದೆ.

ಸರಕು ಸಾಗಣೆಗಾಗಿ ಇರುವ ಕಂಟೇನರ್‌ಗಳನ್ನು ಸಣ್ಣ ಕೊಠಡಿಯ ರೂಪದಲ್ಲಿ ಸುಸಜ್ಜಿತಗೊಳಿಸಲಾಗಿದ್ದು, ಎಲ್ಲಾ 60 ಕಂಟೇನರ್‌ಗಳು ಹಾಸಿಗೆ, ಸ್ನಾನದ ಕೊಠಡಿ, ಸೋಫಾ, ಕುರ್ಚಿ ಸೇರಿ ಹಲವು ಸೌಲಭ್ಯಗಳನ್ನು ಒಳಗೊಂಡಿವೆ. ಪ್ರತಿ ಕಂಟೇನರ್‌ಗಳನ್ನೂ ಒಂದೊಂದು ಲಾರಿಯ ಮೇಲೆ ಕೂರಿಸಲಾಗಿದ್ದು, ಯಾತ್ರೆ ಮುಂದೆ ಸಾಗಿದಂತೆ ಲಾರಿಗಳು ಕೂಡ ಮುಂದೆ ಸಾಗುತ್ತವೆ.

ಕಾಂಗ್ರೆಸ್‌ನಿಂದ ಭಾರತ್ ಜೋಡೋ ಯಾತ್ರೆ, ರಾಜ್ಯ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ!

ರಾಹುಲ್‌ ಏಕಾಂಗಿ:

ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್‌ ಗಾಂಧಿ ಅವರಿಗೆ ಪ್ರತ್ಯೇಕ ಕಂಟೇನರ್‌ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಒಂದು ಮಂಚ, 1 ಸೋಫಾ, ಏರ್‌ ಕಂಡೀಶನರ್‌, ಸಣ್ಣದೊಂದು ರೆಫ್ರಿಜರೇಟರ್‌ ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಕೆಲವು ಕಂಟೇನರ್‌ಗಳಲ್ಲಿ 2, 4, 6 ಮತ್ತು ಗರಿಷ್ಠ 12 ಮಂಚಗಳನ್ನೂ ಅಳವಡಿಸಲಾಗಿದೆ. ಟೀವಿಗಳನ್ನು ಅಳವಡಿಸಲಾಗಿಲ್ಲ. ಆದರೆ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಕೆಲವು ಕಂಟೇನರ್‌ಗಳಲ್ಲಿ ಮಾತ್ರ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಒಳಭಾಗದಿಂದ ಇವು ಕಂಟೇನರ್‌ಗಳು ಎಂದು ಕಾಣದಂತೆ ಅಲಂಕಾರ ಮಾಡಲಾಗಿದೆ.

ಪ್ರತಿ ನಿತ್ಯ ಮುಂಜಾನೆ 8 ಗಂಟೆಗೆ ಈ ಟ್ರಕ್‌ಗಳು ಸಂಚಾರ ಆರಂಭಿಸಿ, ಈ ಮೊದಲೇ ನಿಗದಿಯಾದ ಸ್ಥಳಕ್ಕೆ ತೆರಳುತ್ತವೆ. ಎಲ್ಲಾ ಕಂಟೇನರ್‌ಗಳನ್ನು ಒಂದೆಡೆ ನಿಲ್ಲಿಸಬೇಕಾದ ಕಾರಣ, ಕನಿಷ್ಠ 2 ಎಕರೆ ಜಾಗ ಲಭ್ಯವಿರುವ ಯಾವುದಾದರೂ ಶಾಲಾ, ಕಾಲೇಜು ಬಳಿ ಇವುಗಳನ್ನು ನಿಲ್ಲಿಸಲಾಗುತ್ತದೆ. ಇವುಗಳ ನಿರ್ವಹಣೆ, ಸ್ವಚ್ಛತೆಗೆಂದೇ ಪ್ರತ್ಯೇಕ ಸಿಬ್ಬಂದಿ ಇದ್ದು, ಬೆಳಗೆ ಯಾತ್ರಾರ್ಥಿಗಳು ಪಾದಯಾತ್ರೆಗಾಗಿ ಕಂಟೇನರ್‌ನಿಂದ ತೆರಳುತ್ತಿದ್ದಂತೆ ಅವುಗಳನ್ನು ಸ್ವಚ್ಛಗೊಳಿಸಿ ಮತ್ತೆ ಬಳಕೆಗೆ ಸಜ್ಜು ಮಾಡಲಾಗುತ್ತದೆ.

