Asianet Suvarna News Asianet Suvarna News

ಎಚ್‌ಡಿಕೆ ಮನೆಯಲ್ಲಿ 2023ರ ಚುನಾವಣೆಗೆ 123 ಅಭ್ಯರ್ಥಿಗಳ ಘೋಷಣೆ : ಮಹತ್ವದ ನಿರ್ಧಾರ

  • ಬಿಡದಿ ಸಮೀ​ಪದ ಕೇತ​ಗಾ​ನ​ಹಳ್ಳಿ ತೋಟದ ಮನೆ​ಯಲ್ಲಿ ನಾಲ್ಕು ದಿನ​ಗಳ ಕಾಲ ನಡೆ​ಯ​ಲಿ​ರುವ ಜೆಡಿ​ಎಸ್‌ ಮಿಷನ್‌-123 ಕಾರ್ಯಾ​ಗಾ​ರ
  • ಕಾರ್ಯಾ​ಗಾ​ರಕ್ಕೆ ಸೋಮವಾರ ಚಾಲನೆ ಸಿಗ​ಲಿದೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ  ಮಾಹಿತಿ
4 Days JDS Mission program in Ramanagara snr
Author
Bengaluru, First Published Sep 27, 2021, 7:52 AM IST

 ರಾಮನಗರ (ಸೆ.27):  ಬಿಡದಿ ಸಮೀ​ಪದ ಕೇತ​ಗಾ​ನ​ಹಳ್ಳಿ ತೋಟದ ಮನೆ​ಯಲ್ಲಿ ನಾಲ್ಕು ದಿನ​ಗಳ ಕಾಲ ನಡೆ​ಯ​ಲಿ​ರುವ ಜೆಡಿ​ಎಸ್‌ (JDS) ಮಿಷನ್‌-123 ಕಾರ್ಯಾ​ಗಾ​ರಕ್ಕೆ ಸೋಮವಾರ ಚಾಲನೆ ಸಿಗ​ಲಿದೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ (HD Kumaraswamy) ತಿಳಿ​ಸಿ​ದರು.

ಮುಂದಿನ ಚುನಾವಣೆಯನ್ನು (Election) ಗಮನದಲ್ಲಿಟ್ಟುಕೊಂಡು ಆಯೋಜಿಸಿರುವ ಈ ಕಾರ್ಯಾಗಾರದ ಕುರಿತು ಭಾನುವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಕುಮಾ​ರ​ಸ್ವಾಮಿ, ಈ ಕಾರ್ಯಾ​ಗಾ​ರ​ದಲ್ಲಿ 2023ರ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸ​ಲಿ​ರುವ 123 ಜೆಡಿ​ಎಸ್‌ ಅಭ್ಯ​ರ್ಥಿ​ಗಳ ಹೆಸರು ಘೋಷ​ಣೆ ಮಾಡ​ಲಾ​ಗು​ವುದು. 

ಮತ್ತೊಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಿಸಿದ ಕುಮಾರಸ್ವಾಮಿ

ಹಾಲಿ ಮತ್ತು ಮಾಜಿ ಶಾಸ​ಕರು, ಕಳೆದ ಬಾರಿ ಚುನಾ​ವ​ಣೆ​ಯಲ್ಲಿ ಸೋತ ಅಭ್ಯ​ರ್ಥಿ​ಗಳು ಹಾಗೂ ಮುಂದಿನ ಚುನಾ​ವ​ಣೆ​ಯ ಆಕಾಂಕ್ಷಿಗಳು ಕಾರ್ಯಾ​ಗಾ​ರ​ದಲ್ಲಿ ಪಾಲ್ಗೊ​ಳ್ಳು​ವರು. ವಿವಿಧ ಕ್ಷೇತ್ರ​ಗಳ 123 ಅಭ್ಯ​ರ್ಥಿ​ಗಳ ಹೆಸರು ಘೋಷಣೆ ಮಾಡಿ ಅವ​ರಿ​ಗೆಲ್ಲ ಗ್ರೀನ್‌ ಕಾರ್ಡ್‌ ವಿತರಣೆ ಮಾಡಲಾಗು​ವುದು. 

ಮುಂದಿನ ಜನವರಿವರೆಗೆ ಆ ಅಭ್ಯರ್ಥಿಗಳ ಕೆಲಸ ವೀಕ್ಷಿಸಲಾಗುವುದು. ಸಂಘಟನೆ ತೃಪ್ತಿ ತರದಿದ್ದರೆ ಹಳದಿ (ಪರಿಶೀಲನೆ) ಅಥವಾ ರೆಡ್‌ ಕಾರ್ಡ್‌ (ಟಿಕೆಟ್‌ ನಿರಾಕರಣೆ) ನೀಡಲಾಗುವುದು ಎಂದು ಹೇಳಿ​ದ​ರು.

ಜೆಡಿ​ಎಸ್‌ ವರಿಷ್ಠ ಎಚ್‌.ಡಿ.ದೇವೇ​ಗೌ​ಡ, ಹಿರಿಯ ನಾಯಕ ವೈ.ಎಸ್‌ .ವಿ.​ದ​ತ್ತಾ, ಸಂಸದ ಪ್ರಜ್ವಲ್‌ ರೇವಣ್ಣ , ಯುವ ನಾಯಕ ನಿಖಿಲ್‌ ಕುಮಾ​ರಸ್ವಾಮಿ ಹಾಗೂ ರಾಜ್ಯದ ಎಲ್ಲಾ ಕ್ಷೇತ್ರದ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ಕಾರ್ಯಾಗಾರದಲ್ಲಿ ಭಾಗಿಯಾಗಲಿದ್ದಾರೆ.

ಜೆಡಿಎಸ್ ತೋರುವ ಒಲವು ತೋರಿದ್ರಾ ಮುಖಂಡ

 

2023ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ (Congress) ಸಿದ್ಧತೆ ನಡೆಸಿದ್ದು, ಹಲವು ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಗಾಳ ಹಾಕಿದೆ. ಆದ್ರೆ, ಇದರ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಪಕ್ಷದಿಂದ ಅಂತರ ಕಾಯ್ದುಕೊಂಡು ಜೆಡಿಎಸ್‌ಗೆ ಹತ್ತಿರವಾಗುತ್ತಿದ್ದಾರೆ.

ಹೌದು....ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ (CM Ibrahim) ಅವರು ಯಾಕೋ ತಮ್ಮ ನಡೆ ಬದಲಿಸುವಂತೆ ಕಾಣಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಬ್ರಾಹಿಂ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ಒಡನಾಟ ಹೆಚ್ಚಾಗುತ್ತಿದೆ.

ಕುಮಾರಸ್ವಾಮಿ ಕೈಬಲಪಡಿಸಬೇಕಿದೆ: ಜೆಡಿಎಸ್‌ ಸೇರುವ ಮುನ್ಸೂಚನೆ ಕೊಟ್ರಾ ಕಾಂಗ್ರೆಸ್ ಹಿರಿಯ ನಾಯಕ

ನಿನ್ನೆ (ಸೆ.21 ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ (HD Kumaraswamy) ಜತೆ ವೇದಿಕೆ ಹಂಚಿಕೊಂಡಿದ್ದ ಇಬ್ರಾಹಿಂ, ಇಂದು (ಸೆ.22) ಬಿಡದಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿಯನ್ಜು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿದೆ.

Follow Us:
Download App:
  • android
  • ios