Bharat Jodo Yatra: ದೇಶದ ಜನರನ್ನು ಒಗ್ಗೂಡಿಸಲು ಭಾರತ ಜೋಡೋ ಪಾದಯಾತ್ರೆ: ಹೆಬ್ಬಾಳಕರ

ಸಾಮಾನ್ಯವಾಗಿ ಖಾಲಿ ಜಾಗದಲ್ಲಿ ಅರ್ಧ ಚಂದ್ರಾಕಾರದಲ್ಲಿ ವಾಹನಗಳನ್ನು ನಿಲ್ಲಿಸಿ ನಡುವಿನ ಖಾಲಿ ಜಾಗದಲ್ಲಿ ಮ್ಯಾಟ್‌ಗಳನ್ನು ಹಾಕಲಾಗುತ್ತದೆ. ಇದನ್ನು ಆಹಾರ ಸೇವನೆಗೆ, ವಿರಾಮಕ್ಕೆ, ಚರ್ಚೆಗೆ, ಯೋಗಾಭ್ಯಾಸ, ವ್ಯಾಯಾಮ ಮಾಡಲು ಬಳಕೆ ಮಾಡಲಾಗುತ್ತದೆ.

- ಕನ್ಯಾಕುಮಾರಿಯಿಂದ ಕಾಶ್ಮೀರವರೆಗೂ ರಾಹುಲ್‌ ಜತೆಗೇ ಸಂಚಾರ
- 150 ದಿನ ನಡೆಯಲಿರುವ ರಾಹುಲ್‌ ‘ಭಾರತ್‌ ಜೋಡೋ’ ಯಾತ್ರೆ
- ರಾಹುಲ್‌ ಹಾಗೂ ಇತರ ಗಣ್ಯ ನಾಯಕರ ವಸತಿಗೆ ಕಂಟೇನರ್‌ ವ್ಯವಸ್ಥೆ
- ಹಾಸಿಗೆ, ಸ್ನಾನಗೃಹ, ಸೋಫಾ, ಕುರ್ಚಿ ಹೊಂದಿರುವ ಕಂಟೇನರ್‌ಗಳು
- ಪ್ರತಿ ಕಂಟೇನರ್‌ ಒಂದೊಂದು ಲಾರಿ ಮೇಲೆ ನಿಯೋಜಿಸಿ ಸಂಚಾರ
- ರಾಹುಲ್‌ಗೆ ಮಾತ್ರ ಎ.ಸಿ. ಸೌಲಭ್ಯ ಇರುವ ಪ್ರತ್ಯೇಕ ಕಂಟೇನರ್‌
- ಉಳಿದ ಕಂಟೇನರ್‌ಗಳಲ್ಲಿ 2, 4, 6, 12 ಮಂಚ ಅಳವಡಿಸಿ ವ್ಯವಸ್ಥೆ
- ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಕಂಟೇನರ್‌ ಸಂಚಾರ ಶುರು
- ಯಾತ್ರೆ ತಲುಪುವ ಊರಿಗೆ ಮೊದಲೇ ಹೋಗಿ ತಂಗಲಿರುವ ವಾಹನ
- ಇವುಗಳನ್ನು ಅರ್ಧಚಂದ್ರಾಕಾರದಲ್ಲಿ ನಿಲ್ಲಿಸಲು 2 ಎಕರೆ ಬೇಕು
- ಅದಕ್ಕಾಗಿ ಶಾಲಾ- ಕಾಲೇಜು ಮೈದಾನಗಳ ಬಳಿ ಇವುಗಳ ನಿಯೋಜನೆ
- ಕಂಟೇನರ್‌ ಮುಂಭಾಗದಲ್ಲಿ ಮ್ಯಾಟ್‌ ಹಾಕಿ ಚರ್ಚೆ, ಯೋಗಾಭ್ಯಾಸ
 

Follow Us:
Download App:
  • android
  • ios